'ಭಜರಂಗಿ 2' ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ: ಅಭಿಮಾನಿಗಳ ಜೊತೆ ಚಿತ್ರ ವೀಕ್ಷಿಸಿದ ಶಿವಣ್ಣ

ಸ್ಯಾಂಡಲ್​ವುಡ್‌ನ ಕರುನಾಡ ಚಕ್ರವರ್ತಿ  ಶಿವರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಭಜರಂಗಿ 2 ಚಿತ್ರ ಬಿಡುಗಡೆಯಾಗಿ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಹೀಗಾಗಿ ಶಿವಣ್ಣ ಅಭಿಮಾನಿಗಳೊಂದಿಗೆ ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದ್ದಾರೆ. 

First Published Nov 15, 2021, 12:48 PM IST | Last Updated Nov 15, 2021, 12:48 PM IST

ಸ್ಯಾಂಡಲ್​ವುಡ್‌ನ ಸೆಂಚುರಿ ಸ್ಟಾರ್  ಶಿವರಾಜ್ ಕುಮಾರ್ (Shivarajkumar) ಅಭಿನಯದ ಬಹುನಿರೀಕ್ಷಿತ 'ಭಜರಂಗಿ 2' (Bhajarangi 2) ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ಸಿನಿರಸಿಕರಿಂದ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ಚಿತ್ರ ರಿಲೀಸ್​ ಆದ ದಿನವೇ ಪುನೀತ್ ರಾಜ್​ಕುಮಾರ್ ( Puneeth Rajkumar) ನಿಧನದ ಸುದ್ದಿ ಎಲ್ಲರನ್ನೂ ದಿಗ್ಭ್ರಾಂತಿಗೊಳಿಸಿತ್ತು. ಹಾಗೂ ಅರ್ಧದಲ್ಲೇ  ಚಿತ್ರಮಂದಿರಗಳಿಂದ ಪ್ರೇಕ್ಷಕರು ಹೊರಬಂದಿದ್ದರು. ಪುನೀತ್‌ಗೆ ಗೌರವ ವಿದಾಯ ಸಲ್ಲಿಸುವ ಸಲುವಾಗಿ 'ಭಜರಂಗಿ 2' ನಿರ್ಮಾಪಕರು ಸಿನಿಮಾ ಪ್ರದರ್ಶನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿದ್ದರು. 

ಜೀವನದಲ್ಲಿ ಇದೇ ಮೊದಲು ನಾನು 5 ಗಂಟೆ ಶೋ ನೋಡುತ್ತಿರುವುದು: ಲೋಕಿ

ಹೀಗಾಗಿ ಅಭಿಮಾನಿಗಳ ಜತೆ ಸಿನಿಮಾ ನೋಡೋಕೆ ಶಿವಣ್ಣನಿಗೆ ಸಾಧ್ಯವಾಗಿರಲಿಲ್ಲ. ಈ ಕಾರಣಕ್ಕೆ ಅಭಿಮಾನಿಗಳೊಂದಿಗೆ (Fans) ಶಿವಣ್ಣ ಗಾಂಧಿನಗರದ ಅನುಪಮಾ ಚಿತ್ರಮಂದಿರದಲ್ಲಿ 'ಭಜರಂಗಿ 2' ಸಿನಿಮಾವನ್ನು ವೀಕ್ಷಿಸಿದ್ದಾರೆ. ಇನ್ನು ಶಿವಣ್ಣ ತನ್ನ ಇಡೀ ಕುಟುಂಬದೊಂದಿಗೆ ಈ ಚಿತ್ರವನ್ನು ವೀಕ್ಷಿಸಬೇಕಿತ್ತು. ಆದರೆ ಅಪ್ಪು ಅಗಲಿಕೆಯಿಂದ ಅದು ಸಾಧ್ಯವಾಗಿರಲಿಲ್ಲ. ಪತ್ನಿ ಗೀತಾ, ನಿರ್ದೇಶಕ ಎ.ಹರ್ಷ ಹಾಗೂ ಖಳನಾಯಕರಾದ ಸೌರವ್  ಲೋಕಿ ಹಾಗೂ ಚೆಲುವರಾಜು ಜೊತೆಗೆ ಚಿತ್ರಮಂದಿರದಲ್ಲಿ ನೋವಿನಿಂದಲೇ ಶಿವಣ್ಣ 'ಭಜರಂಗಿ 2' ಚಿತ್ರವನ್ನು ವೀಕ್ಷಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories