170 ಚಿತ್ರಮಂದಿರಗಳಲ್ಲಿ ಬ್ಯಾಚುಲರ್ ಪಾರ್ಟಿ ಕಿಕ್..! ಹೀರೋ ಆಗಿ ಡೆಬ್ಯೂ ಆಗುತ್ತಿದ್ದಾರೆ ನಟ ಚಿಕ್ಕಣ್ಣ..!

ಈ ವಾರ ಸ್ಯಾಂಡಲ್‌ವುಡ್‌ ಬೆಳ್ಳಿತೆರೆ ಮೇಲೆ ಎರಡು ಅದ್ಭುತ ಸಿನಿಮಾಗಳು ರಿಲೀಸ್ ಆಗ್ತಿವೆ. ಒಂದ್ ಕಡೆ ನಟ ಯೋಗಿ ಹಾಗೂ ದಿಗಂತ್ ಬ್ಯಾಚುಲರ್ ಪಾರ್ಟಿ ಮಾಡೋಕೆ ಸಜ್ಜಾಗಿದ್ರೆ, ಮತ್ತೊಂದ್ ಕಡೆ ನಟ ಚಿಕ್ಕಣ್ಣ ಉಪಾಧ್ಯಕ್ಷರಾಗಿ ಪದಗ್ರಹಣ ಮಾಡುತ್ತಿದ್ದಾರೆ.

Share this Video
  • FB
  • Linkdin
  • Whatsapp

ಕನ್ನಡ ಸಿನಿ ಪ್ರೇಕ್ಷಕರು ಬ್ಯಾಚುಲರ್ ಪಾರ್ಟಿ ಸಿನಿಮಾ(Bachelor Party movie) ನೋಡಿ ಫುಲ್ ಪಾರ್ಟಿ ಮಾಡೋ ಟೈಂ ಬಂದಿದೆ. ನಟ ದಿಗಂತ್(Actor Diganth) ಹಾಗೂ ಯೋಗಿ( Yogi) ಜೋಡಿ ಈ ಪಾರ್ಟಿಗೆ ಸ್ಪೆಷಲ್ ಗೆಸ್ಟ್. ಕಿರಿಕ್ ಪಾರ್ಟಿ ಸಿನಿಮಾ ಮಾಡಿದ್ದ ರಕ್ಷಿತ್ ಶೆಟ್ಟಿ(Rakshit Shetty) ನಿರ್ಮಾಣದ ಸಿನಿಮಾ ಈ 'ಬ್ಯಾಚುಲರ್ ಪಾರ್ಟಿ'. ಇದೀಗ ಈ ಸಿನಿಮಾ ಜನವರಿ 26ರ ಗಣರಾಜ್ಯೋತ್ಸವದ ದಿನ ರಾಜ್ಯಾದ್ಯಂತ 170 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಬ್ಯಾಚುಲರ್ ಪಾರ್ಟಿ ಟ್ರೈಲರ್ ಹಿಟ್ ಆಗಿದೆ. ಕಾಮಿಡಿ ಜೊತೆ ಸ್ನೇಹ, ಪ್ರೀತಿಯ ಕಥೆ ಸಿನಿಮಾದಲ್ಲಿದೆ. ದಿಗಂತ್ ಯೋಗಿ ಜೊತೆ ಅಚ್ಯುತ್ ಕುಮಾರ್ ವಿಭಿನ್ನ ಪಾತ್ರ ಮಾಡಿದ್ದಾರೆ. ಜೀವನದ ಜಂಜಾಟದಿಂದ ಬೇಸತ್ತು ರಿಲ್ಯಾಕ್ಸ್ ಆಗುವುದಕ್ಕೆ ಥಾಯ್ಲೆಂಡ್ ಪ್ರವಾಸ ಕೈಗೊಳ್ಳುವ 3 'ಬ್ಯಾಚುಲರ್'ಗಳ ಕಥೆ ಚಿತ್ರದಲ್ಲಿದೆ. ಅಭಿಜಿತ್ ಮಹೇಶ್ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. 

ಇಷ್ಟು ದಿನ ಕಾಮಿಡಿ ಸ್ಟಾರ್ ಆಗಿದ್ದ ನಟ ಚಿಕ್ಕಣ್ಣ(Chikkanna) ಈಗ ಹೀರೋ ಆಗುತ್ತಿದ್ದಾರೆ. ಚಿಕ್ಕಣ ನಾಯಕ ನಟನಾಗಿ ಅಭಿನಯಿಸಿರೋ ಮೊದಲ ಸಿನಿಮಾ ಉಪಾಧ್ಯಕ್ಷ(Upadhyaksha movie). ಈ ಸಿನಿಮಾ ನಾಳೆ ಜನವರಿ 26ಕ್ಕೆ ರಾಜ್ಯಾದ್ಯಂತ 150 ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿದೆ. ಉಪಾಧ್ಯಕ್ಷ ಮಂಡ್ಯ ಮೈಸೂರು ಭಾಗದ ಹಳ್ಳಿ ಸೊಗಡಿನ ಅಪ್ಪ ಕಾಮಿಡಿ ಎಮೋಷನಲ್ ಸಿನಿಮಾವಾಗಿದೆ.

ಇದನ್ನೂ ವೀಕ್ಷಿಸಿ: Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ?

Related Video