Gandhada Gudi: ಪುನೀತ್ ಇಲ್ಲದೆ ಅರಣ್ಯಕ್ಕೆ ಕಾಲಿಟ್ಟ ಗಂಧದ ಗುಡಿ ಟೀಮ್!

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ 'ಗಂಧದ ಗುಡಿ' ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡ ಮಣ್ಣಿನ ವೈಲ್ಡ್ ಲೈಫ್ ಕತೆ ಹೇಳೋ ಈ 'ಗಂಧದ ಗುಡಿ'ಯಲ್ಲಿ ಪವರ್ ಸ್ಟಾರ್ ಪುನೀತ್ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಈ ಕಿರು ಚಿತ್ರದ ಶೂಟಿಂಗ್ ಕಂಪ್ಲೀಟ್ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದಾರೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) 'ಗಂಧದ ಗುಡಿ' (Gandhada Gudi) ಕಿರು ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಕನ್ನಡ ಮಣ್ಣಿನ ವೈಲ್ಡ್ ಲೈಫ್ ಕತೆ ಹೇಳೋ ಈ 'ಗಂಧದ ಗುಡಿ'ಯಲ್ಲಿ ಪವರ್ ಸ್ಟಾರ್ ಪುನೀತ್ ಕೂಡ ಕಾಣಿಸಿಕೊಂಡಿದ್ದಾರೆ. ಆದರೆ ಈ ಕಿರು ಚಿತ್ರದ ಶೂಟಿಂಗ್ ಕಂಪ್ಲೀಟ್ ಮೊದಲೇ ಅಪ್ಪು ಇಹಲೋಕ ತ್ಯಜಿಸಿದ್ದಾರೆ. ಇದೀಗ 'ಗಂಧದ ಗುಡಿ' ಉಳಿದ ಚಿತ್ರೀಕರಣ ಮಾಡೋದಕ್ಕೆ ನಿರ್ದೇಶಕ ಅಮೋಘ ವರ್ಷ (Amogha Varsha) ಸಿದ್ಧತೆ ಮಾಡಿದ್ದು, ಫಾರೆಸ್ಟ್‌ಗೆ ಹೋಗಲು ರೆಡಿಯಾಗಿದ್ದಾರೆ. ಮತ್ತೆ 20 ದಿನಗಳ ಕಾಲ ಚಿತ್ರೀಕರಣ ಮಾಡಲಿದ್ದಾರೆ ಅಮೋಘ ವರ್ಷ.

Gandhada Gudi: ಸೋಷಿಯಲ್ ಮೀಡಿಯಾದಲ್ಲಿ ಗಂಧದ ಗುಡಿ ಅಲೆ

ಇನ್ನು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಿಧನ ಆಗಿರೋದು ಅದೆಷ್ಟೋ ಜನರ ಮನಸ್ಸನ್ನು ಘಾಸಿಗೊಳಿಸಿದೆ. ಈ ಕ್ಷಣದವರೆಗೂ ಅಪ್ಪು ಇಲ್ಲ ಅನ್ನೋದನ್ನು ನಂಬೋಕೆ ಸಾಧ್ಯವಿಲ್ಲ. ಅಪ್ಪು ಎಷ್ಟು ಜನರ ಪ್ರೀತಿಗೆ ಪಾತ್ರರಾಗಿದ್ದಾರೆ ಅನ್ನೋದಕ್ಕೆ ಇಲ್ಲೊಂದು ಬೆಸ್ಟ್ ಎಕ್ಸಾಂಪಲ್ ಇದೆ. ತಮಿಳುನಾಡು (Tamil Nadu) ವಿಧಾನಸಭೆ ಅಧಿವೇಶನಲ್ಲಿ ಪುನೀತ್ ರಾಜ್‌ಕುಮಾರ್ ಅವರಿಗೆ ಗೌರವ ಸಲ್ಲಿಸಿದ್ದಾರೆ. ಅಧಿವೇಶನ ಶುರುವಾಗುವ ಮೊದಲು ಅಪ್ಪುಗೆ ತಮಿಳುನಾಡು ಸಿಎಂ ಎಂ.ಕೆ.ಸ್ಟ್ಯಾಲಿನ್ (M.K.Stalin) ಸಂತಾಪ ಸೂಚಿಸಿದ್ದಾರೆ. ಈ ವೀಡಿಯೋ ಈಗ ವೈರಲ್ (Viral) ಆಗುತ್ತಿದೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video