ದರ್ಶನ್ ಬೆನ್ನುಬಿದ್ದಿರೋ ಬೆನ್ನುನೋವಿನ ಬೇತಾಳ, ದಶಕದ ಹಿಂದಿನ ಆ ಯಡವಟ್ಟು!
ದರ್ಶನ್ಗೆ ದಿನೇ ದಿನೇ ಬೆನ್ನು ನೋವು ಹೆಚ್ಚಾಗ್ತಾನೇ ಇದೆ. ಬಳ್ಳಾರಿಯ ಜೈಲಿನ ಒಂಟಿ ಕೋಣೆಯಲ್ಲಿ ದರ್ಶನ್ ರಾತ್ರಿಯಿಡಿ ನಿದ್ದೆಯಿಲ್ಲದೇ ಚಿತ್ರಹಿಂಸೆ ಪಡ್ತಾ ಇದ್ದಾರೆ. ಈಗಾಗ್ಲೈ ವೈದ್ಯರ ಸೂಚನೆ ಮೇರೆಗೆ ದರ್ಶನ್ಗೆ ಮೆಡಿಕಲ್ ಕಾಟ್, ಬೆಡ್, ದಿಂಬು ..
ಬಳ್ಳಾರಿ ಜೈಲಿನಲ್ಲರೋ ದರ್ಶನ್ ಬೆನ್ನು ನೋವಿನಿಂದ ಚಿತ್ರಹಿಂಸೆ ಪಡ್ತಾ ಇರೋ ಸಂಗತಿ ನಿಮಗೆ ಗೊತ್ತೇ ಇದೆ. ಈಗಾಗ್ಲೇ MRI ಸ್ಕ್ಯಾನಿಂಗ್ ಮಾಡಿ ಸರ್ಜರಿ ಮಾಡಿಸುವಂತೆ ಸೂಚನೆ ಕೊಟ್ಟಿದ್ದಾರೆ ವೈದ್ಯರು. ಹಾಗಾದ್ರೆ ಈ ಬೆನ್ನುನೋವು ದರ್ಶನ್ ಬೆನ್ನು ಬಿದ್ದಿದ್ಹೇಗೆ..? ಸಿನಿಮಾದಲ್ಲಿ ಅಷ್ಟೆಲ್ಲಾ ಸಾಹಸ ಮಾಡೋ ದರ್ಶನ್, ಇವತ್ತು ಎರಡೇ ಎರಡು ಬ್ಯಾಗ್ ಎತ್ತೋಕೆ ಪರದಾಡುವ ಸ್ಥಿತಿ ತಲುಪಿದ್ದು ಹೇಗೆ..? ಆ ಕುರಿತ ಎಕ್ಸ್ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
ದರ್ಶನ್ಗೆ ದಿನೇ ದಿನೇ ಬೆನ್ನು ನೋವು ಹೆಚ್ಚಾಗ್ತಾನೇ ಇದೆ. ಬಳ್ಳಾರಿಯ ಜೈಲಿನ ಒಂಟಿ ಕೋಣೆಯಲ್ಲಿ ದರ್ಶನ್ ರಾತ್ರಿಯಿಡಿ ನಿದ್ದೆಯಿಲ್ಲದೇ ಚಿತ್ರಹಿಂಸೆ ಪಡ್ತಾ ಇದ್ದಾರೆ. ಈಗಾಗ್ಲೈ ವೈದ್ಯರ ಸೂಚನೆ ಮೇರೆಗೆ ದರ್ಶನ್ಗೆ ಮೆಡಿಕಲ್ ಕಾಟ್, ಬೆಡ್, ದಿಂಬು ಕೊಡಲಾಗಿದೆ. ಆದ್ರೂ ದರ್ಶನ್ಗೆ ನೆಮ್ಮದಿಯಾಗಿ ನಿದ್ದೆ ಮಾಡಲಾಗ್ತಿಲ್ಲ..
ತುರ್ತಾಗಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಿ ಅಂತ ವೈದ್ಯರು ಸೂಚನೆ ನೀಡಿದ್ದಾರೆ. ಕೋರ್ಟ್ನಲ್ಲಿ ಅನುಮತಿ ಪಡೆದು ಬೆಂಗಳೂರಿನಲ್ಲಿ ಸರ್ಜರಿ ಮಾಡಿಸಿಕೊಳ್ಳೋ ಪ್ಲ್ಯಾನ್ನಲ್ಲಿ ದರ್ಶನ್ ಇದ್ದಾರೆ. ಆದ್ರೆ ಇದಕ್ಕೆ ಕೋರ್ಟ್ ಒಪ್ಪಿಗೆ ಕೊಡುತ್ತಾ..? ದರ್ಶನ್ ಬೆನ್ನು ನೋವಿನ ಚಿತ್ರಹಿಂಸೆಗೆ ಮುಕ್ತಿ ಸಿಗುತ್ತಾ ಕಾದುನೋಡಬೇಕು.