ಅವಾರ್ಡ್‍ಗಳ ಸರದಾರ ಅಲ್ಲು ಅರ್ಜುನ್: 20 ವರ್ಷದ ಸಿನಿ ಜರ್ನಿ..33 ಅವಾರ್ಡ್ !
ರಾಷ್ಟ್ರೀಯ ಪ್ರಶಸ್ತಿ ಪಡೆದ ಏಕೈಕ ತೆಲುಗು ನಟ
ಬಾಲನಟನಾಗಿ ತೆಲುಗು ಚಿತ್ರರಂಗಕ್ಕೆ ಅಲ್ಲು ಎಂಟ್ರಿ
ಬ್ಯಾಕ್ ಟು ಬ್ಯಾಕ್ ಹಿಟ್ ಕೊಟ್ಟ ಸ್ಟ್ರೈಲಿಶ್ ಸ್ಟಾರ್
ಸಿಕ್ಸ್ ಪ್ಯಾಕ್ ಕ್ರೇಜ್ ಹುಟ್ಟಿಸಿದ ದೇಶಮುದುರು
ಸ್ಟೈಲಿಸ್ಟ್ ಸ್ಟಾರ್.. ಐಕಾನ್ ಸ್ಟಾರ್ ಎಂದೇ ಖ್ಯಾತರಾಗಿರುವ ಅಲ್ಲು ಅರ್ಜುನ್ (Allu Arjun) ಯಾರಿಗೆ ಗೊತ್ತಿಲ್ಲ ಹೇಳಿ. ತೆಲುಗು ಮಾತ್ರವಲ್ಲ, ತಮಿಳು, ಕನ್ನಡ, ಮಲೆಯಾಳಂ ಈಗ ಹಿಂದಿ ಭಾಷೆಯಲ್ಲೂ ತಮ್ಮದೇ ಅಭಿಮಾನಿ ಬಳ ಹೊಂದಿರುವ ಅಲ್ಲು ಅರ್ಜುನ್‌ಗೆ ರಾಷ್ಟ್ರೀಯ ಪ್ರಶಸ್ತಿ(National award)ಲಭಿಸಿದೆ. ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ತೆಲುಗು ಚಿತ್ರರಂಗದ ಮೊದಲ ಸ್ಟಾರ್ ಎಂಬ ಹೆಗ್ಗಳಿಕೆಗೆ ಅಲ್ಲು ಅರ್ಜುನ್ ಪಾತ್ರರಾಗಿದ್ದಾರೆ. ಕೊರೊನಾ ಬಳಿಕ ಭಾರತೀಯ ಚಿತ್ರರಂಗಕ್ಕೆ ಬ್ರೇಕ್ ಕೊಟ್ಟ ಸಿನಿಮಾ ಅಂದ್ರೆ ಅದು ಅಲ್ಲು ಅರ್ಜುನ್ ಅಭಿನಯದ ಪುಷ್ಪ ಸಿನಿಮಾ. ರಕ್ತ ಚಂದನ ಕಳ್ಳ ಸಾಗಾಣಿಕೆ ಚಿತ್ರವಾಗಿದ್ದರೂ, ಹಳ್ಳಿ ಸೊಗಡು, ರಗಡ್ ಲುಕ್ನಿಂದಲೇ ಚಿತ್ರರಸಿಕರ ಮನಗೆದ್ದ ಪುಷ್ಪ(Pushpa) ಈಗ ರಾಷ್ಟ್ರೀಯ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಅತ್ಯುತ್ತಮ ನಟನಾಗಿ ಅಲ್ಲು ಅರ್ಜುನ್ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದು, ನ್ಯಾಷನಲ್ ಅವಾರ್ಡ್ ಪಡೆದ ಮೊದಲ ತೆಲುಗು ನಟ ಎಂಬ ಖ್ಯಾತಿ ಅಲ್ಲು ಅರ್ಜುನ್‌ಗೆ ಸಲ್ಲುತ್ತದೆ. ಅಲ್ಲು ಅರ್ಜುನ್ ಐಕಾನ್ ಸ್ಟಾರ್ ಆಗೋಕೆ ಮಾವ ಚಿರಂಜೀವಿ ಕೂಡ ಮೂಲ ಕಾರಣ. ಮನೆಯಲ್ಲಿ ಮಕ್ಕಳಿಗೆ ಚಿರಂಜೀವಿ ಡ್ಯಾನ್ಸ್ ಟ್ರೈನಿಂಗ್ ಕೊಡ್ತಿದ್ರಂತೆ. ಆದ್ರೆ ಇವರಿಗೆ ವೇದಿಕೆ ಆಗ್ತಿದ್ದಿದ್ದು ಚಿರಂಜೀವಿ ಬರ್ತ್ಡೇ ಕಾರ್ಯಕ್ರಮ. ಸ್ಟಾರ್ ಆದ್ರೂ ಚಿರು ಬರ್ತಡೇಲಿ ಅಲ್ಲು ಕುಣಿದು ಕುಪ್ಪಳಿಸುತ್ತಿದ್ದರಂತೆ. ತೆರೆ ಮೇಲಿನ ಶ್ರಮಕ್ಕಿಂತ ತೆರೆ ಹಿಂದಿನ ಅಲ್ಲು ಅರ್ಜುನ್ ಶ್ರಮ ಅಭಿಮಾನಿಗಳ ಹೃದಯಕ್ಕೆ ಲಗ್ಗೆ ಹಾಕುತ್ತೆ.
ಇದನ್ನೂ ವೀಕ್ಷಿಸಿ: Today Horoscope: ಇಂದು ಅಂಗಾರಕ ಜಯಂತಿ ಇದ್ದು, 12 ರಾಶಿಯ ಫಲಗಳು ಹೀಗಿವೆ..