Success Party: ಗಡಿನಾಡು ಬಳ್ಳಾರಿಯಲ್ಲಿ 'ಏಕ್ ಲವ್ ಯಾ' ಗೆಲುವಿನ ಸವಾರಿ!

ಶೋ ಮ್ಯಾನ್ ಜೋಗಿ ಪ್ರೇಮ್ ಹಾಗು ಸುಂಟರಗಾಳಿ ರಕ್ಷಿತಾ ಪ್ರೇಮ್ ಡ್ರೀಮ್ ಪ್ರಾಜೆಕ್ಟ್ 'ಏಕ್ ಲವ್ ಯಾ' ಸಿನಿಮಾ ದೊಡ್ಡ ಸಕ್ಸಸ್‌ನತ್ತ ಹೆಜ್ಜೆ ಇಟ್ಟಿದೆ. ರಕ್ಷಿತಾ ತಮ್ಮ ರಾಣ ನಾಯಕನಾಗಿ ಡೆಬ್ಯೂ ಮಾಡಿರೋ ಈ ಸಿನಿಮಾ ನೋಡಿ ಪ್ರೇಕ್ಷಕರು ಜೈ ಎಂದಿದ್ದಾರೆ.

Share this Video
  • FB
  • Linkdin
  • Whatsapp

ಶೋ ಮ್ಯಾನ್ ಜೋಗಿ ಪ್ರೇಮ್ (Jogi Prem) ಹಾಗು ಸುಂಟರಗಾಳಿ ರಕ್ಷಿತಾ ಪ್ರೇಮ್ (Rakshita Prem) ಡ್ರೀಮ್ ಪ್ರಾಜೆಕ್ಟ್ 'ಏಕ್ ಲವ್ ಯಾ' (Ek Love Ya) ಸಿನಿಮಾ ದೊಡ್ಡ ಸಕ್ಸಸ್‌ನತ್ತ ಹೆಜ್ಜೆ ಇಟ್ಟಿದೆ. ರಕ್ಷಿತಾ ತಮ್ಮ ರಾಣ (Raanna) ನಾಯಕನಾಗಿ ಡೆಬ್ಯೂ ಮಾಡಿರೋ ಈ ಸಿನಿಮಾ ನೋಡಿ ಪ್ರೇಕ್ಷಕರು ಜೈ ಎಂದಿದ್ದಾರೆ. ಕ್ಯೂಟ್ ಬ್ಯೂಟಿ ರೀಷ್ಮಾ ನಾಣಯ್ಯ (Rishma Nanayya) ಹಾಗು ಹಾಟ್ ಬ್ಯೂಟಿ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅವರನ್ನ ಜೋಗಿ ಪ್ರೇಮ್ ಫ್ರೇಮ್‌ನಲ್ಲಿ ನೋಡೋಕೆ ಗಂಡ್ ಹೈಕ್ಳು ಚಿತ್ರಮಂದಿರಕ್ಕೆ ಮುಗಿ ಬೀಳ್ತಿದ್ದಾರೆ. ಹೀಗಾಗಿ 'ಏಕ್ ಲವ್ ಯಾ' ಗೆಲುವಿನ ಸವಾರಿಯನ್ನ ಬಳ್ಳಾರಿಯಲ್ಲಿ ಮಾಡಿರೋ 'ಏಕ್ ಲವ್ ಯಾ' ಟೀಂ, ಸಿನಿ ಪ್ರೇಕ್ಷಕರನ್ನ ನೇರಾ ನೇರಾ ಭೇಟಿ ಆಗಿದೆ. 

Ek Love Ya ಬಾ-ಮೈದನನ್ನೇ ಹಿರೋ ಮಾಡಿ ಗೆದ್ದ ಪ್ರೇಮ್!

ನಿರ್ದೇಶಕ ಪ್ರೇಮ್, ನಿರ್ಮಾಪಕಿ ರಕ್ಷಿತಾ, ನಟ ರಾಣಾ, ನಟಿ ರಿಶ್ಮಾ ನಾಣಯ್ಯರನ್ನ ಪಟಾಟಿ ಸಿಡಿಸಿ ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ. 'ಏಕ್ ಲವ್ ಯಾ' ಸಿನಿಮಾದ ಚಿತ್ರಮಂದಿರದ ಮುಂದೆ ಬಂದಿದ್ದ ಪ್ರೇಕ್ಷಕರನ್ನ ನೋಡಿ ಥ್ರಿಲ್ ಆದ ನಿರ್ದೇಶಕ ಜೋಗಿ ಪ್ರೇಮ್, ತನ್ನ ಸಿನಿಮಾದ ಹಾಡು ಹಾಡಿ ರಂಜಿಸಿದರು. ಬಳ್ಳಾರಿ ಆಂಧ್ರದ ಗಡಿಯಾಗಿದರೂ ಇಲ್ಲಿ ಕನ್ನಡ ಸಿನಿಮಾವನ್ನು ಹೆಚ್ಚಾಗಿ ವೀಕ್ಷಿಸುತ್ತಾರೆ ಎಂದು ಜೋಗಿ ಪ್ರೇಮ್ ಹಾಗೂ ರಕ್ಷಿತಾ ಹೇಳಿದರು. ಬಳ್ಳಾರಿಯ ಹೊಸಪೇಟೆಯಲ್ಲಿ ಪ್ರೇಮ್ ಸಿನಿಮಾ ಅಂದರೆ ಮಧ್ಯ ರಾತ್ರಿ ಚಿತ್ರ ನೋಡುವ ಅಭಿಮಾನಿಗಳು ಇದ್ದಾರೆ. ಪ್ರೇಮ್ ಹೊಸ ಕಟೆಂಟ್ ಕೊಟ್ಟಿದ್ದಾರೆ ಅಂತಾ ಚಿತ್ರ ನೋಡುತ್ತಿದ್ದಾರೆ. ಚಿತ್ರದಲ್ಲಿನ ಸಂಗೀತ ಪೇಕ್ಷಕರಿಗೆ ಇಷ್ಟವಾಗಿದೆ. ಚಿತ್ರದ ಕಲೆಕ್ಷನ್ ಕೂಡಾ ಚೆನ್ನಾಗಿದೆ. ನಮ್ಮ ಮ್ಯಾನೇಜರ್ ಇನ್ನೂ ಲೆಕ್ಕ ಕೊಟ್ಟಿಲ್ಲ ಎಂದು ರಕ್ಷಿತಾ ತಿಳಿಸಿದ್ದಾರೆ. ಸದ್ಯ 'ಏಕ್ ಲವ್ ಯಾ' ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ನಲ್ಲಿ ಎರಡನೇ ವಾರಕ್ಕೆ ಮುನ್ನುಗ್ಗುತ್ತಿದೆ.

ಸಿನಿಮಾ ಹಂಗಾಮಾ ವೀಡಿಯೋಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ಕಿಸಿ: https://kannada.asianetnews.com/movies

Related Video