ಅಪ್ಪು ಹೆಸರಲ್ಲಿ ಯಶ್-ಪ್ರಕಾಶ್ ರಾಜ್ ದೊಡ್ಡ ಸಾಧನೆ: ಕೊಟ್ಟ ಮಾತು ಉಳಿಸಿಕೊಂಡ ಸ್ಟಾರ್ಸ್..!

ನಟ ಪ್ರಕಾಶ್ ರಾಜ್ ಹಾಗೂ ಯಶ್ ಆಡಿರೋ ಈ ಚಿನ್ನದಂತ ಮಾತುಗಳನ್ನ ಕೇಳಿದ್ರೆ ಯಾರಿಗಾದ್ರು ಒಮ್ಮೆ ಮೈ ರೋಮಾಂಚನ ಆಗುತ್ತೆ. ಇದೀಗ ಅಂದು ಕೊಟ್ಟ ಮಾತನ್ನ ನಟ ಯಶ್ ಹಾಗೂ ಪ್ರಕಾಶ್ ರಾಜ್ ಉಳಿಸಿಕೊಂಡಿದ್ದಾರೆ.

Share this Video
  • FB
  • Linkdin
  • Whatsapp

ಅಪ್ಪು ಇಲ್ಲವಾದ ನೋವಿನಲ್ಲೇ ಇಡೀ ಅಣ್ಣಾವ್ರ ಕುಟುಂಬ ಸೇರಿ ಆಚರಿಸಿದ್ದ ಪುನೀತ ಪರ್ವ ಕಾರ್ಯಕ್ರಮ. ಆ ಕಾರ್ಯಕ್ರಮದಲ್ಲಿ ಎಲ್ಲರ ಆಕರ್ಷಣೆ ಆಗಿದ್ದು, ಇಡೀ ಕರುನಾಡೇ ಮಾತಾಡಿದ್ದು, ನಟ ಪ್ರಕಾಶ್ ರಾಜ್ (Prakash raj) ಅಂದು ಅಪ್ಪು ಆ್ಯಂಬುಲೆನ್ಸ್(Ambulances) ಬಗ್ಗೆ ಒಂದು ನಿರ್ಧಾರವನ್ನು ಕೈಗೊಂಡಿದ್ದರು. ಅಪ್ಪು ಮಾಡಿರೋ ಒಳ್ಳೆ ಕೆಲಸಗಳೇ ಇಂದು ಅವರನ್ನ ಜೀವಂತವಾಗಿ ಇರಿಸಿವೆ. ಅಪ್ಪು ಸ್ಮಾರಕ್ಕೆ ಹೋದ್ರೆ ಪುನೀತ್(Puneeth rajkumar) ಮೇಲಿರೋ ಪ್ರೀತಿ ಅಭಿಮಾನ ಎಂಥಾದ್ದು ಅಂತ ಕಣ್ಣಿಗೆ ಕಾಣುತ್ತೆ. ಅಷ್ಟೊಂದು ಜನ ಸಾಗರ ಅಪ್ಪುಗಾಗಿ ಬಂದಿರುತ್ತೆ. ಇಂತಹ ಅಪ್ಪು ಹೆಸರಲ್ಲಿ ಇಡೀ ಕರ್ನಾಟಕದಾದ್ಯಂತ ಆ್ಯಂಬುಲೆನ್ಸ್ ಸೇವೆ ಮಾಡಬೇಕು. ಅದಕ್ಕಾಗಿ ನಾನು ಒಂದು ಪ್ಲ್ಯಾನ್ ಮಾಡಿದ್ದೇನೆ ಅಂತ ಪ್ರಕಾಶ್ ರಾಜ್ ಹೇಳಿದ್ರು. ಇದಕ್ಕೆ ಯಶ್ ಕೂಡ ನಾನು ಜತೆಯಾಗ್ತೇನೆ ಅಂತಿದ್ರು. ಈಗ ಅಪ್ಪು ಆ್ಯಂಬುಲೆನ್ಸ್ ಸೇವೆಗೆ ಮತ್ತಷ್ಟು ಬಲ ಬಂದಿದೆ. ಈಗಾಗ್ಲೆ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಅಪ್ಪು ಎಕ್ಸ್ಪ್ರೆಸ್ ಅಂಬ್ಯುಲೆನ್ಸ್ ಓಡಾಡ್ತಿವೆ. ಇದೀಗ ಮತ್ತೈದು ಅಂಬ್ಯುಲೆನ್ಸ್ ಗಳು ಕೊಡುಗೆಯಾಗಿ ಸಿಕ್ಕಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರೋ ಪ್ರಕಾಶ್ ರಾಜ್ ‘ಕನ್ನಡ ರಾಜ್ಯೋತ್ಸವದ ಸಂಭ್ರಮದಂದು ಪ್ರಕಾಶ್ ರಾಜ್ ಫೌಂಡೇಶನ್ ವತಿಯಿಂದ ಪ್ರೀತಿಯ ಯಶ್ ಹಾಗೂ ಕೆವಿಎನ್ ಪ್ರೊಡಕ್ಷನ್ ವೆಂಕಟ್ ಅವರ ಸಹಕಾರದಿಂದ ನೆಮ್ಮೆಲ್ಲರ ಅಪ್ಪುವಿನ ಸವಿ ನೆನಪಲ್ಲಿ ಮತ್ತೈದು ಅಪ್ಪು ಎಕ್ಸ್ ಪ್ರೆಸ್ ಅಂಬ್ಯುಲೆನ್ಸ್ ನೀಡಲಾಗಿದೆ ಎಂದಿದ್ದಾರೆ.

ಇದನ್ನೂ ವೀಕ್ಷಿಸಿ: ಕೃಷ್ಣನ 'ಶುಗರ್ ಫ್ಯಾಕ್ಟರಿ'ಯಲ್ಲಿ ಒಂದು ರೌಂಡ್: ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್..!

Related Video