'ಕಬ್ಜ' ಚಿತ್ರಕ್ಕೆ ಎಂಟ್ರಿ ಕೊಟ್ಟ 'ಕೆಜಿಎಫ್' ವಿಲನ್

'ಕಬ್ಜ' ಚಿತ್ರಕ್ಕೆ 'ಕೆಜಿಎಫ್‌' ಸಿನಿಮಾದಲ್ಲಿ ರಾಜೇಂದ್ರ ದೇಸಾಯಿ ಪಾತ್ರ ನಿರ್ವಹಿಸಿದ್ದ, ಲಕ್ಷ್ಮೀಶ ಲಕ್ಷ್ಮಣ್‌ (ಲಕ್ಕಿ ಲಕ್ಷ್ಮಣ್‌) ಎಂಟ್ರಿ ಕೊಟ್ಟಿದ್ದಾರೆ.  ಚಿತ್ರದ ನಿರ್ದೇಶಕ ಆರ್‌.ಚಂದ್ರು ಲಕ್ಕಿ ಲಕ್ಷ್ಮಣ್‌ ಅವರನ್ನು ಅಧಿಕೃತವಾಗಿ ಚಿತ್ರತಂಡಕ್ಕೆ ಸ್ವಾಗತಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

Kannada Movie KGF villain who made entry for the movie kabza

ಆರ್​.ಚಂದ್ರು (R.Chandru) ಹಾಗೂ ಉಪೇಂದ್ರ (Upendra) ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ (Pan India) ಸಿನಿಮಾ 'ಕಬ್ಜ' (Kabza) ಪ್ರೋಮೋ ಮತ್ತು ಮೋಷನ್ ಪೋಸ್ಟರ್‌ಗಳು ಈಗಾಗಲೇ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ದೊಡ್ಡ ತಾರಾಬಳಗವೇ ಇದೆ. ಇದೀಗ ಚಿತ್ರತಂಡಕ್ಕೆ ಮತ್ತೊಂದು ಪಾತ್ರದ ಎಂಟ್ರಿ ಆಗಿದೆ. ಹೌದು! 'ಕಬ್ಜ' ಚಿತ್ರದಲ್ಲಿ 'ಕೆಜಿಎಫ್‌' (KGF) ಖಳನಾಯಕ ನಟಿಸುತ್ತಿದ್ದಾರೆ. ಈ ಬಗ್ಗೆ ಚಿತ್ರದ ನಿರ್ದೇಶಕ ಆರ್. ಚಂದ್ರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ (Instagram) ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 

'ಕಬ್ಜ' ಚಿತ್ರಕ್ಕೆ 'ಕೆಜಿಎಫ್‌' ಸಿನಿಮಾದಲ್ಲಿ ರಾಜೇಂದ್ರ ದೇಸಾಯಿ ಪಾತ್ರ ನಿರ್ವಹಿಸಿದ್ದ, ಲಕ್ಷ್ಮೀಶ ಲಕ್ಷ್ಮಣ್‌ (ಲಕ್ಕಿ ಲಕ್ಷ್ಮಣ್‌) ಎಂಟ್ರಿ ಕೊಟ್ಟಿದ್ದಾರೆ. ಚಿತ್ರದ ಐದನೇ ಹಂತದ ಚಿತ್ರೀಕರಣವು ಬೆಂಗಳೂರಿನ ಮಿನರ್ವ ಮಿಲ್‌ನಲ್ಲಿ ನಿರ್ಮಿಸಲಾಗಿರುವ ಅದ್ಧೂರಿ ಸೆಟ್‌ನಲ್ಲಿ ನಡೆಯುತ್ತಿದೆ. ಚಿತ್ರದ ನಿರ್ದೇಶಕ ಆರ್‌.ಚಂದ್ರು ಅವರು ಲಕ್ಕಿ ಲಕ್ಷ್ಮಣ್‌ ಅವರನ್ನು ಅಧಿಕೃತವಾಗಿ ಚಿತ್ರತಂಡಕ್ಕೆ ಸ್ವಾಗತಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
 

 
 
 
 
 
 
 
 
 
 
 
 
 
 
 

A post shared by R.Chandru (@rchandrumovies)


ಚಿತ್ರದಲ್ಲಿ 'ಭಾರ್ಗವ್‌ ಭಕ್ಷಿ' ಎಂಬ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್ (Kiccha Sudeep) ಕಾಣಿಸಿಕೊಳ್ಳಲಿದ್ದಾರೆ. ಆ ಮೂಲಕ 'ಮುಕುಂದ ಮುರಾರಿ' (Mukunda Murari) ಚಿತ್ರದ ನಂತರ ಮತ್ತೊಮ್ಮೆ ಉಪೇಂದ್ರ ಹಾಗೂ ಸುದೀಪ್‌ ತೆರೆ ಹಂಚಿಕೊಳ್ಳುತ್ತಿದ್ದಾರೆ. ಚಿತ್ರತಂಡಕ್ಕೆ ಇತ್ತೀಚೆಗಷ್ಟೇ ಬಾಲಿವುಡ್‌ನ ಖ್ಯಾತ ನಟ ನವಾಬ್‌ ಶಾ (Nawab Shah) ಪ್ರವೇಶಿಸಿದ್ದರು. ತಮಿಳಿನ 'ಐ' (I) ಚಿತ್ರದ ಖ್ಯಾತಿಯ ಕಾಮರಾಜನ್‌ (Kamarajan), ಟಾಲಿವುಡ್‌ ವಿಲನ್ ಜಗಪತಿ ಬಾಬು (Jagapati Babu), ರಾಹುಲ್‌ ದೇವ್‌, ಸುನಿಲ್‌ ಪುರಾಣಿಕ್‌, ಪ್ರಮೋದ್‌ ಶೆಟ್ಟಿ, ರಾಹುಲ್ ಜಗತಪ್, ಅನೂಪ್ ರೇವಣ್ಣ, ಜಾನ್ ಕೊಕ್ಕಿನ್, ನವೀನ್, ಕೋಟ ಶ್ರೀನಿವಾಸ್, ಜಯಪ್ರಕಾಶ್, ಕಾಟ್ ರಾಜು, ಸುಬ್ಬರಾಜು ಮುಂತಾದವರು ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. 

ಅದ್ಧೂರಿಯಾಗಿ ನಡೀತಿದೆ ಕಬ್ಜ ಶೂಟಿಂಗ್, ಉಪ್ಪಿ ಸೂಪರ್ ಲುಕ್

ಇನ್ನುಎಂ.ಟಿ.ಬಿ ನಾಗರಾಜ್ (M.T.B.Nagaraj) ಅರ್ಪಿಸುವ ಈ ಚಿತ್ರವು ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿದೆ. 'ಕಬ್ಜ' ಚಿತ್ರಕ್ಕೆ 'ಕೆಜಿಎಫ್' ಖ್ಯಾತಿಯ ರವಿ ಬಸ್ರೂರು (Ravi  Basrur) ಸಂಗೀತ ಸಂಯೋಜನೆಯಿದ್ದು, ಕಾರ್ಯಕಾರಿ ನಿರ್ಮಾಪಕರಾಗಿ ಮುನೀಂದ್ರ ಹಾಗೂ ಲೈನ್ ಪ್ರೊಡ್ಯೂಸರ್ ಆಗಿ ರಾಜಶೇಖರ್ ಕಾರ್ಯನಿರ್ವಹಿಸುತ್ತಿದ್ದಾರೆ. ಎ.ಜೆ.ಶೆಟ್ಟಿ ಕ್ಯಾಮೆರಾ ಕೈಚಳಕ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ ಹಾಗೂ ರವಿವರ್ಮ, ವಿಕ್ರಂಮೋರ್, ವಿಜಯ್, ಪೀಟರ್ ಹೆನ್ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. 

ಇವತ್ತು ಪ್ರಶ್ನೆ ಕೇಳುತ್ತೇನೆ, ನಾಳೆ ಉತ್ತರ ಹೇಳುತ್ತೇನೆ: ಉಪೇಂದ್ರ

ಈ ಚಿತ್ರದಲ್ಲಿ ಉಪೇಂದ್ರ ಎದುರಿಗೆ ದಕ್ಷಿಣ ಭಾರತದ ಅತಿ ದೊಡ್ಡ ಡಾನ್‌ ಭಗೇರನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇಲ್ಲಿ ಮೂರು ದಿನಗಳ ಶೆಡ್ಯೂಲ್‌ ಇದೆ. ಬಳಿಕ ಹೈದರಾಬಾದ್‌, ಮಂಗಳೂರಿನಲ್ಲೂ ನನ್ನ ಭಾಗದ ಶೂಟಿಂಗ್‌ ನಡೆಯಲಿದೆ. ಚಿತ್ರತಂಡದವರು ನನ್ನನ್ನು ಎಷ್ಟು ಚೆನ್ನಾಗಿ ನೋಡ್ಕೊಳ್ತಿದ್ದಾರೆ ಅಂದ್ರೆ ಬಾಲಿವುಡ್‌ಗಿಂತ ಹೆಚ್ಚು ಕಂಫರ್ಟ್‌ ಫೀಲ್‌ ಇಲ್ಲೇ ಸಿಗುತ್ತಿದೆ. ಚಂದ್ರು-ಉಪ್ಪಿ ಕಾಂಬಿನೇಶನ್‌ನಲ್ಲಿ ಮುಂದೆಯೂ ಚಿತ್ರ ಮಾಡುವ ಉತ್ಸಾಹ ಇದೆ ಎಂದು ಬಾಲಿವುಡ್‌ ನಟ ನವಾಬ್‌ ಶಾ ಇತ್ತಿಚೆಗಷ್ಟೇ ಹೇಳಿದ್ದರು.

"

Latest Videos
Follow Us:
Download App:
  • android
  • ios