Asianet Suvarna News Asianet Suvarna News

ಟಾಲಿವುಡ್‌ನಲ್ಲಿ ಶುರುವಾಯ್ತು ಆಶಿಕಾ ಕ್ರೇಜ್..! ರಶ್ಮಿಕಾರಂತೆ ಮಿಂಚಿದ ಪಟಾಕಿ ಪೋರಿ !

ಸ್ಯಾಂಡಲ್‌ವುಡ್‌ನ ಪಟಾಕಿ ಪೋರಿ ಆಶಿಕಾ ರಂಗನಾಥ್ ತೆಲುಗು ನಟ ನಾಗಾರ್ಜುನ ಜೊತೆ 'ನಾ ಸಾಮಿ ರಂಗ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 
 

ಸ್ಯಾಂಡಲ್‌ವುಡ್‌ ಹೀರೋಯಿನ್ಸ್ ನೆರಮನೆಯವರ ಕಣ್ಣಲ್ಲಿ ಕಂಗೊಳಿಸುತ್ತಿದ್ದಾರೆ. ರಶ್ಮಿಕಾ ಮಂದಣ್ಣ ಬಳಿಕ ಶ್ರೀಲೀಲಾ ತೆಲುಗು ಸಿನಿಮಾಗಳಲ್ಲಿ ಶೈನ್ ಆಗ್ತಿದ್ದಾರೆ. ಶ್ರೀಲೀಲಾ ಬಳಿಕ ರುಕ್ಮಿಣಿ ವಸಂತ್, ಸಪ್ತಮಿ ಗೌಡ ಟಾಲಿವುಡ್‌ಗೆ(Tollywood) ಹೊರಟು ನಿಂತಿದ್ದಾರೆ. ಆ ಸಾಲಿಗೆ ಈಗ ಹೊಸ ಸೇರ್ಪಡೆ ಸ್ಯಾಂಡಲ್‌ವುಡ್‌ನ(Sandalwood) ಪಟಾಕಿ ಪೋರಿ ಆಶಿಕಾ ರಂಗನಾಥ್(Ashika Ranganath) ಸೇರಿದ್ದಾರೆ. ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಆಶಿಕಾ ಈಗ ಟಾಲಿವುಡ್‌ನಲ್ಲಿ ಹೊಳೆಯುತ್ತಿದ್ದಾರೆ. ಆಶಿಕಾ ತೆಲುಗು ನಟ ನಾಗಾರ್ಜುನ(Nagarjuna) ಜೊತೆ 'ನಾ ಸಾಮಿ ರಂಗ'(Na Sami Ranga movie) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದ ಪ್ರೋಮೋ ರಿಲೀಸ್ ಆಗಿದ್ದು, ಆಶಿಕಾ ವರಲಕ್ಷ್ಮಿ ತರ ಕಾಣಿಸಿಕೊಂಡಿದ್ದಾರೆ. ವಿಜಯ್ ಬಿನ್ನಿ ನಿರ್ದೇಶನದ ನಾ ಸಾಮಿ ರಂಗ ಸಿನಿಮಾದಲ್ಲಿ ಆಶಿಕಾ ಅಂದ ಚಂದದ ಜೊತೆ ಅಭಿನಯವನ್ನ ತೆರೆದಿಟ್ಟಿದ್ದು, ಟಾಲಿವುಡ್‌ನ ನಯಾ ಕ್ರಶ್ ಆಗೋ ಎಲ್ಲಾ ಚಾನ್ಸ್ ಆಶಿಕಾಗೆ ಇದೆ.

ಇದನ್ನೂ ವೀಕ್ಷಿಸಿ:  ಸ್ಯಾಂಡಲ್‌ವುಡ್‌ ಲಕ್ಕಿಗೆ ಡಿಸೆಂಬರ್ ತಿಂಗಳೇ ಲಕ್ಕಿ! ಡಿಸೆಂಬರ್ ಮೇಲೆ ಯಶ್‌ಗೆ ಯಾಕಿಷ್ಟು ನಂಬಿಕೆ..?

Video Top Stories