Asianet Suvarna News Asianet Suvarna News

21 ಕೋಟಿಗೆ ಸೇಲಾಯ್ತು ಚಾರ್ಲಿಯ ಕನ್ನಡ ರೈಟ್ಸ್..! ಜೂನ್ 10ಕ್ಕೆ ತೆರೆಗೆ

 ಸಿಂಪಲ್ ಹುಡುಗನ 777 ಚಾರ್ಲಿ (777 Charlie) ಸಿನಿಮಾ ಬೆಳ್ಳಿತೆರೆ ಮೇಲೆ ಬರೋದಕ್ಕೆ ಸಿದ್ಧವಾಗ್ತಿದ್ದಂತೆ ಸ್ಯಾಟಲೈಟ್ ಹಾಗು ಡಿಜಿಟಲ್ ಹಕ್ಕಿಗೆ ಭಾರಿ ಬೇಡಿಕೆ ಬಂದ್ಬಿಟ್ಟಿದೆ. ಚಾರ್ಲಿಗೆ ಕೋಟಿ ಕೋಟಿ ಕೊಡೋಕೆ ನಾವ್ ರೆಡಿ ಎನ್ನುತ್ತಿದ್ದಾರೆ.

 ಸಿಂಪಲ್ ಹುಡುಗನ 777 ಚಾರ್ಲಿ (777 Charlie) ಸಿನಿಮಾ ಬೆಳ್ಳಿತೆರೆ ಮೇಲೆ ಬರೋದಕ್ಕೆ ಸಿದ್ಧವಾಗ್ತಿದ್ದಂತೆ ಸ್ಯಾಟಲೈಟ್ ಹಾಗು ಡಿಜಿಟಲ್ ಹಕ್ಕಿಗೆ ಭಾರಿ ಬೇಡಿಕೆ ಬಂದ್ಬಿಟ್ಟಿದೆ. ಚಾರ್ಲಿಗೆ ಕೋಟಿ ಕೋಟಿ ಕೊಡೋಕೆ ನಾವ್ ರೆಡಿ ಎನ್ನುತ್ತಿದ್ದಾರೆ.
777 ಚಾರ್ಲಿ ಸಿನಿಮಾ ಬ್ಯುಸಿನೆಸ್ ಜೋರಾಗಿ ನಡೆಯುತ್ತಿದೆ. ಏಕ ಕಾಲದಲ್ಲಿ ಬಹು ಭಾಷೆಯಲ್ಲಿ ಬಿಡುಗಡೆ ಆಗುತ್ತಿರೋ ರಕ್ಷಿತ್ ಶೆಟ್ಟಿಯ (Rakshit Shetty) ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದು. ಈ ಚಿತ್ರದ ಕನ್ನಡ ವರ್ಷನ್ ಸ್ಯಾಟಲೈಟ್ ಹಾಗು ಡಿಜಿಟಲ್ ಹಕ್ಕು (Digital Rights)  ಮಾರಾಟ ಆಗಿದೆ. ಬರೋಬ್ಬರಿ 21 ಕೋಟಿ ಕೊಟ್ಟು ಶೆಟ್ರ ಕನ್ನಡ ಭಾಷೆಯ ಚಾರ್ಲಿಯನ್ನ ಖರೀದಿಸಿದ್ದಾರೆ. ಕನ್ನಡದಲ್ಲಿ ರಕ್ಷಿತ್ ಶೆಟ್ಟಿಯ ಚಿತ್ರಕ್ಕೆ ಇಷ್ಟೊಂದು ದೊಡ್ಡ ಮೊತ್ತ ಸಿಕ್ಕಿ ಮೊದಲ ಸಿನಿಮಾ 

777 ಚಾರ್ಲಿ ಶ್ವಾನ ಮತ್ತು ಮನುಷ್ಯನ ಸಂಬಂಧದ ಸುತ್ತ ಇರೋ ಕಥೆಯ ಸಿನಿಮಾ. ಈ ಸಿನಿಮಾದಲ್ಲಿ ರಕ್ಷಿತ್ ಶೆಟ್ಟಿ ಹೀರೋ ಆದ್ರೆ ಶೆಟ್ರ ಜೊತೆ ಟ್ರಾವೆಲ್ ಮಾಡೋ ಶ್ವಾನ ಕೂಡ ಮತ್ತೊಂದು ಹೀರೋ. 170 ದಿನಗಳ ಕಾಲ ಬರೀ ಶ್ವಾನದ ಕ್ಯಾರೆಕ್ಟರ್ಅನ್ನ ಮಾತ್ರ ಚಿತ್ರೀಕರಣ ಮಾಡಿದ್ದಾರೆ ಅಂದ್ರೆ ಈ ಶ್ವಾನದ ರೋಲ್ ಎಷ್ಟು ಮಹತ್ವದ್ದು ಅಂತ ಗೊತ್ತಾಗುತ್ತೆ. ಹೀಗಾಗಿ ಈ ವಿಭಿನ್ನ ಕಥಾನಕದ ಈ ಸಿನಿಮಾ ಮೇಲೆ ದೊಡ್ಡ ಎಕ್ಸ್ಪಟೇಷನ್ ಇದೆ.ಜೂನ್ 10ಕ್ಕೆ 777 ಚಾರ್ಲಿ ತೆರೆ ಮೇಲೆ ಬರಲಿದೆ.

ಅವನೇ ಶ್ರೀಮನ್ನಾರಾಯಣ ರಕ್ಷಿತ್ ಶೆಟ್ಟಿ, ಸ್ಟೋರಿ ಬೇಸ್ಡ್ ಸಿನಿಮಾಗಳ ಮೇಲೆ ಹೆಚ್ಚು ಫೋಕಸ್ ಮಾಡ್ತಾರೆ. ಹೀರೋಯಿಸಂ ಗಿಂತ ಕತೆ ಗಟ್ಟಿಯಾಗಿದ್ರೆ ಆ ಸಿನಿಮಾ ಗೆದ್ದೇ ಗೆಲುತ್ತೆ ಅನ್ನೋ ಕಾನ್ಫಿಡೆಂಟ್ ಶೆಟ್ರದ್ದು. ಅದೇ ಕಾನ್ಫಿಡೆಂಟ್ ಮೇಲೆ ಶೆಟ್ರ ಗರಡಿಯಲ್ಲಿ ಪಳಗಿರೋ ಯುವ ನಿರ್ದೇಶಕ ಕಿರಣ್‌ ರಾಜ್‌ ಗೆ ಡೈರೆಕ್ಟನ್ ಚಾನ್ಸ್ ಕೊಟ್ಟಿದ್ದಾರೆ ರಕ್ಷಿತ್.  ಈ ಚಿತ್ರದಲ್ಲಿ ನಾಯಿ ಮತ್ತು ಮನುಷ್ಯನ ಸಂಬಂಧದ ಜೊತೆಗೆ ಕ್ಯೂಟ್ ಲವ್ ಸ್ಟೋರಿ ಕೂಡ ಇದೆ. ರಕ್ಷಿತ್ಗೆ ಜೋಡಿಯಾಗಿ ಸಂಗೀತ ಶ್ರಿಂಗೇರಿ ಅಭಿನಯಿಸಿದ್ದು, ರಾಜ್ ಬಿ ಶೆಟ್ಟಿ, ಡ್ಯಾನಿಶ್ ಸೇಟ್ ಕೂಡ ಪ್ರಮುಖ ಪಾತ್ರದಲ್ಲಿದ್ದಾರೆ. 

 ಜೂನ್ 10ರಂದು ತೆರೆ ಮೇಲೆ ಬರೋ 777 ಚಾರ್ಲಿಯನ್ನ ಮಾಲಿವುಡ್ ನಟ ಪೃತ್ವಿರಾಜ್ ಮಲೆಯಾಳಂ ಭಾಷೆಯಲ್ಲಿ ಬಿಡುಗಡೆ ಮಾಡುತ್ತಿದ್ದಾರೆ. ತಮಿಳು ಹಕ್ಕುಗಳನ್ನು ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಖರೀದಿಸಿದ್ದಾರೆ. ಹಿಂದಿ ಮತ್ತು ತೆಲುಗು ಆವೃತ್ತಿಗಳ ವಿವರ ಶೀಘ್ರದಲ್ಲೇ ಬಹಿರಂಗವಾಗಲಿದೆ. ಒಟ್ಟು ಐದು ಭಾಷೆಯಲ್ಲಿ ತೆರೆಗೆ ಬರುತ್ತಿರೋ 777 ಚಾರ್ಲಿ ಎಲ್ಲಾ ಭಾಷೆಯ ಸ್ಯಾಟಲೈಟ್ ಹಾಗು ಡಿಜಿಟಲ್ ಹಕ್ಕಿನಿಂದ 50 ಕೋಟಿಗೂ ಅಧಿಕ ಕಲೆಕ್ಷನ್ ಮಾಡಲಿದೆ ಅಂತ ಹೇಳಲಾಗ್ತಿದೆ. ಹಾಗೇನಾದ್ರು ಆದ್ರೆ ಚಾರ್ಲಿಗಾಗಿ ರಕ್ಷಿತ್ ಶೆಟ್ಟಿಯ ಐದು ವರ್ಷದ ಪರಿಶ್ರಮಕ್ಕೆ ಫಲ ಸಿಕ್ಕಂತಾಗುತ್ತೆ. 
 

Video Top Stories