
Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ ರಾಶಿಯವರಿಗೆ ಶುಭ-ಅಶುಭ ?
ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕಾರ್ತಿಕ ಮಾಸ, ಶುಕ್ಲ ಪಕ್ಷ, ಶನಿವಾರ, ತ್ರಯೋದಶಿ ತಿಥಿ, ಅಶ್ವಿನಿ ನಕ್ಷತ್ರ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ಇಂದು ವೈಕುಂಟ ಚತುರ್ದಶಿ ಇದ್ದು, ವಿಷ್ಣುವಿನ ಆರಾಧನೆ ಮಾಡಿ. ವಿಷ್ಣು ಸನ್ನಿಧಾನದಲ್ಲಿ ಸಹಸ್ರ ಪುಷ್ಪಾರ್ಚನೆ ಮಾಡಿಸಿ. ವೃಷಭ ರಾಶಿಯವರು ಇಂದು ಆಪ್ತರಿಗಾಗಿ ವ್ಯಯ ಮಾಡಲಿದ್ದಾರೆ. ವೃತ್ತಿಯಲ್ಲಿ ಅನುಕೂಲವಿದ್ದು, ದಾಂಪತ್ಯದಲ್ಲಿ ಭಿನ್ನಾಭಿಪ್ರಾಯ ಬರಲಿದೆ. ಇಂದು ನರಸಿಂಹ ಸ್ವಾಮಿಗೆ ತುಳಸಿ ಅರ್ಚನೆ ಮಾಡಿಸಿ. ಸಿಂಹ ರಾಶಿಯವರಿಗೆ ಇಂದು ದೈವಾನುಕೂಲ ಇರಲಿದೆ. ಸಾಧುಗಳ ದರ್ಶನ ಮಾಡುವ ಸಾಧ್ಯತೆ ಇದೆ. ಗುರುಗಳ ಭೇಟಿ, ತಂದೆ ಮಕ್ಕಳಲ್ಲಿ ಸಾಮರಸ್ಯವಿದ್ದು, ಪ್ರಯಾಣದಲ್ಲಿ ತೊಂದರೆಯಾಗುವ ಸಾಧ್ಯತೆ ಇದೆ.
ಇದನ್ನೂ ವೀಕ್ಷಿಸಿ: ಒಲ್ಲದ ಮನಸ್ಸಿನಿಂದ ಡಿಕೆ ಶಿವಕುಮಾರ್ ಸಿಬಿಐ ಕೇಸ್ ವಾಪಸ್ ಪಡೆಯಿತಾ ಸಿದ್ದರಾಮಯ್ಯ ಸಂಪುಟ?