ಉಪ್ಪಿ-ಕಿಚ್ಚನ 'ಕಬ್ಜ'ದಲ್ಲಿ ಬಿಗ್ ಸ್ಟಾರ್ಸ್ ಸಮಾಗಮ.!

ಕಬ್ಜ(Kabza) ಇಂಡಿಯನ್ ಸಿನಿ ಇಂಡಸ್ಟ್ರಿಯ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸೋದು ಪಕ್ಕಾ ಅನ್ನೋದು ಕನ್ಫಮ್. ಇದೀಗ ಈ ಕಬ್ಜಕ್ಕೆ ಮತ್ತಷ್ಟು ಆನೆ ಬಲ ಬಂದಿದೆ. ಕಬ್ಜ ಚಿತ್ರತಂಡಕ್ಕೆ ಬಾಲಿವುಡ್ ಸ್ಟಾರ್ ನವಾವ್ ಷಾ ಎಂಟ್ರಿ ಆಗಿತ್ತು. ಈಗ ಆರ್. ಚಂದ್ರು ಕಬ್ಜದಲ್ಲಿ ಹಂಗಾಮ ಸೃಷ್ಟಿಸೋಕೆ ಸಜ್ಜಾಗಿದ್ದಾರೆ.

First Published Oct 27, 2021, 2:01 PM IST | Last Updated Oct 27, 2021, 2:05 PM IST

ಭಾರತೀಯ ಬೆಳ್ಳಿತೆರೆ ಅಲಂಕರಿಸಿ ಕನ್ನಡಿಗರ ಟ್ಯಾಲೆಂಟ್ ಮತ್ತೊಮ್ಮೆ ತೋರಿಸೋಕೆ ರೆಡಿಯಾಗ್ತಿರೋ ಅಪ್ಪಟ ಕನ್ನಡಿಗರ ಸಿನಿಮಾ ಕಬ್ಜ. ಆರ್. ಚಂದ್ರು ಡೈರೆಕ್ಷನ್ ನಲ್ಲಿ ಸಿದ್ಧವಾಗುತ್ತಿರೋ ಕಬ್ಜ ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗು ನ್ಯಾಷನಲ್ ಐಕಾನ್ ಕಿಚ್ಚ ಸುದೀಪ್ ಜೋಡಿಯಾಗಿ ನಟಿಸುತ್ತಿದ್ದಾರೆ. ಅಲ್ಲಿಗೆ ಕಬ್ಜ ಇಂಡಿಯನ್ ಸಿನಿ ಇಂಡಸ್ಟ್ರಿಯ ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸೋದು ಪಕ್ಕಾ ಅನ್ನೋದು ಕನ್ಫಮ್. ಇದೀಗ ಈ ಕಬ್ಜಕ್ಕೆ ಮತ್ತಷ್ಟು ಆನೆ ಬಲ ಬಂದಿದೆ. ಕಬ್ಜ ಚಿತ್ರತಂಡಕ್ಕೆ ಬಾಲಿವುಡ್ ಸ್ಟಾರ್ ನವಾವ್ ಷಾ ಎಂಟ್ರಿ ಆಗಿತ್ತು. ಈಗ ಆರ್. ಚಂದ್ರು ಕಬ್ಜದಲ್ಲಿ ಹಂಗಾಮ ಸೃಷ್ಟಿಸೋಕೆ ಸಜ್ಜಾಗಿದ್ದಾರೆ.

'ಕಬ್ಜ' ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕೆಜಿಎಫ್' ವಿಲನ್

'ಕೆಜಿಎಫ್‌' ಸಿನಿಮಾದಲ್ಲಿ ರಾಜೇಂದ್ರ ದೇಸಾಯಿ ಅನ್ನೋ ರೋಲ್ ಎಷ್ಟು ಫೇಮಸ್ ಆಗಿದೆ ಅಂತ ನಿಮ್ಗೆ ಗೊತ್ತೇ ಇದೆ. ಕೆಜಿಎಫ್ನ ಚಿನ್ನದ ಕೋಟೆಗೆ ರಾಜನಾಗೋ ಕನಸು ಕಾಣೊ ರಾಜೇಂದ್ರ ದೇಸಾಯಿ ಪಾತ್ರ ನಿರ್ವಹಿಸಿದ್ದ, ಲಕ್ಷ್ಮೀಶ ಲಕ್ಷ್ಮಣ್‌ ಅಲಿಯಾಸ್ ಲಕ್ಕಿ ಲಕ್ಷ್ಮಣ್‌, ಕಬ್ಜಕ್ಕೆ ಎಂಟ್ರಿ ಕೊಟ್ಟಿದ್ದಾರೆ.  ಚಿತ್ರದ ನಿರ್ದೇಶಕ ಆರ್‌.ಚಂದ್ರು ಲಕ್ಕಿ ಲಕ್ಷ್ಮಣ್‌ ಅವರನ್ನು ಅಧಿಕೃತವಾಗಿ ಚಿತ್ರತಂಡಕ್ಕೆ ಸ್ವಾಗತಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. 

Video Top Stories