Today Horoscope: ಈ ದಿನ ಪ್ರದೋಷ ಪೂಜೆ ಮಾಡಿ..ನಿಮ್ಮ ಕಷ್ಟಗಳಿಂದ ಮುಕ್ತಿ ಹೊಂದಿ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಶುಕ್ಲ ಪಕ್ಷ, ಬುಧವಾರ, ತ್ರಯೋದಶಿ ತಿಥಿ, ಶತಭಿಷ ನಕ್ಷತ್ರ. 

ಈ ದಿನ ತ್ರಯೋದಶಿ ತಿಥಿ ಇರುವುದರಿಂದ ಪ್ರದೋಷ ಪೂಜೆಯನ್ನು ನೆರವೇರಿಸಬೇಕು. ಈ ದಿನ ಶಿವನಿಗೆ ಪೂಜೆ ಮಾಡಿದ್ರೆ ವಿಷ್ಣು ಸಂತೃಪ್ತನಾಗುತ್ತಾನೆ. ಹಾಗಾಗಿ ಇಂದು ಶಿವ ಕೇಶವರ ಪ್ರಾರ್ಥನೆ ಮಾಡಿ. ಪ್ರದೋಷ ಪೂಜೆಯಿಂದ ನಮ್ಮ ಕಷ್ಟ, ಸಂಕಷ್ಟಗಳು ದೂರವಾಗುತ್ತವೆ. ಮಿಥುನ ರಾಶಿಯ ವಸ್ತ್ರ ವ್ಯಾಪಾರಿಗಳಿಗೆ ಈ ದಿನ ಅನುಕೂಲಕರವಾಗಿದ್ದು, ಸಂಗಾತಿ ಸಹಕಾರ ಇರಲಿದೆ. ಪ್ರಯಾಣದಲ್ಲಿ ಸೌಖ್ಯವಿರಲಿದೆ. ಇಂದು ಈ ರಾಶಿಯವರು ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ: ಕರ್ನಾಟಕದಲ್ಲಿ ಬರ,ತಮಿಳುನಾಡು 4 ಲಕ್ಷ ಹೆಕ್ಟೇರ್ ಕೃಷಿ ಪ್ರದೇಶಕ್ಕೆ ಕಾವೇರಿ ನೀರು ಬಳಕೆ!

Related Video