ಈ ಕಾರಣಕ್ಕೆ ಮದುವೆಯಾಗಿಲ್ಲ ಎಂದ ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ
ನಟಿ ರಮ್ಯಾ ಇನ್ನು ಯಾಕೆ ಮದ್ವೆ ಆಗುವ ಮನಸ್ಸು ಮಾಡ್ತಿಲ್ಲ ಅನ್ನೋ ಪ್ರಶ್ನೆಗೆ ಈಗ ಉತ್ತರ ಕೊಟ್ಟಿದ್ದಾರೆ. ರಮ್ಯಾ ನೀಡಿದ ಉತ್ತರ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದೆ.
ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅವರ ವಯಸ್ಸು 39 ಆದ್ರು ಇನ್ನು ಮದುವೆ ಆಗಿಲ್ಲ ಯಾಕೆ ಅನ್ನೋ ಚಿಂತೆ ಅವ್ರ ಅಭಿಮಾನಿಗಳಿಗೆ. ಈ ಬ್ಯೂಟಿ ಹೂ...ಅಂದ್ರೆ ಸಾಕು ಸಾಲು ಸಾಲಾಗಿ ಹುಡುಗರು ಕ್ಯೂ ನಿಲ್ತಾರೆ. ಆದ್ರೆ ಯಾಕೆ ಪದ್ಮಾವತಿ ಮದ್ವೆ ಆಗುವ ಮನಸ್ಸು ಮಾಡ್ತಿಲ್ಲ ಅನ್ನೋ ಪ್ರಶ್ನೆಗೆ ರಮ್ಯಾ ಉತ್ತರ ಕೊಟ್ಟಿದ್ದಾರೆ. ರಮ್ಯಾ ಕೊಟ್ಟ ಈ ಉತ್ತರ ಸಖತ್ ಶಾಕಿಂಗ್ ಅಂಡ್ ಬ್ರೇಕಿಂಗ್ ಆಗಿದೆ. ರಮ್ಯಾ ಇತ್ತೀಚಿಗೆ Iamnotshane ಅವರ Maybe My Soulmate Died ಹಾಡಿಗೆ ರೀಲ್ಸ್ ಮಾಡಿದ್ದಾರೆ. ಇದು ಅವ್ರ ಮೊಟ್ಟ ಮೊದಲ ರೀಲ್ಸ್ ಆಗಿದ್ದು ಅದಕ್ಕೆ ಕ್ಯಾಪ್ಷನ್ ಆಗಿ ಯಾಕೆ ಮದುವೆಯಾಗಿಲ್ಲ. ನನ್ನ ಸೋಲ್ ಮೇಟ್ ಸತ್ತುಹೋಗಿರಬಹುದು ಎಂದು ಬರೆದುಕೊಂಡಿದ್ದಾರೆ. ಮೇಬಿ ಮೈ ಸೋಲ್ ಮೇಟ್ ಡೆಡ್ ಹಾಡನ್ನ ರಮ್ಯಾ ಶೇರ್ ಮಾಡಿರೋದು ಇದೇ ಮೊದಲಲ್ಲ. ಈ ಹಿಂದೆಯೂ ಶೇರ್ ಮಾಡಿಕೊಂಡಿದ್ದರು. ಮೇಬಿ ಈ ಹಾಡು ರಮ್ಯಾ ಅವ್ರ ಫೇವರೇಟ್ ಇರಬಹುದು ಅಥವಾ ತಮಗೆ ಸೂಕ್ತವಾದ ಜೀವನ ಸಂಗಾತಿ ಸಿಗದ ಕಾರಣ ಈ ಹಾಡು ಮನಸ್ಸಿಗೆ ಹತ್ತಿರವಾಗಿರಬಹುದು. ರಮ್ಯಾ ಹಾಡಿರೋ ವಿಡಿಯೋ ಮ್ಯಾಟ್ರು ಏನೇ ಇರಲಿ. ಆದ್ರೆ ಅವ್ರ ಎಕ್ಸ್ ಪ್ರೇಷನ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.