Asianet Suvarna News Asianet Suvarna News

ಪಾರ್ವತಮ್ಮನ ಗಂಡನಾಗಿ..ಹೇಗಿರ್ತಾರೆ ಸಿಎಂ..? ಸಿದ್ದು ಭೇಟಿಗೆ ಬಂದ ವಿಶೇಷ ಅತಿಥಿ ಯಾರು ಗೊತ್ತಾ?

ಅವಾರ್ಡ್ಸ್ ಕಾರ್ಯಕ್ರಮಕ್ಕೆ ವಿಶೇಷ ಅತಿಥಿ ಸಿದ್ದರಾಮಯ್ಯ 
ವಿದ್ಯಾರ್ಥಿಯಾಗಿದ್ದಾಗ ಸಿದ್ದರಾಮಯ್ಯ ಲವ್ ಮಾಡಿದ್ರಾ..?
ಸಿದ್ದರಾಮಯ್ಯನವರಿಗೆ ಏನೆಲ್ಲ ಅಡುಗೆ ಮಾಡಲು ಬರುತ್ತದೆ..? 
 

ಮೊನ್ನೆ ವೀಕೆಂಡ್‌ನಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅನುಬಂಧ ಅವಾರ್ಡ್ಸ್ (Anubandha Awards) ಕಾರ್ಯಕ್ರಮ ಪ್ರಸಾರವಾಯ್ತು. ಈ ಕಾರ್ಯಕ್ರಮ ಅದ್ದೂರಿಯಾಗಿ ಮೂಡಿ ಬಂದಿತು. ಹಾಗೆನೇ ಈ ಕಾರ್ಯಕ್ರಮವ ವಿಶೇಷತೆ ಏನೆಂದ್ರೆ, ಸಿಎಂ ಸಿದ್ದರಾಮಯ್ಯನವರನ್ನು(Siddaramaiah) ಇದಕ್ಕೆ ಆಹ್ವಾನಿಸಲಾಗಿತ್ತು. ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ವಿಶೇಷ ಆತಿಥ್ಯವನ್ನು ನೀಡಲಾಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯನವರನ್ನು ಭೇಟಿಯಾಗಲೆಂದೇ ವಿಶೇಷ ಅತಿಥಿಯೊಬ್ಬರು ಬಂದಿದ್ದರು. ಶಕ್ತಿ ಯೋಜನೆ(Shakti Scheme) ಲಾಂಚ್ ಸಂದರ್ಭದಲ್ಲಿ ತುಂಬಾನೇ ಫೇಮಸ್ ಆಗಿದ್ದ ಅತಿಥಿಯೊಬ್ಬರು ಈ ಕಾರ್ಯಕ್ರಮಕ್ಕೆ ಸಹ ಬಂದಿದ್ದರು. ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಅಡಿಯಲ್ಲಿ, ರಾಜ್ಯ ಸರ್ಕಾರಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಘೋಷಿಸಿತ್ತು ರಾಜ್ಯ ಸರ್ಕಾರ. ಈ ಯೋಜನೆ ಜಾರಿ ದಿನದಂದು ಉತ್ತರ ಕರ್ನಾಟಕದ ಅಜ್ಜಿಯೊಬ್ಬರು ಬಸ್ಸಿಗೆ ಹಣೆ ಮುಟ್ಟಿ ನಮಸ್ಕರಿಸುವ ಮೂಲಕ ಫೇಮಸ್ ಆಗಿದ್ದರು. ಆ ಅಜ್ಜಿ ಸಿದ್ದರಾಮಯ್ಯವರನ್ನು ಭೇಟಿಯಾಗಲು ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಬಂದಿದ್ದರು. ಸಿದ್ದರಾಮಯ್ಯನವರು ಈ ಕಾರ್ಯಕ್ರಮಕ್ಕೆ ಹೋದಾಗ ಕಲರ್ಸ್ ಕನ್ನಡ ವಾಹಿನಿಯವರು ತುಂಬಾ ವಿಶೇಷವಾದ ರೀತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸ್ವಾಗತಿಸಿದ್ದರು. ಸಿದ್ದರಾಮಯ್ಯವರು, ಕಲರ್ಸ್ ಕನ್ನಡದ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮಕ್ಕೆ ಹೋದಾಗ ಅವರ ಎಂಟ್ರಿ ಹೇಗಿತ್ತು ಅಂತ ಇಲ್ಲಿ ನೋಡಿ.

ಇದನ್ನೂ ವೀಕ್ಷಿಸಿ: Today Horoscope: ಇಂದು ಅನಂತ ಚತುರ್ದಶಿ ಇದ್ದು..ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ?