90ರ ದಶಕದಲ್ಲಿ ‘ಪೂಜಾಫಲ’ ನೀಡಿದ್ದ ‘ಭದ್ರಕಾಳಿ’..! ಕನ್ನಡದ ‘ಅಪರಂಜಿ’ ಸ್ಯಾಂಡಲ್‌ವುಡ್‌ನ ‘ಬಡ್ಡಿ ಬಂಗಾರಮ್ಮ’..!

1991 ರವರೆಗೆ ಕನ್ನಡದಲ್ಲಿ ಸುಮಾರು 30ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿ, ಹಲವು ಹಿಟ್ ಚಿತ್ರಗಳನ್ನು ನೀಡಿ, ಬಹುಬೇಡಿಕೆಯ ನಟಿಯಾಗಿರುವಾಗಲೇ ಮಹಾಲಕ್ಷ್ಮಿ ಚಿತ್ರರಂಗದಿಂದ ದೂರ ಸರಿದಿದ್ದರು. 
 

Share this Video
  • FB
  • Linkdin
  • Whatsapp

ಮಹಾಲಕ್ಷ್ಮೀ (Mahalakshmi) ಎಂದ ಕೂಡಲೇ ಆ ಸುಂದರ ನಗುವಿನ, ಅದ್ಭುತ ನಟನೆಯ, ಯಾವ ಪಾತ್ರಕ್ಕೂ ಸೈ ಎನಿಸುವ ಕನ್ನಡದ ಖ್ಯಾತ ನಟಿ ಮಹಾಲಕ್ಷ್ಮಿ ಕಣ್ಣೆದುರು ಬಾರದೇ ಇರರು. ಯಾಕಂದ್ರೆ 90ರ ದಶಕದಲ್ಲಿ ಜನರ ಮನಸ್ಸು ಗೆದ್ದಿದ್ದ ನಟಿ ಇವರು. ಸ್ಟಾರ್ ಸುವರ್ಣದಲ್ಲಿ ಆರಂಭವಾಗಲಿರುವ ಹೊಸ ಧಾರಾವಾಹಿ 'ಕಾವೇರಿ ಕನ್ನಡ ಮೀಡಿಯಂ'(Kaveri Kannada Medium) ನಲ್ಲಿ ಕನ್ನಡದಲ್ಲಿ ಒಂದು ಕಾಲದಲ್ಲಿ ಮಿಂಚಿದ್ದ ನಟಿ ಮಹಾಲಕ್ಷ್ಮೀ ನಟಿಸುತ್ತಿದ್ದಾರೆ. ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಮಹಾಲಕ್ಷ್ಮಿ ಕನ್ನಡದಲ್ಲಿ ನಟಿಸುತ್ತಿದ್ದಾರೆ. ಬಾರೇ ನನ್ನ ಮುದ್ದಿನ ರಾಣಿ, ಹೆಂಡ್ತಿಗೇಳ್ಬೇಡಿ, ಪರಶುರಾಮ, ಸಂಸಾರ ನೌಕೆ, ಜಯಸಿಂಹ ಮೊದಲಾದ ಹಿಟ್ ಕನ್ನಡ ಚಿತ್ರಗಳಲ್ಲಿ ನಟಿಸಿದ್ದು ಮಾತ್ರವಲ್ಲದೇ, ರಾಜ್ ಕುಮಾರ್, ವಿಷ್ಣುವರ್ಧನ್, ಅನಂತನಾಗ್, ಟೈಗರ್ ಪ್ರಭಾಕರ್, ಅಂಬರೀಶ್ ಜೊತೆ ನಟಿಸಿದ್ದರು. 

ಇದನ್ನೂ ವೀಕ್ಷಿಸಿ:  ಮತ್ತೆ ಬಂದರು ಸ್ವಾಭಿಮಾನದ ಮಹಾಲಕ್ಷ್ಮಿ..! ದಿಗ್ಗಜರ ಜೊತೆಯಲ್ಲಿ ನಟಿಸಿದ್ದ ಮಾದಕ ತಾರೆ !

Related Video