ಕನ್ನಡದಲ್ಲಿ ಸಿದ್ಧವಾಗುತ್ತಿದೆ ಮತ್ತೊಂದು ಅದ್ಧೂರಿ ಸಿನಿಮಾ..! ಬಹು ಕೋಟಿ ಚಿತ್ರಕ್ಕೆ ಸಾಕ್ಷಿಯಾಗ್ತಾರೆ ರೋರಿಂಗ್ ಸ್ಟಾರ್..!

ಉಗ್ರಂ ಒಂದೇ ಒಂದು ಸಿನಿಮಾ ನಟ ಶ್ರೀಮುರಳಿ ಸಿನಿ ಕರಿಯರ್‌ನೇ ಬದಲಿಸ್ತು. ರೋರಿಂಗ್ ಸ್ಟಾರ್ ಪಟ್ಟ ತಂದು ಕೊಡ್ತು. ಮಾಸ್ ಹೀರೋ ಅನ್ನೋ ಹೆಗ್ಗಳಿಗೆ ಸಿಕ್ತು. ಆ ನಂತರ ಆಗಿದ್ದೆಲ್ಲವನ್ನ ಶ್ರೀಮುರಳಿ ಫ್ಯಾನ್ಸ್ ನೋಡಿದ್ದಾರೆ. ಆದ್ರೆ ಈಗ ಅದಕ್ಕೂ ಮಿಗಿಲಾದದ್ದನ್ನ ಶ್ರೀಮುರಳಿಯ ಮತ್ತೊಂದು ಬಿಗ್ ವೆಂಚರ್‌ನಲ್ಲಿ ನೋಡ್ಬಹುದು. 

First Published Jan 7, 2024, 9:40 AM IST | Last Updated Jan 7, 2024, 9:40 AM IST

ಬಘೀರ, ಸ್ಯಾಂಡಲ್‌ವುಡ್(Sandalwood) ಸಿನಿ ಪಡಸಾಲೆಯಲ್ಲಿ ಈಗ ಟಾಕ್ ಆಫ್ ದಿ ಮ್ಯಾಟರ್ ಆಗಿದೆ. ಈ ಮೂವಿ ಮೇಲೆ ದಿನೇ ದಿನೇ ಹೊಸ ಆಸೆಗಳು ನಿರೀಕ್ಷೆಗಳು ಹುಟ್ಟುತ್ತಿವೆ. ಯಾಕಂದ್ರೆ ಬಘೀರಗೆ ಕಥೆ ಕೊಟ್ಟಿರೋದು ಉಗ್ರಂ ಕೆಜಿಎಫ್, ಸಲಾರ್ ಖ್ಯಾತಿಯ ಡೈರೆಕ್ಟರ್ ಪ್ರಶಾಂತ್ ನೀಲ್. ಸಿನಿಮಾಗೆ ಬಂಡವಾಳ ಹೂಡುತ್ತಿರೋದು ಕನ್ನಡದ ಪ್ರೈಡ್ ಅನಿಸಿಕೊಂಡಿರೋ ಹೊಂಬಾಳೆ ಪ್ರೊಡಕ್ಷನ್ ಹೌಸ್. ಪ್ರಶಾಂತ್ ನೀಲ್ ಕಲ್ಪನೆಯ ಬಘೀರನಿಗೆ(Bagheera) ಆಕ್ಷನ್ ಕಟ್ ಹೇಳ್ತಿರೋದು ಯಶ್‌ಗೆ ಲಕ್ಕಿ ಸಿನಿಮಾ ಕೊಟ್ಟ ಡಾಕ್ಟರ್ ಸೂರಿ. ಈ ಸಿನಿಮಾದ ಸ್ಯಾಂಪಲ್ಸ್‌ಗಳು ಬಘೀರನ ಕ್ಯಾಲಿಬರ್ ಬಗ್ಗೆ ಮಾತಾಡುವಂತೆ ಮಾಡಿದೆ. ಟೀಸರ್ ನೋಡಿಯೇ ಬಘೀರ ಪ್ಯಾನ್ ಇಂಡಿಯಾದಲ್ಲಿ(Pan India) ಸೌಂಡ್ ಮಾಡುತ್ತೆ ಅನ್ನೋ ಟಾಕ್ ಇದೆ. ಹೀಗಿರುವಾಗ ಬಘೀರ ಕ್ಲೈಮ್ಯಾಕ್ಸ್ ಬಗ್ಗೆ ಮತ್ತೊಂದು ಬಿಗ್ಎಕ್ಸ್ ಕ್ಲೂಸೀವ್ ಸುದ್ದಿ ನಿಮ್ಮ ಸಿನಿಮಾ ಹಂಗಾಮಕ್ಕೆ ಸಿಕ್ಕಿದೆ. ಅದೇ 'ಬಘೀರ' ಕ್ಲೈಮಾಕ್ಸ್ ಫೈಟ್ ಅನ್ನ ಅದ್ದೂರಿಗಾಗಿ ಸೆರೆ ಹಿಡಿಯಲಾಗುತ್ತಿದ್ದು, ಈ ಕ್ಲೈಮ್ಯಾಕ್ಸ್ ಖರ್ಚಿನಲ್ಲಿ ಒಂದು ಹೊಸ ಸಿನಿಮಾ ಮಾಡಬಹುದು ಅನ್ನೋದು. ಸಿನಿಮಾ ಅಂದ್ರೆನೆ ಹಾಗೆ ಅದ್ಧೂರಿಗಾಗಿ ಮೂಡಿ ಬರಬೇಕು ಅಂದ್ರೆ ಅಷ್ಟೇ ಕರ್ಚು ಮಾಡಬೇಕು. ಈಗ ಶ್ರೀಮುರಳಿಯ(Sri Murali) ಬಘೀರ ಕ್ಲೈಮ್ಯಾಕ್ಸ್ಅನ್ನ ಕೆಜಿಎಫ್ ಸಲಾರ್ ಕ್ಲೈಮ್ಯಾಕ್ಸ್ಗಿಂತೂ ಅದ್ದೂರಿಯಾಗಿ ಸೆರೆ ಹಿಡಿಯಲಾಗ್ತಿದೆ. ಈ ಕ್ಲೈಮ್ಯಾಕ್ಸ್ ಒಂದರ ಚಿತ್ರೀಕರಣಕ್ಕೆ ಬರೋಬ್ಬರಿ ಮೂರುವರೆ ಕೋಟಿ ಹಣವನ್ನ ಖರ್ಚು ಮಾಡಲಾಗ್ತಿದೆಯಂತೆ.

ಇದನ್ನೂ ವೀಕ್ಷಿಸಿ:  ಮಂಗಳೂರು ವಜ್ರದೇಹಿ ಮಠದ ಕೋಲದಲ್ಲಿ ರಿಷಬ್..! ಧೈರ್ಯ ಕಳೆದುಕೊಳ್ಳದಂತೆ ನಟನಿಗೆ ದೈವದ ಅಭಯ..!

Video Top Stories