Asianet Suvarna News Asianet Suvarna News

ಪ್ರೆಗ್ನೆನ್ಸಿಯಲ್ಲಿ ಫಿಟ್ನೆಸ್ ಎಷ್ಟು ಮುಖ್ಯ.? ಸ್ಪೆಷಲ್ ಟಿಪ್ಸ್ ಕೊಟ್ಟ ಪ್ರಣಿತಾ ಸುಭಾಷ್..!

ಬಹುಭಾಷಾ ನಟಿ, ಕನ್ನಡತಿ, ಸ್ಯಾಂಡಲ್‌ವುಡ್‌ನ ಮಿಲ್ಕಿ ಬ್ಯೂಟಿ ಪ್ರಣಿತಾ ಸುಭಾಷ್ (Pranitha Subhash) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕಳೆದ ಲಾಕ್ಡೌನ್ನಲ್ಲಿ ಉದ್ಯಮಿ ನಿತಿನ್ ಜೊತೆ ದಾಂಪತ್ಯ ಜೀವನ ಶುರುಮಾಡಿದ್ದ ಪ್ರಣಿತಾ ಸುಭಾಷ್ ಈಗ ಆರು ತಿಂಗಳ ಗರ್ಭಿಣಿ (Pragnant) ಆಗಿದ್ದಾರೆ. 

21 ಕೋಟಿಗೆ ಸೇಲಾಯ್ತು ಚಾರ್ಲಿಯ ಕನ್ನಡ ರೈಟ್ಸ್..! ಜೂನ್ 10 ಕ್ಕೆ ತೆರೆಗೆ

ತಾನು ಪ್ರೆಗ್ನೆನ್ಸಿ ಅನುಭವದಲ್ಲಿದ್ದೇನೆ ಅಂತ ಹೇಳಿ ಪತಿ ನಿತಿನ್ ರಾಜು ಜೊತೆ ಇರೋ ಫೋಟೋ ಹಾಕಿ ಗರ್ಭಿಣಿಯಾದ ಸುದ್ದಿಯನ್ನ ತಿಳಿಸಿದ್ದ ಪ್ರಣಿತಾ ಇತ್ತೀಚೆಗಷ್ಟೆ ತನ್ನ ಬೇಬಿ ಬಂಪ್ ಫೋಟೋ ಶೇರ್ ಮಾಡಿದ್ರು. ಇದೀಗ ಗರ್ಭಿಣಿ ಮಹಿಳೆಯರಿಗೆ ಫಿಟೆನೆಸ್ ಎಷ್ಟು ಮುಖ್ಯ ಅಂತ ಡಾನ್ಸ್ ಮಾಡೋ ವೀಡಿಯೋವನ್ನ ಹಂಚಿ ತಿಳಿಸಿದ್ದಾರೆ. ಪಾಪ್ಯೂಲರ್ ಮ್ಯೂಸಿಕ್‌ಗೆ ಜಿಮ್ನಲ್ಲಿ ಡಾನ್ಸ್ ಮಾಡಿರೋ ಪ್ರಣಿತಾ. ಗರ್ಭಿಣಿಯರಿಗೆ ಫಿಟ್ನೆಸ್ ಮುಖ್ಯ ಪ್ರೆಗ್ನೆನ್ಸಿ ಟೈಂನಲ್ಲಿ ಡಾನ್ಸ್ ಮಾಡಿದ್ರೆ ಒಂದು ತರಾ ತ್ರಿಲ್ ಆಗಿರುತ್ತೆ ಅಂತ ಡಾನ್ಸ್ ಮಾಡೋ ವೀಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ.
 
Video Top Stories