Asianet Suvarna News Asianet Suvarna News

ಅರಮನೆ ಮೈದಾನದಲ್ಲಿ ಅಭಿಷೇಕ್‌-ಅವಿವಾ ಅದ್ಧೂರಿ ಆರತಕ್ಷತೆ: ನಟ-ನಟಿಯರು, ರಾಜಕಾರಣಿಗಳಿಂದ ನವ ಜೋಡಿಗೆ ಶುಭಹಾರೈಕೆ

ಪ್ಯಾಲೆಸ್ ಗ್ರೌಂಡ್‌ನಲ್ಲಿ ಅಭಿಷೇಕ್‌ ಮತ್ತು ಅವಿವಾ ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಈ ಕಾರ್ಯಕ್ರಮಕ್ಕೆ ಯಾವ ಯಾವ ನಟ-ನಟಿಯರು ಆಗಮಿಸಿದ್ರು ಎಂಬುದರ ಒಂದು ಝಲಕ್‌ ಇಲ್ಲಿದೆ ನೋಡಿ...
 

ಅಭಿಷೇಕ್ ಅಂಬರೀಶ್ ಮತ್ತು ಅವಿವಾ ಬಿದ್ದಪ್ಪ ಅವರ ಮದುವೆ ಅರಮನೆ ಮೈದಾನದಲ್ಲಿಯೇ ನಡೆದಿತ್ತು. ಇದೇ ಜಾಗದಲ್ಲಿಯೇ ಇದೀಗ ಆರತಕ್ಷತೆ ಕಾರ್ಯಕ್ರಮ ನಡೆದಿದೆ.
ಇಂಡಿಯನ್ ಕ್ರಿಸ್ಟಲ್ ಶಾಗ್ಲಿಯರ್ ಡಿಸೈನ್‌ನಲ್ಲಿ ಸ್ಟೇಜ್ ನಿರ್ಮಾಣ ಮಾಡಲಾಗಿದೆ. 300 ಶಾಗ್ಲಿಯರ್ಸ್ ಜೊತೆಗೆ 72 ಅಡಿ ಅಗಲ 32 ಉದ್ದದ ಶಾಗ್ಲಿಯರ್‌ನಲ್ಲಿ ಸ್ಟೇಜ್ ನಿರ್ಮಿಸಲಾಗಿದೆ. ವಿಶೇಷ ಅಂದರೆ, ಭಾರತದಲ್ಲಿ ಇದೇ ಮೊದಲ ಬಾರಿಗೆ ಕ್ರಿಸ್ಟಲ್ಸ್ ಡಿಸೈನ್ ಸ್ಟೇಜ್‌ ನಿರ್ಮಾಣ ಮಾಡಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಸ್​.ಎಂ. ಕೃಷ್ಣ, ತಮಿಳು ನಟ ಪ್ರಭು, ನಟಿ ಖುಷ್ಬೂ, ಶತ್ರುಘ್ನ ಸಿನ್ಹಾ, ಜಾಕಿ ಶ್ರಾಫ್, ಸ್ಯಾಂಡಲ್​ವುಡ್​ನ ರಿಷಬ್ ಶೆಟ್ಟಿ ದಂಪತಿ, ಚಿರಂಜೀವಿ ಸೇರಿ ಅನೇಕರು ಆಗಮಿಸಿದ್ದರು. 

ಇದನ್ನೂ ವೀಕ್ಷಿಸಿ: ಮೈತ್ರಿ ಖಾತ್ರಿಗೆ ಪುಷ್ಠಿ ನೀಡುತ್ತಿದೆ ಜೆಡಿಎಸ್‌-ಬಿಜೆಪಿಯ ಬೆಳವಣಿಗೆ: ಇದರಿಂದ ದಳಕ್ಕೆ ಲಾಭ ಏನು ?