ನಟಿ ಮಹಾಲಕ್ಷ್ಮೀ ನಿಜವಾಗ್ಲೂ ಸನ್ಯಾಸಿ ಆಗಿದ್ರಾ? ಇದ್ದಕ್ಕಿದ್ದಂತೆ ನಟಿ ಸಿನಿಮಾದಿಂದ ಕಣ್ಮರೆ ಆಗಿದ್ದೇಕೆ ?

1991 ರವರೆಗೆ ಕನ್ನಡದಲ್ಲಿ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಹಲವು ಹಿಟ್ ಚಿತ್ರಗಳನ್ನು ನೀಡಿ, ಬಹುಬೇಡಿಕೆಯ ನಟಿಯಾಗಿರುವಾಗಲೇ ಮಹಾಲಕ್ಷ್ಮಿ ಚಿತ್ರರಂಗದಿಂದ ದೂರ ಸರಿದಿದ್ದರು. 
 

First Published Sep 10, 2023, 9:24 AM IST | Last Updated Sep 10, 2023, 9:24 AM IST

ನಟಿ ಮಹಾಲಕ್ಷ್ಮೀ. ಅದೆಷ್ಟು ಸಿನಿರಸಿಕರ ಪಾಲಿಗೆ ಡ್ರೀಮ್ ಗರ್ಲ್ ಆಗಿದ್ರೋ ಲೆಕ್ಕವೇ ಇಲ್ಲ. ಮಹಾಲಕ್ಷ್ಮಿ(Mahalakshmi) ನಟಿಸಿದ 'ಬಡ್ಡಿ ಬಂಗಾರಮ್ಮ' 'ಸ್ವಾಭಿಮಾನ' 'ಮದುವೆ ಮಾಡು ತಮಾಷೆ ನೋಡು' ತರದ ಹತ್ತಾರು ಸೂಪರ್‌ಹಿಟ್ ಸಿನಿಮಾಗಳನ್ನ ಯಾರ್ ತಾನೆ ಮರೆಯೋಕೆ ಸಾಧ್ಯ. ಇದೀಗ ಇದೇ ಸ್ವಾಭಿಮಾನದ ಹೆಣ್ಣು ಮಹಾಲಕ್ಷ್ಮಿ 30 ವರ್ಷದ ಬಳಿಕೆ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಿದ್ದಾರೆ. ಬ್ಯಾಕ್ ಟು ಬ್ಯಾಕ್ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ ನಟಿ ಮಹಾಲಕ್ಷ್ಮೀ ತಮ್ಮ ವೃತ್ತಿಜೀವನ ಉತ್ತುಂಗದಲ್ಲಿದ್ದಾಗಲೆ ಚಿತ್ರರಂಗಕ್ಕೆ ಗುಡ್ ಬೈ ಹೇಳಿದ್ರು. ನಟಿ ಮಹಾಲಕ್ಷ್ಮಿ ಬಗ್ಗೆ ನೂರೆಂಟು ಕಥೆಗಳಿವೆ. ಇವ್ರು ಆಧ್ಯಾತ್ಮದ ಕಡೆ ವಾಲಿದ್ದಾರೆ. ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಾರೆ ಅಂತೆಲ್ಲಾ ಸುದ್ದಿ ಆಗಿತ್ತು. ಆದ್ರೆ ಈ ಬಗ್ಗೆ ಯಾವ್ದೇ ಕ್ಲಾರಿಟಿ ಇರಲಿಲ್ಲ. ಈಗ ಗಾಸಿಪ್ಅನ್ನೆಲ್ಲಾ ಸುಳ್ಳು ಮಾಡಲು 'ಕಾವೇರಿ ಕನ್ನಡ ಮೀಡಿಯಂ'(Kaveri Kannada Medium). ಈ ಧಾರಾವಾಹಿಯಲ್ಲಿ ಇಡೀ ಮನೆಯ ಮುಖ್ಯಸ್ಥೆ ಅಜ್ಜಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮಹಾಲಕ್ಷ್ಮಿ ಮೂಲ ತಮಿಳುನಾಡಾದ್ರು ಕನ್ನಡದಲ್ಲೇ ಹೆಚ್ಚು ಸಕ್ಸಸ್ ಪಡೆದಿದ್ರು. ಈಗ ಕಿರುತೆರೆಯಲ್ಲೂ ಅದೇ ಯಶಸ್ಸಿನ ಹುಡುಕಾಟಕ್ಕಿಳಿದಿದ್ದಾರೆ. ಹೀಗಾಗಿ ಇಷ್ಟು ದಿನ ಯಾರು ಮಹಾಲಕ್ಷ್ಮಿಯನ್ನ ಮಿಸ್ ಮಾಡಿ ಕೊಂಡಿದ್ರೋ ಅವರು ಧಾರಾವಾಹಿ ಮೂಲಕ ಮತ್ತೆ ಕಣ್ತುಂಬಿಕೊಳ್ಳಬಹುದು.

ಇದನ್ನೂ ವೀಕ್ಷಿಸಿ:  90ರ ದಶಕದಲ್ಲಿ ‘ಪೂಜಾಫಲ’ ನೀಡಿದ್ದ ‘ಭದ್ರಕಾಳಿ’..! ಕನ್ನಡದ ‘ಅಪರಂಜಿ’ ಸ್ಯಾಂಡಲ್‌ವುಡ್‌ನ ‘ಬಡ್ಡಿ ಬಂಗಾರಮ್ಮ’..!