Gandhada Gudi: ಸೋಷಿಯಲ್ ಮೀಡಿಯಾದಲ್ಲಿ ಗಂಧದ ಗುಡಿ ಅಲೆ

ಬಹುನಿರೀಕ್ಷಿತ 'ಗಂಧದಗುಡಿ'(Gandhada gudi) ಸಾಕ್ಷ್ಯ ಚಿತ್ರದ ಟೈಟಲ್ ಟೀಸರ್(Title teaser) ಒಂದೇ ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರೋ ಟೀಸರ್ ದಾಖಲೆಯ ಲೈಕ್ಸ್ ಪಡೆಯುತ್ತಿವೆ.

Share this Video
  • FB
  • Linkdin
  • Whatsapp

ಬಹುನಿರೀಕ್ಷಿತ 'ಗಂಧದಗುಡಿ'(Gandhada gudi) ಸಾಕ್ಷ್ಯ ಚಿತ್ರದ ಟೈಟಲ್ ಟೀಸರ್(Title teaser) ಒಂದೇ ದಿನಕ್ಕೆ 30 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಹವಾ ಸೃಷ್ಟಿಸಿರೋ ಟೀಸರ್ ದಾಖಲೆಯ ಲೈಕ್ಸ್ ಪಡೆಯುತ್ತಿವೆ.

ಟೀಸರ್‌ಗೆ ಒಂದೇ ದಿನ 30 ಲಕ್ಷ ವ್ಯೂ, ಒಂದೇ ಒಂದು ಡಿಸ್‌ಲೈಕ್ ಇಲ್ಲ

ಟೀಸರ್ ಯೂಟ್ಯೂಬ್‌ನಲ್ಲಿ ದಾಖಲೆ ಮಾಡಿದೆ. ಮೂರು ಲಕ್ಷದ ಎಪ್ಪತ್ತೈದು ಸಾವಿರ ಲೈಕ್ಸ್ ಬಂದಿದ್ದು, ಒಂದೇ ಒಂದು ಡಿಸ್ ಲೈಕ್ ಕೂಡ ಬಂದಿಲ್ಲ. ಅಷ್ಟರ ಮಟ್ಟಿಗೆ ಪುನೀತ್‌ರಾಜ್‌ಕುಮಾರ್ ಅವರ ಗಂಧದಗುಡಿ ಕನ್ನಡಿಗರಲ್ಲಿ ಕ್ರೇಜ್ ಹಾಗೂ ಕುತೂಹಲ ಹುಟ್ಟಿಸಿದೆ. ಖ್ಯಾತ ಛಾಯಾಗ್ರಾಹಕ ಅಮೋಘವರ್ಷ ಜತೆ ರೂಪಿಸಿರುವ ಈ ಪ್ರಕೃತಿ ಸೌಂದರ್ಯದ ಟೈಟಲ್ ಟೀಸರ್ ಈ ಮಟ್ಟಕ್ಕೆ ಹಿಟ್ ಆಗಿದ್ದು, ಚಿತ್ರಮಂದಿರದಲ್ಲಿ ದೊಡ್ಡ ಪರದೆ ಮೇಲೆ ಮೂಡಿದಾಗ ಯಾವ ಮಟ್ಟಕ್ಕೆ ಗೆಲ್ಲುತ್ತದೆಂಬ ನಿರೀಕ್ಷೆಯ ಮಾತುಗಳು ಆಗಲೇ ಶುರುವಾಗಿವೆ.

Related Video