Puneeth Rajkumar: ಅಪ್ಪು ಜೊತೆ ನಟಿಸುವ ಚಾನ್ಸ್ ಮಿಸ್‌ ಮಾಡಿಕೊಂಡ ಐಶ್ವರ್ಯಾ ರೈ!

ಸ್ಯಾಂಡಲ್‌ವುಡ್‌ನ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್  ಜೊತೆ ಬಾಲಿವುಡ್ ನಟಿ ಐಶ್ವರ್ಯಾ ರೈ‌ ನಟಿಸಬೇಕಿತ್ತಂತೆ. ಆದರೆ ಕೊನೆ ಘಳಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ. ಅಂದಹಾಗೆ ಪವರ್‌ ಸ್ಟಾರ್‌ ಪುನೀತ್‌ ಅಭಿನಯದ 'ಅರಸು' ಸಿನಿಮಾದ ಕ್ಲೈಮ್ಯಾಕ್ಸ್ ಸೀನ್‌ನ ಅದ್ಧೂರಿಯಾಗಿ ಚಿತ್ರೀಕರಿಸಲು ನಿರ್ದೇಶಕ ಮಹೇಶ್ ಬಾಬು ಪ್ಲ್ಯಾನ್ ಮಾಡಿದ್ರಂತೆ.

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನ ಪವರ್‌ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಜೊತೆ ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai)‌ ನಟಿಸಬೇಕಿತ್ತಂತೆ. ಆದರೆ ಕೊನೆ ಘಳಿಗೆಯಲ್ಲಿ ಅದು ಸಾಧ್ಯವಾಗಲಿಲ್ಲ. ಅಂದಹಾಗೆ ಪುನೀತ್‌ ಅಭಿನಯದ 'ಅರಸು' (Arasu) ಸಿನಿಮಾದ ಕ್ಲೈಮ್ಯಾಕ್ಸ್ ಸೀನ್‌ನ ಅದ್ಧೂರಿಯಾಗಿ ಚಿತ್ರೀಕರಿಸಲು ನಿರ್ದೇಶಕ ಮಹೇಶ್ ಬಾಬು (Mahesh Babu) ಪ್ಲ್ಯಾನ್ ಮಾಡಿದ್ರಂತೆ. ಇದೇ ಕಾರಣಕ್ಕೆ ಐಶ್ವರ್ಯಾ ರೈ ಅವರನ್ನು ಅತಿಥಿ ಪಾತ್ರಕ್ಕೆ ಕರೆತರಲು ಪ್ಲ್ಯಾನ್‌ ಮಾಡಲಾಗಿತ್ತು. ಆದರೆ ಈ ಪ್ಲ್ಯಾನ್‌ ಕೊನೇ ಕ್ಷಣದಲ್ಲಿ ಬದಲಾಗಿತ್ತಂತೆ. 

Ramya: ಚಿತ್ರರಂಗಕ್ಕೆ ಮತ್ತೆ ಎಂಟ್ರಿ ಕೊಡುವ ಬಗ್ಗೆ ಸ್ಪಷ್ಟನೆ ನೀಡಿದ ಮೋಹಕ ತಾರೆ!

ಐಶ್ವರ್ಯಾ ರೈ ಕುಟುಂಬಕ್ಕೆ ಆತ್ಮೀಯರಾಗಿದ್ದ ಚಂದ್ರಶೇಖರ ಸ್ವಾಮಿಜಿ (Chandrashekar Swamiji) ಅವರನ್ನು ಸಂಪರ್ಕಿಸಿ 'ಅರಸು' ಚಿತ್ರದಲ್ಲಿ ಐಶ್ವರ್ಯಾ ರೈ ನಟಿಸುವಂತೆ ಮನವಿ ಮಾಡಲಾಗಿತ್ತು. ಆದರೆ ಆ ಹೊತ್ತಲ್ಲಿ ಐಶ್ವರ್ಯಾ ರೈ ಬೇರೆ ಚಿತ್ರದಲ್ಲಿ ಬ್ಯುಸಿಯಾಗಿದ್ದರು. ಈ ಕಾರಣಕ್ಕೆ ಐಶ್ವರ್ಯಾ ರೈ ಅವರನ್ನ 'ಅರಸು' ಚಿತ್ರದ ಅತಿಥಿ ಪಾತ್ರಕ್ಕೆ ಕರೆತರುವ ಪ್ಲ್ಯಾನ್‌ ಸಕ್ಸಸ್‌ ಆಗಲಿಲ್ಲ.‌ 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Related Video