Asianet Suvarna News Asianet Suvarna News

ವಿಶ್ವಾದ್ಯಂತ ತೆರೆಕಂಡ ಆದಿಪುರುಷ್: ಸಿನಿಮಾ ಬಗ್ಗೆ ಅಭಿಮಾನಿಗಳು ಹೇಳೋದೇನು ?

500 ಕೋಟಿಯ ಪ್ಯಾನ್ ಇಂಡಿಯಾ ಚಿತ್ರ ಹೇಗಿದೆ?
ಪ್ರಭಾಸ್‌ಗೆ ಈ ಸಿನಿಮಾ ಸಕ್ಸಸ್ ತಂದುಕೊಡುತ್ತಾ? 
ಹೇಗಿದೆ ಆದಿಪುರುಷ್ 3ಡಿ ದೃಶ್ಯ ವೈಭವ?
 

First Published Jun 17, 2023, 8:57 AM IST | Last Updated Jun 17, 2023, 9:01 AM IST

ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ ಆದಿಪುರುಷ್ ಸಿನಿಮಾ ರಿಲೀಸ್ ಆಗಿದೆ. ಸೆಟ್ಟೇರಿದ ದಿನದಿಂದಲೂ ‘ಆದಿಪುರುಷ್’ ಚಿತ್ರ ಸಖತ್ ಸುದ್ದಿ ಆಗುತ್ತಿತ್ತು. ಈಗ ಸಿನಿಮಾ ರಿಲೀಸ್ ಆಗಿದೆ.ನಿನ್ನೆ ಅದ್ದೂರಿಯಾಗಿ ‘ಆದಿಪುರುಷ್’ ತೆರೆಕಂಡಿದೆ. ಈ ಸಿನಿಮಾದಲ್ಲಿ ಪ್ರಭಾಸ್ ,ಕೃತಿ ಸನೋನ್, ದೇವದತ್ತ ನಾಗೆ, ಸೈಫ್ ಅಲಿ ಖಾನ್, ಸನ್ನಿ ಸಿಂಗ್ ಮುಂತಾದವರು ನಟಿಸಿದ್ದಾರೆ. ಓಂ ರಾವತ್ ನಿರ್ದೇಶನದಲ್ಲಿ ‘ಆದಿಪುರುಷ್’ ಚಿತ್ರ ಮೂಡಿಬಂದಿದೆ. ನೂರಾರು ಕೋಟಿ ರೂಪಾಯಿ ಬಜೆಟ್‌ನಲ್ಲಿ ಈ ಸಿನಿಮಾ ಸಿದ್ಧವಾಗಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗಿದ್ದು, ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಪ್ರದರ್ಶನ ಆಗುತ್ತಿದೆ. ಮುಂಜಾನೆ 6 ಗಂಟೆಗೂ ಮುನ್ನವೇ ಶೋಗಳು ಆರಂಭ ಆಗಿವೆ. ರಾಮಾಯಣವನ್ನು ಆಧರಿಸಿದ ‘ಆದಿಪುರುಷ್’ ಚಿತ್ರ 3ಡಿಯಲ್ಲಿ ಮೂಡಿಬಂದಿದೆ. ದೃಶ್ಯ ವೈಭವವನ್ನು ಕಣ್ತುಂಬಿಕೊಳ್ಳಲು ಪ್ರೇಕ್ಷಕರು ಮುಗಿಬಿದ್ದಿದ್ದಾರೆ. ಟೀಸರ್ ಬಿಡುಗಡೆ ಆದಾಗ ಈ ಸಿನಿಮಾ ಸಖತ್ ಟ್ರೋಲ್ ಆಗಿತ್ತು. ವಿವಾದಕ್ಕೂ ಕಾರಣವಾಗಿತ್ತು . ಈಗ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಇದನ್ನೂ ವೀಕ್ಷಿಸಿ: ಛತ್ತೀಸಘಡದಿಂದ ಅಕ್ಕಿ ಖರೀದಿಗೆ ಸಜ್ಜಾದ ರಾಜ್ಯ, ಸರ್ಕಾರದ ವಿರುದ್ದ ಹಿಂದೂಪರ ಸಂಘಟನೆ ಪ್ರೊಟೆಸ್ಟ್!

Video Top Stories