ಉಪ್ಪಿ ಫ್ಯಾನ್​ ಆದ್ರು Mr ಪರ್ಫೆಕ್ಟ್​​; ‘ಉಪ್ಪಿಗಿಂತ ರುಚಿ ಬೇರೆಯಿಲ್ಲ’ ಎಂದ ಆಮೀರ್ ಖಾನ್!

ಉಪೇಂದ್ರ ನಿರ್ದೇಶನದ UI ಸಿನಿಮಾ ಬಗ್ಗೆ ಬಾಲಿವುಡ್ ನಟ ಆಮೀರ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉಪೇಂದ್ರ ಅವರ ಅಭಿಮಾನಿ ಎಂದು ಹೇಳಿಕೊಂಡಿರುವ ಆಮೀರ್, UI ಚಿತ್ರದ ಟ್ರೈಲರ್ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಉಪೇಂದ್ರ ಧನ್ಯವಾದ ತಿಳಿಸಿದ್ದಾರೆ.

Vaishnavi Chandrashekar  | Published: Dec 13, 2024, 4:46 PM IST

ರಿಯಲ್ ಸ್ಟಾರ್ ಉಪೇಂದ್ರ ನಟನೆ ನಿರ್ದೇಶನದ UI ಸಿನಿಮಾ ರಿಲೀಸ್​ಗೆ ಇನ್ನೇನು ಕೆಲವೇ ದಿನಗಳು ಬಾಕಿ. ಉಪೇಂದ್ರ ನಿರ್ದೇಶನದ ಸಿನಿಮಾ ಅಂದ್ರೆ ಜನರಷ್ಟೇ ಅಲ್ಲ ಸೆಲೆಬ್ರಿಟಿಗಳು ಸಿನಿಮಾ ನೋಡೋದಕ್ಕೆ ಕಾತುರರಾಗಿರ್ತಾರೆ. ಸದ್ಯ ಬಾಲಿವುಡ್​​ನ ಮಿಸ್ಟರ್​ ಪರ್ಫೆಕ್ಟ್ ಆಮೀರ್ ಖಾನ್ ಕೂಡ UI ಬಗ್ಗೆ ಮಾತನಾಡಿದ್ದು ಉಪ್ಪಿಗಿಂತ ರುಚಿ ಬೇರೆ ಇಲ್ಲ ಅಂದಿದ್ದಾರೆ.ನಾನು ಉಪೇಂದ್ರ ಅವರ ಫ್ಯಾನ್ ಎಂದಿರೋ ಆಮೀರ್, ವಾರ್ನರ್ ನೋಡಿ ಸಖತ್ ಇಂಪ್ರೆಸ್ ಆಗಿದ್ದೀನಿ ಅಂದಿದ್ದಾರೆ. ಈ ವಿಡಿಯೋವನ್ನ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿರೋ ಉಪೇಂದ್ರ ಇದು ನನ್ನ ಡ್ರೀಮ್ ಕಂ ಟ್ರ್ಯೂ ಮೂಮೆಂಟ್ ಎಂದಿದ್ದು, ಆಮೀರ್​ಗೆ ಧನ್ಯವಾದ ಹೇಳಿದ್ದಾರೆ.

ಸ್ಮಿಮ್‌ ಸೂಟ್‌ ಹಾಕು ಎಂದು ಡೈರೆಕ್ಟರ್‌ ಹೇಳ್ದಾಗ, ಲಂಗಾ ಎತ್ತಿ ತೊಡೆ ತೋರಿಸಿದ್ರು ನಟಿ ಲಕ್ಷ್ಮೀ!

Read More...