Ek Love Ya Success: ಹೊಸ ನಿರ್ದೇಶಕರ ಹುಡುಕಾಟದಲ್ಲಿ ರಾಣಾ-ರಕ್ಷಿತಾ!

ಜೋಗಿ ಪ್ರೇಮ್‌ ನಿರ್ದೇಶನದ, ರಕ್ಷಿತಾ ಪ್ರೇಮ್‌ ನಿರ್ಮಾಣದ 'ಏಕ್‌ ಲವ್‌ ಯಾ' ಚಿತ್ರಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ. ರಾಜ್ಯದ ವಿವಿಧೆಡೆ ಹೋದಾಗ ಸಿಕ್ಕ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳು ತಂಡದ ಉತ್ಸಾಹ ಹೆಚ್ಚಿಸಿದೆ. 

Share this Video
  • FB
  • Linkdin
  • Whatsapp

ಜೋಗಿ ಪ್ರೇಮ್‌ (Jogi Prem) ನಿರ್ದೇಶನದ, ರಕ್ಷಿತಾ ಪ್ರೇಮ್‌ (Rakshita Prem) ನಿರ್ಮಾಣದ 'ಏಕ್‌ ಲವ್‌ ಯಾ' (Ek Love Ya) ಚಿತ್ರಕ್ಕೆ ಸಿಕ್ಕ ಉತ್ತಮ ಪ್ರತಿಕ್ರಿಯೆಯಿಂದ ಚಿತ್ರತಂಡ ಖುಷಿಯಾಗಿದೆ. ರಾಜ್ಯದ ವಿವಿಧೆಡೆ ಹೋದಾಗ ಸಿಕ್ಕ ಪ್ರೇಕ್ಷಕರ ಮೆಚ್ಚುಗೆಯ ಮಾತುಗಳು ತಂಡದ ಉತ್ಸಾಹ ಹೆಚ್ಚಿಸಿದೆ. ಸಿನಿಮಾ ನೋಡಿದವರಿಗೆ, ಮೆಚ್ಚಿದವರಿಗೆ ಎಲ್ಲರಿಗೂ ನಿರ್ಮಾಪಕಿ ರಕ್ಷಿತಾ ಪ್ರೇಮ್‌ ಧನ್ಯವಾದ ಸಲ್ಲಿಸಿದ್ದಾರೆ. ಮೊದಲ ಚಿತ್ರಕ್ಕೆ ಸಿಕ್ಕ ಪ್ರೋತ್ಸಾಹದಿಂದ ಖುಷಿಗೊಂಡಿರುವ ನಾಯಕ ನಟ ರಾಣಾ (Raanna), 'ಪ್ರೇಕ್ಷಕರು ತೋರಿಸಿದ ಪ್ರೀತಿ, ವಿಶ್ವಾಸಕ್ಕೆ ಋುಣಿ. ಹೀಗೆಯೇ ಹರಸಿ ಬೆಳೆಸಿ' ಎಂದರು. ಎಲ್ಲರಿಗಿಂತ ಪ್ರೇಮ್‌ ಧನ್ಯವಾದ ವಿಶೇಷವಾಗಿತ್ತು. 

Success Party: ಗಡಿನಾಡು ಬಳ್ಳಾರಿಯಲ್ಲಿ 'ಏಕ್ ಲವ್ ಯಾ' ಗೆಲುವಿನ ಸವಾರಿ!

'ನಾನು ಸಿನಿಮಾ ಬಿಡುಗಡೆ ಆದ ಮೇಲೆ ಥಿಯೇಟರ್‌ಗೆಲ್ಲಾ ಹೋದವನಲ್ಲ. ಈ ಸಲ ಹೋಗಿದ್ದೇನೆ. ಸಿನಿಮಾ ರಿಲೀಸ್‌ ಮೊದಲು ಭಯ ಇತ್ತು. ರಾಣಾ ಅವರು ರಕ್ಷಿತಾ ತಮ್ಮ. ಅವರ ಕೆರಿಯರ್‌ ಶುರುವಾಗುತ್ತಿದೆ. ಈ ಸಿನಿಮಾ ಗೆಲ್ಲಲೇಬೇಕು. ಹೆಚ್ಚುಕಡಿಮೆಯಾದರೆ ಮನೆಯಲ್ಲಿ ಮುಖ ತೋರಿಸೋಕೆ ಆಗಲ್ಲ ಎಂದುಕೊಂಡಿದ್ದೆ. ಪ್ರೇಕ್ಷಕರು ಕೈ ಬಿಡಲಿಲ್ಲ. ಗೆಲ್ಲಿಸಿದರು. ಎಷ್ಟುಧನ್ಯವಾದ ಹೇಳಿದರೂ ಸಾಲದು' ಎಂದರು ಪ್ರೇಮ್‌. ಈ ಮಧ್ಯೆ ರಕ್ಷಿತಾ ತಮ್ಮ ಸಹೋದರನಿಗಾಗಿ ಮತ್ತೊಂದು ಸಿನಿಮಾ ಮಾಡುವ ಕೆಲಸವನ್ನು ಈಗಾಗಲೇ ಕೈಗೆತ್ತಿಕೊಂಡಿದ್ದು, ಹೊಸ ನಿರ್ದೇಶಕರ ಹುಡುಕಾಟದಲ್ಲಿದ್ದಾರೆ. ಮಾತ್ರವಲ್ಲದೇ ಯಾರಾದರೂ ನಿರ್ದೇಶಕರು ಕಥೆ ಬರೆದಿದ್ದರೆ ಅದನ್ನು ತಮ್ಮ ಬಳಿ ತೆಗೆದುಕೊಂಡು ಬನ್ನಿ ಎಂದು ಆಫರ್ ಕೊಟ್ಟಿದ್ದಾರೆ. 

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video