Puneeth Ranjumar; ಪತಿಯ ಸಿನಿಮಾ ಟೀಸರ್ ಲಾಂಚ್ ಮಾಡಿದ ಅಶ್ವಿನಿ ಪುನೀತ್‌ರಾಜ್ ಕುಮಾರ್

ಮನಸ್ಸಿನಲ್ಲಿ ದೇವರಾಗಿ ಉಳಿದುಕೊಂಡಿರೋ ಅಪ್ಪು ಈಗ  ಪ್ರೇಕ್ಷಕರ ಮುಂದೆ ದೇವರ ರೂಪದಲ್ಲೇ ಬರ್ತಿದ್ದಾರೆ. ಅರೆ ಅದು ಹೇಗೆ ಸಾಧ್ಯ ಅಂತೀರ. ಲಕ್ಕಿ ಮ್ಯಾನ್ ಸಿನಿಮಾ ಮೂಲಕ ಅಪ್ಪು ದೇವರಾಗಿ ತೆರೆ ಮೇಲೆ ಬರ್ತಿದ್ದಾರೆ. 

Share this Video
  • FB
  • Linkdin
  • Whatsapp

ಮನಸ್ಸಿನಲ್ಲಿ ದೇವರಾಗಿ ಉಳಿದುಕೊಂಡಿರೋ ಅಪ್ಪು ಈಗ ಪ್ರೇಕ್ಷಕರ ಮುಂದೆ ದೇವರ ರೂಪದಲ್ಲೇ ಬರ್ತಿದ್ದಾರೆ. ಅರೆ ಅದು ಹೇಗೆ ಸಾಧ್ಯ ಅಂತೀರ. ಲಕ್ಕಿ ಮ್ಯಾನ್ ಸಿನಿಮಾ ಮೂಲಕ ಅಪ್ಪು ದೇವರಾಗಿ ತೆರೆ ಮೇಲೆ ಬರ್ತಿದ್ದಾರೆ. ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲ ಮದರಂಗಿ ಕೃಷ್ಣನ ಲೈಫ್ ಗೆ ಪುನೀತ್ ದೇವರಾಗಲಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈಗಾಗಲೇ ದೇವರಾಗಿ ಕೋಟ್ಯಾಂತರ ಜನರ ಮನಸ್ಸಿನಲ್ಲಿ ಉಳಿದುಕೊಂಡು ಬಿಟ್ಟಿದ್ದಾರೆ. ಆದ್ರೆ ಪುನೀತ್ ದೇವರು ಎಂದು ಕರೆಯುವ ಅಭಿಮಾನಿಗಳ ಮುಂದೆ ದೇವರಾಗಿ ಬರ್ತಿದ್ದಾರೆ. ಯೆಸ್ ಪುನೀತ್ ಅಭಿನಯದ ಕಟ್ಟಕಡೆಯ ಸಿನಿಮಾ ಲಕ್ಕಿ ಮ್ಯಾನ್ ರಿಲೀಸ್ ಗೆ ರೆಡಿಯಾಗಿದೆ. ಚಿತ್ರದ ಟೀಸರ್ ರಿಲಿಸ್ ಆಗಿದ್ದು ಟೀಸರ್ ನಲ್ಲಿ ಅಪ್ಪು ದೇವರಾಗಿ ಕಾಣಿಸಿಕೊಂಡಿದ್ದಾರೆ. ಜೇಮ್ಸ್ ಸಿನಿಮಾದಲ್ಲಿ ಪುನೀತ್ ವರ್ಜಿನಲ್ ವಾಯ್ಸ್ ಇಲ್ಲದೆ ಬೇಸರ ಮಾಡಿಕೊಂಡಿದ್ದರು ಫ್ಯಾನ್ಸ್. ಆದ್ರೆ ಲಕ್ಕಿ ಮ್ಯಾನ್ ಚಿತ್ರದ ಮೂಲಕ ನಿರ್ದೇಶಕ ನಾಗೇಂದ್ರ ಪ್ರಸಾದ್ ಅಭಿಮಾನಿ ದೇವರುಗಳಿಗಾಗಿ ಪುನೀತ್ ಅವ್ರ ಓರಿಜಿನಲ್ ವಾಯ್ಸ್ ಹೊತ್ತು ತರ್ತಿದ್ದಾರೆ.

Related Video