ರಾಜ್ಯಾದ್ಯಂತ ಬ್ಯಾಡ್ ಮ್ಯಾನರ್ಸ್ ಸಿನಿಮಾ ಬಿಡುಗಡೆ..! ಟಫ್ ಪೊಲೀಸ್ ಕಾಪ್ ಆಗಿ ಮಿಂಚಿದ ಅಭಿಷೇಕ್ ಅಂಬರೀಶ್..!
ಇಂದು ರೆಬೆಲ್ ಸ್ಟಾರ್ ಅಂಬರೀಶ್ ಡೆತ್ ಆನಿವರ್ಸರಿ ಇದ್ದು, ಅಂಬಿ ನಿಧನ ಹೊಂದಿ 5 ವರ್ಷ ಕಳೆದಿದೆ. ಅಪ್ಪನ ಡೆತ್ ಆನಿವರ್ಸರಿ ದಿನ ಅವರ ನೆನಪನ್ನ ಹಚ್ಚ ಹಸಿರಾಗಿಡಬೇಕು ಅಂತ ಅಭಿಷೇಕ್ ತನ್ನ ಬ್ಯಾಡ್ ಮ್ಯಾನರ್ಸ್ ಸಿನಿಮಾ ರಿಲೀಸ್ ಮಾಡಿದ್ದಾರೆ.
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್(Abishek Ambareesh) ರೆಬೆಲ್ ಆಗಿ ಸ್ಯಾಂಡಲ್ ವುಡ್ ಸ್ಕ್ರೀನ್ ಮೇಲೆ ಬಂದಿದ್ದಾರೆ. ನಿರ್ದೇಶಕ ಸುಕ್ಕ ಸೂರಿ(Director Sukka Suri) ಡೈರೆಕ್ಷನ್‌ನಲ್ಲಿ ಪೊಲೀಸ್ ಸ್ಟೋರಿ ಕೆತ್ತಿರೋ ಸೂರಿ ಅಭಿಗೆ ಕಾಕಿ ತೊಡಿಸಿದ್ರು. ಅಭಿ ಬ್ಯಾಡ್ ಮ್ಯಾನರ್ಸ್ ನ ಪೊಲೀಸ್ ಆಫೀಸರ್ ಆಗಿ ಅಂಬಿ ಅಭಿಮಾನಿಗಳನ್ನ ಮಾಸ್ ಆಗಿ ರಂಜಿಸಿದ್ದಾರೆ. ಬ್ಯಾಡ್ ಮ್ಯಾನರ್ಸ್ ಸಿನಿಮಾ(Bad Manners Movie) ನೋಡಿದ ರೆಬೆಲ್ ಫ್ಯಾನ್ಸ್ ಸಿಕ್ಕಾಪಟ್ಟೆ ಖುಷಿ ಆಗಿದ್ದಾರೆ. ಇಂದು ಅಂಬರೀಶ್(Ambareesh) ನಿಧನ ಹೊಂದಿದ ದಿನ. ಹೀಗಾಗಿ ಅಪ್ಪನ ನೆನಪಿಗಾಗಿ ಅಭಿಷೇಕ್ ಬ್ಯಾಡ್ ಮ್ಯಾನರ್ಸ್ ಸಿನಿಮಾ ಕೊಟ್ಟಿದ್ದಾರೆ. 300 ಚಿತ್ರಮಂದಿರಗಳಲ್ಲಿ ಬ್ಯಾಡ್ ಮ್ಯಾನರ್ಸ್ ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಅಭಿಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ. ಆಭಿಯ ಆಕ್ಷನ್ ಧಮಾಕ ಬ್ಯಾಡ್ ಮ್ಯಾನರ್ಸ್ ಹೈಲೆಟ್. ಸೂರಿ ಮತ್ತೊಮ್ಮೆ ಮಾಸ್ ಕಥೆಯ ಕಿಕ್ ಕೊಟ್ಟಿದ್ದಾರೆ. ಬೆಂಗಳೂರಿನ ಸಂತೋಷ್ ಥಿಯೇಟರ್ ನಲ್ಲಿ ಅಭಿಷೇಕ್ .
ಇದನ್ನೂ ವೀಕ್ಷಿಸಿ: Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಶುಭ-ಅಶುಭ ?