Bachelor Party : ಬೆಳ್ಳಿತೆರೆ ಮೇಲೆ 'ಬ್ಯಾಚುಲರ್ ಪಾರ್ಟಿ' ಹಾವಳಿ..! ಹೇಗಿದೆ ಗೊತ್ತಾ ಯೋಗಿ-ದಿಗಂತ್ ಜೋಡಿ ಮೋಡಿ..?

ನಟ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಅಭಿನಯದ ಬ್ಯಾಚುಲರ್ ಪಾರ್ಟಿ ಸಿನಿಮಾ ರಿಲೀಸ್‌ ಆಗಿದೆ.
 

Share this Video
  • FB
  • Linkdin
  • Whatsapp

ನಟ ದಿಗಂತ್ ಹಾಗೂ ಲೂಸ್ ಮಾದ ಯೋಗಿ ಜೋಡಿ ಕನ್ನಡ ಸಿನಿ ಪ್ರೇಕ್ಷಕರಿಗೆ ಬ್ಯಾಚುಲರ್ ಪಾರ್ಟಿ (Bachelor Party movie)ಕೊಡೋಕೆ ಈ ವಾರ ತೆರೆ ಮೇಲೆ ಬಂದಿದ್ದಾರೆ. ಈ ಬ್ಯಾಚುಲರ್ ಪಾರ್ಟಿ ಹುಡುಗರಾದ ದಿಗಂತ್(Actor Diganth), ಯೋಗಿ(Yogesh) ಜೊತೆ ಅಚ್ಯೂತ್ ಕುಮಾರ್ ಕೂಡ ಸೇರಿಕೊಂಡಿದ್ದು, ಮಸ್ತ್ ಮನೊರಂಜನೆ ಕೊಡುತ್ತಿದ್ದಾರೆ. ಜೀವನದ ಜಂಜಾಟದಿಂದ ಬೇಸತ್ತು ರಿಲ್ಯಾಕ್ಸ್ ಆಗುವುದಕ್ಕೆ ಥಾಯ್ಲೆಂಡ್ ಪ್ರವಾಸ ಕೈಗೊಳ್ಳುವ 3 'ಬ್ಯಾಚುಲರ್'ಗಳ ಕಥೆ ಚಿತ್ರದಲ್ಲಿದೆ. ಈ ಸಿನಿಮಾವನ್ನ ಕಿರಿಕ್ ಪಾರ್ಟಿಯ ರಕ್ಷಿತ್ ಶೆಟ್ಟಿ(Rakshit Shetty) ನಿರ್ಮಾಣ ಮಾಡಿದ್ದು, ಕಿರಿಕ್ ಪಾರ್ಟಿಯಂತೆ ಬ್ಯಾಚುಲರ್ ಪಾರ್ಟಿ ಕೂಡ ಫಿಲ್ ಮಿಲ್ಸ್ ಎಂಟರ್ಟೈನರ್ ಅಂತ ಸಿನಿಮಾ ನೋಡಿದವರು ಹೇಳುತ್ತಿದ್ದಾರೆ. ಅಭಿಜಿತ್ ಮಹೇಶ್ ಆಕ್ಷನ್ ಕಟ್ ಹೇಳಿರೋ ಬ್ಯಾಚುಲರ್ ಪಾರ್ಟಿ ಸಿನಿಮಾ ನೋಡಿ ಕನ್ನಡದ ಸ್ಟಾರ್ಸ್ ಮೆಚ್ಚಿಕೊಂಡಿದ್ದಾರೆ.

ಇದನ್ನೂ ವೀಕ್ಷಿಸಿ: Chikkanna: 'ಉಪಾಧ್ಯಕ್ಷ' ಚಿಕ್ಕಣ್ಣನಿಗೆ ಸಿಕ್ತು ವಾರ್ಮ್ ವೆಲ್‌ಕಮ್..! ಸಿನಿಮಾ ನೋಡಿ ಖುಷಿ ಪಟ್ಟ ಸಿನಿ ಪ್ರೇಕ್ಷಕ..!

Related Video