ಬೇರ ಇಂದು ರಾಜ್ಯಾದ್ಯಂತ ಬಿಡುಗಡೆ: ಧರ್ಮ ಸಂಘರ್ಷ ಜೊತೆಗೆ ಹಲವು ಅಂಶಗಳ ಬಗ್ಗೆ ಸಿನಿಮಾದಲ್ಲಿ ಬಿತ್ತರ

ಕರಾವಳಿ ಭಾಗದ ನೈಜ ಘಟನೆಯನ್ನು ಆಧರಿಸಿ ಬೇರ ಸಿನಿಮಾ ಮಾಡಲಾಗಿದೆ. ಚಿತ್ರದಲ್ಲಿ ಅಲ್ಲಿನ ಧರ್ಮ ಸಂಘರ್ಷದ ಜೊತೆಗೆ ಹಲವು ಅಂಶಗಳನ್ನು ಹೇಳಲಾಗಿದೆ.

Share this Video
  • FB
  • Linkdin
  • Whatsapp

ಈ ಹಿಂದೆ ಕಿರುತೆರೆಯಲ್ಲಿ ಧಾರಾವಾಹಿ ನಿರ್ದೇಶನದ ಮೂಲಕ ಗುರುತಿಸಿಕೊಂಡಿರುವ ವಿನು ಬಳಂಜ “ಬೇರ’ ಎಂಬ ಚಿತ್ರ ನಿರ್ದೇಶಿಸುವ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ಧಾರೆ. ಈ ಚಿತ್ರದ ಬಗ್ಗೆ ಈಗಾಗಲೇ ಟಾಕ್ ಶುರುವಾಗಿದ್ದು ಕಾಶ್ಮೀರ್ ಫೈಲ್ಸ್, ದಿ ಕೇರಳ ಸ್ಟೋರಿಯಂತೆ ಇದು ಕರಾವಳಿ ಸ್ಟೋರಿ ಎನ್ನುತ್ತಿದೆ ಚಿತ್ರತಂಡ. ಎರಡು ಧರ್ಮಗಳ ನಡುವಿನ ಸೂಕ್ಷ್ಮ ವಿಚಾರದ ತೊಳಲಾಟ ಚಿತ್ರದಲ್ಲಿದೆ. ಬೇರ ಇದು ಸಾವಿನ ವ್ಯಾಪಾರ ಎಂಬ ಟ್ಯಾಗ್‌ಲೈನ್‌ನನ್ನು ಹೊಂದಿದೆ. ಎಸ್ಎಲ್ವಿ ಕಲರ್ಸ್ ಬ್ಯಾನರ್‌ನಲ್ಲಿ ದಿವಾಕರ ದಾಸ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಸುಮನ್ ದತ್ತಣ್ಣ, ಯಶ್ ಶೆಟ್ಟಿ ಹರ್ಷಿಕಾ ಪೂಣಚ್ಚ ಮೊದಲಾದವರು ನಟಿಸಿದ್ದು ಮಣಿಕಾಂತ್ ಕದ್ರಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಇದನ್ನೂ ವೀಕ್ಷಿಸಿ: Adipurush Release: ಆದಿಪುರುಷ್ ಒಂದು ಟಿಕೆಟ್‌ ಬೆಲೆ ಎಷ್ಟು ಗೊತ್ತಾ?: ಕೇಳಿದ್ರೆ ಶಾಕ್‌ ಆಗ್ತೀರಾ ..!

Related Video