ಪುಷ್ಪಾ 2 ಸೆಟ್‌ನಲ್ಲೇ ವಿಡಿಯೋ ಮಾಡಿದ ‘ಬನ್ನಿ’: ರಾಷ್ಟ್ರಪ್ರಶಸ್ತಿ ವಿಜೇತ ಅಲ್ಲು ಅರ್ಜುನ್ ಮನೆ ನೋಡಿದ್ರಾ ?

ನಟ ಅಲ್ಲು ಅರ್ಜುನ್‌ ತಮ್ಮ ಪ್ರತಿನಿತ್ಯದ ದಿನಚರಿ ಹೇಗಿರುತ್ತದೆ ಎಂಬುದನ್ನು ಪುಷ್ಪ2 ಸೆಟ್‌ನಲ್ಲಿ ವಿಡಿಯೋ ಮಾಡಿದ್ದು ಇಂಟ್ರೆಸ್ಟಿಂಗ್‌ ಆಗಿದೆ. 
 

First Published Aug 31, 2023, 9:47 AM IST | Last Updated Aug 31, 2023, 9:47 AM IST

ಸ್ಟೈಲಿಷ್ ಸ್ಟಾರ್ ಅಲ್ಲೂ ಅರ್ಜುನ್ ಪುಷ್ಪ ಸಿನಿಮಾದ ನಟನೆಗೆ ಬೆಸ್ಟ್ ಆ್ಯಕ್ಟರ್ ನ್ಯಾಷನಲ್ ಅವಾರ್ಡ್‌ನನ್ನು ಪಡೆದಿದ್ದು ನಿಮಗೆಲ್ಲ ಗೊತ್ತೆ ಇದೆ. ಇದೀಗ ಅಲ್ಲೂ ಅರ್ಜುನ್ (Allu Arjun) ತಮ್ಮ ಲೈಫ್ ಸ್ಟೈಲ್ ದಿನ ಹೇಗಿರುತ್ತೆ ಅನ್ನೋದನ್ನ ವಿಡಿಯೋ(Video) ಮಾಡಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಇದೀಗ  ಮಿಲಿಯನ್ ಗಟ್ಟಲೆ ವೀಕ್ಷಣೆ ಕಂಡಿದೆ. ಅಲ್ಲು ಅರ್ಜುನ್ ಹೈದರಾಬಾದ್ ಮನೆ ಸಾಕಷ್ಟು ವಿಸ್ತಾರವಾಗಿದೆ. ಅವರ ಮನೆಯಲ್ಲಿ ದೊಡ್ಡ ಗಾರ್ಡನ್ ಇದೆ. ಮುಂಜಾನೆ ಎದ್ದ ತಕ್ಷಣ ಅವರು ಗಾರ್ಡನ್‌ಗೆ ಬರುತ್ತಾರೆ. ಬಂದು ಕೆಲ ಸಮಯದಲ್ಲಿ ಕಳೆಯುತ್ತಾರೆ. ಏಕಾಂಗಿಯಾಗಿ ಸಮಯ ಕಳೆಯಲು ಅವರಿಗೆ ಸಿಗುವ ಏಕೈಕ ಅವಕಾಶ ಅದು. ಆ ಬಳಿಕ ಕಾಫಿ ಕುಡಿಯುತ್ತಾರೆ, ತಿಂಡಿ ತಿನ್ನುತ್ತಾರೆ. ನಂತರ ಶೂಟ್ ತೆರಳುತ್ತಾರೆ. ತನ್ನ ಪ್ರತಿದಿನದ ದಿನಚರಿ ಹೇಗಿರುತ್ತೆ ಅನ್ನೋದನ್ನು ಶೂಟ್ ಮಾಡಿರೋ ಅಲ್ಲೂ ಅರ್ಜುನ್ ಪುಷ್ಪ2(Pushpa 2) ಸೆಟ್‌ನಲ್ಲೂ ವಿಡಿಯೋ ಮಾಡಿದ್ದು ಇಂಟ್ರೆಸ್ಟಿಂಗ್‌ ಆಗಿದೆ. ಪುಷ್ಪ ಸಿನಿಮಾದಲ್ಲಿ ತಗ್ಗದಲೇ ಎಂದಿದ್ದ ಅಲ್ಲೂ ಅರ್ಜುನ್ ಡೈಲಾಗ್ ವೈರಲ್ ಆಗಿತ್ತು. ಈ ಬಾರಿ ಕೂಡ ಪುಷ್ಪ2ನಲ್ಲಿ ಭರ್ಜರಿ ಡೈಲಾಗ್ ಇದೆಯಂತೆ. ಹಾಗೆ ಬ್ರೇಕ್ ಸಮಯದಲ್ಲಿ ಮಗ ಮಗಳ ಜೊತೆ ವಿಡಿಯೋ ಕಾಲ್ ಮಾಡಿ ಮಾತನಾಡುತ್ತಾರಂತೆ  ಜೊತೆಗೆ ಈ ವಿಡಿಯೋದಲ್ಲಿ ನಿರ್ದೇಶಕ ಸುಕುಮಾರ್ ಭೇಟಿಯ ಕ್ಷಣಗಳೂ ಇವೆ. ಪುಷ್ಪರಾಜ್ ನಿಮಗೆಲ್ಲ ಗೊತ್ತಿರುವಂತೆ ಸಿನಿಮಾದಲ್ಲಿ ಕಾಡುಗಳ್ಳ ಅದಕ್ಕೆ ಕೊಡಲಿ ಬೇಕಲ್ವೆ. ಸೋ ವಿಧವಿಧವಾದ ಕೊಡಲಿಗಳು ಕೂಡ ಇಲ್ಲಿದ್ದು, ಅಲ್ಲೂ ಅರ್ಜುನ್ ಅದನ್ನು ವಿಡಿಯೋ ಮಾಡಿದ್ದಾರೆ. ಅಲ್ಲದೇ ಫ್ಯಾನ್ಸ್ ಭೇಟಿಯ ಕ್ಷಣಗಳನ್ನೂ ಇಲ್ಲಿ ಚಿತ್ರೀಕರಿಸಲಾಗಿದೆ.

ಇದನ್ನೂ ವೀಕ್ಷಿಸಿ:  ಶಾರುಖ್‌ ಖಾನ್ ಜೊತೆ ರಾಕಿಭಾಯ್ ? ಜವಾನ್ ಸಿನಿಮಾದಲ್ಲಿ ಯಶ್ ಪಾತ್ರವೇನು?