Asianet Suvarna News Asianet Suvarna News

ಮತ್ತೊಂದು ಪ್ರೇಮ ಪ್ರಣಯಕ್ಕೆ ರೆಡಿ ಸ್ಯಾಂಡಲ್‌ವುಡ್: ಸ್ಪೆಷಲ್‌ ಫೋಟೋ ಶೂಟ್‌ನಲ್ಲಿ 'ಸಂಜು ವೆಡ್ಸ್ ಗೀತಾ 2'

ಶ್ರೀನಗರ ಕಿಟ್ಟಿ ದಿಂಪಕ್ ಕ್ವೀನ್ ರೊಮ್ಯಾನ್ಸ್ ಧಮಾಕ..!
'ಸಂಜು ವೆಡ್ಸ್ ಗೀತಾ2' ಕತೆಗೆ ನಾಗಶೇಖರ್ ಪೂಜಾರಿ.!
ರಚಿತಾ-ಕಿಟ್ಟಿ ಕೆಮಿಸ್ಟ್ರಿ ಹೇಗೆ ವರ್ಕ್ ಆಗಿದೆ ನೋಡಿ..!
 

ಸ್ಯಾಂಡಲ್‌ವುಡ್‌ನಲ್ಲಿ ಈಗ ಹೊಸ ಪ್ರೇಮದ ಫೈಯರ್ ಹೊತ್ತಿಕೊಂಡಿದೆ. ಅದೇ ಡಿಂಪಲ್ ಕ್ವೀನ್ ರಚಿತಾ ರಾಮ್(Rachita Ram) ಹಾಗೂ ಶ್ರೀನಗರ ಕಿಟ್ಟಿಯ (Srinagar kitty)ಲವ್ ವೆಡ್ಡಿಂಗ್ ಕಹಾನಿ. ಈ ಕಹಾನಿ ಸೃಷ್ಟಿಕರ್ತ ಪ್ರೇಮಕತೆಯ ಸರದಾರ ಡೈರೆಕ್ಟರ್ ನಾಗಶೇಖರ್. ಯೆಸ್, ನಾಗಶೇಖರ್ ಕೊಟ್ಟ ಬ್ಲಾಕ್ ಬಸ್ಟರ್ ಸಿನಿಮಾ ಸಂಜು ವೆಡ್ಸ್ ಗೀತಾ..? ಈ ಇದೇ ಸಿನಿಮಾದ ಪಾರ್ಟ್ ಟು ಬರ್ತಿದೆ. ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ( Sanju Weds Geeta 2) ಡಿಂಪಲ್ ಕ್ವೀನ್ ರಚಿತಾ ಶ್ರೀನಗರ ಕಿಟ್ಟಿ ಪ್ರೇಮಿಗಳ ಎದೆಯಲ್ಲಿ ತ್ರಿಲ್ ಎಬ್ಬಿಸಲಿದ್ದಾರೆ. ಈ ಜೋಡಿಯ ಸ್ಪೆಷಲ್ ಫೋಟೋ ಶೂಟ್ ಆಗಿದ್ದು, ಅದರ ಮೇಕಿಂಗ್ ವಿಡಿಯೋ ರಿವೀಲ್ ಆಗಿದೆ. ಈ ಮೇಕಿಂಗ್ ವಿಡಿಯೋ ನೋಡುತ್ತಿದ್ರೆ ರಚಿತಾ ಕಿಟ್ಟಿ ಕೆಮಿಸ್ಟ್ರಿ ಸಕ್ಕತ್ತಾಗೆ ವರ್ಕ್ ಆಗುತ್ತೆ ಅನ್ನೋದನ್ನ ಕನ್ಫರ್ಮ್ ಮಾಡೋ ಹಾಗಿದೆ.

ಇದನ್ನೂ ವೀಕ್ಷಿಸಿ:  ಕಿಚ್ಚ ಸುದೀಪ್‌ಗೆ ಹುಟ್ಟು ಹಬ್ಬದ 'ಸುವರ್ಣ' ಮಹೋತ್ಸವ..! ಹೆಬ್ಬುಲಿ ಫ್ಯಾನ್ಸ್‌ಗೆ ಕಾದಿದೆ 'ಕಿಚ್ಚ@46' ಬಿಗ್ ಸರ್ಪ್ರೈಸ್..!

Video Top Stories