ಕನ್ನಡದಲ್ಲಿ ಓಂ ಶಾಂತಿ, ತೆಲುಗಿನಲ್ಲಿ ಡಿಸ್ಕೋ ಶಾಂತಿ ಆಗಿರೋ ರಹಸ್ಯ ಬಿಚ್ಚಿಟ್ಟ 'ರಂಭೆ' ಜ್ಯೋತಿ ರೈ!

ಇಲ್ಲಿ ಓಂ ಶಾಂತಿ.. ಹೈದರಾಬಾದ್​ನಲ್ಲಿ ಡಿಸ್ಕೋ ಶಾಂತಿ..! ಹೀಗಂತ ಕಿರುತೆರೆ ನಟಿ ಜ್ಯೋತಿ ರೈ ಬಗ್ಗೆ ಒಂಥದ್ದೊಂದು ಟ್ರೋಲ್ ಹರಿದಾಡೋದನ್ನ ನೀವು ನೋಡಿರಬಹುದು. ಜೋಗುಳ ಅನ್ನೋ ಸೀರಿಯಲ್​ನಿಂದ ಕನ್ನಡ ಕಿರುತೆರೆಗೆ ಬಂದ ಜ್ಯೋತಿ, ಇಲ್ಲಿ ಮಿಂಚಿದ್ದೆಲ್ಲಾ ಗೌರಮ್ಮನಂಥಾ ಪಾತ್ರಗಳಲ್ಲಿ. ಯಾಕೆ? ನೋಡಿ ಈ ಸ್ಟೋರಿ..

Share this Video
  • FB
  • Linkdin
  • Whatsapp

ಕನ್ನಡ ಕಿರುತೆರೆಯಲ್ಲಿ ಗೌರಮ್ಮನಂತೆ ಮಿಂಚ್ತಾ ಇದ್ದ ನಟಿ ಜ್ಯೋತಿ ರೈ (Jyothi Rai) ಟಾಲಿವುಡ್‌ಗೆ ಹೋದ ಮೇಲೆ ಬಿಚ್ಚಮ್ಮ ಆಗಿ ಬದಲಾಗಿದ್ದಾರೆ. ಸದ್ಯ ಕನ್ನಡ ಚಿತ್ರವೊಂದರಲ್ಲಿ ನಟಿಸೋದಕ್ಕೆ ಮರಳಿ ಬೆಂಗಳೂರಿಗೆ ಬಂದಿರೊ ಜ್ಯೋತಿ ತಮ್ಮ ಬದಲಾದ ಲುಕ್ಕು, ಲಕ್ಕು ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಲ್ಲಿ ಓಂ ಶಾಂತಿ.. ಹೈದರಾಬಾದ್​ನಲ್ಲಿ ಡಿಸ್ಕೋ ಶಾಂತಿ..! 
ಯೆಸ್ ಕಿರುತೆರೆ ನಟಿ ಜ್ಯೋತಿ ರೈ ಬಗ್ಗೆ ಒಂಥದ್ದೊಂದು ಟ್ರೋಲ್ ಹರಿದಾಡೋದನ್ನ ನೀವು ನೋಡಿರಬಹುದು. ಜೋಗುಳ ಅನ್ನೋ ಸೀರಿಯಲ್​ನಿಂದ ಕನ್ನಡ ಕಿರುತೆರೆಗೆ ಬಂದ ಜ್ಯೋತಿ, ಇಲ್ಲಿ ಮಿಂಚಿದ್ದೆಲ್ಲಾ ಗೌರಮ್ಮನಂಥಾ ಪಾತ್ರಗಳಲ್ಲಿ.

ಕಿರಿತೆರೆಯಲ್ಲಿ ಸೀರೆಯುಟ್ಟು ಸಭ್ಯಗ್ರಹಿಣಿ ಪಾತ್ರಗಳನ್ನ ಮಾಡ್ತಿದ್ದ ಜ್ಯೋತಿ ಕನ್ನಡ ಸಿನಿಮಾಗಳಲ್ಲೂ ಇದೇ ಅವತಾರದಲ್ಲಿ ಮಿಂಚಿದ್ರು. ಆದ್ರೆ ಅದ್ಯಾವಾಗ ಟಾಲಿವುಡ್​ ಕಡೆಗೆ ಹೋದ್ರೋ ಅವರ ವರಸೆಯೇ ಬದಲಾಯ್ತು. ಕನ್ನಡ ಜ್ಯೋತಿ ಆಂಧ್ರಜ್ಯೋತಿಯಾದ ಮೇಲೆ ಭಲೇ ಹಾಟ್ ಆಗ್ಬಿಟ್ರು.

ಸೋಷಿಯಲ್ ಮಿಡಿಯಾದಲ್ಲಿ ಜ್ಯೋತಿ ಹಾಕೋ ಹಸಿಬಿಸಿ ಅವತಾರದ ಪೊಸ್ಟ್ ನೋಡಿದವರು, ಅರೇ ಇವರು ಅವರೇನಾ ಅಂತ ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ರು. ಇಲ್ಲಿ ಓಂ ಶಾಂತಿ ರೀತಿ ಇದ್ದವರು ಅಲ್ಲೋಗಿ ಡಿಸ್ಕೋ ಶಾಂತಿ ಆದ್ರಲ್ಲಪ್ಪಾ ಅಂತ ಟ್ರೋಲ್ ಕೂಡ ಮಾಡತೊಡಗಿದ್ರು.

ದಿಢೀರ್ ಬದಲಾವಣೆ ಹಿಂದಿನ ಕಾರಣ ಬಿಚ್ಚಿಟ್ಟ ಜ್ಯೋತಿ 
ಯೆಸ್ ಜ್ಯೋತಿ ರೈ ಒಂದು ಲಾಂಗ್ ಗ್ಯಾಪ್ ಬಳಿಕ ಮತ್ತೆ ಕನ್ನಡದ ಕಡೆಗೆ ಬಂದಿದ್ದಾರೆ. ಪ್ರಮೋದ್ ನಟನೆಯ ಹಲ್ಕಾ ಡಾನ್ ಸಿನಿಮಾದಲ್ಲಿ ಒಂದು ಪ್ರಮುಖ ಪಾತ್ರ ಮಾಡ್ತಿದ್ದಾರೆ. ಈ ಸಮಯದಲ್ಲೇ ತಮ್ಮ ಬದಲಾದ ಲಕ್ಕು, ಲುಕ್ಕು ಬಗ್ಗೆ ಓಪನ್ ಆಗಿ ಮಾತನಾಡಿದ್ದಾರೆ.

ಹೌದು ಗೌರಮ್ಮನ ತರಹ ಇದ್ರೆ ಆಗಲ್ಲ ಅಂತ ಕೊಂಚ ವರಸೆ ಬದಲಿಸಿದೆ . ಸೋಷಿಯಲ್ ಮಿಡಿಯಾಗೆ ಬಂದೆ. ಜನಕ್ಕೆ ಇಷ್ಟವಾಯ್ತು. ಜನ ಇಷ್ಟ ಪಡೋ ರೀತಿನೇ ಇರೋಣ ಬಿಡಿ ಅಂತಾರೆ ಜ್ಯೋತಿ. ಜೊತೆಗೆ ಕಲಾವಿದರು ಒಂದೇ ರೀತಿ ಇರಬಾರದು.. ಪಾತ್ರಕ್ಕೆ ತಕ್ಕಂತೆ ಬದಲಾಗಬೇಕು ಅಂತಾರಿವರು.

ತೆರೆ ಮೇಲೆ ಅದೆಷ್ಟೇ ಹಾಟ್ ಆಗಿ ಕಾಣಿಸಿಕೊಂಡರೂ ಒಳಗಡೆ ನಾನೂ ಅಪ್ಪಟ ಟ್ರೆಡಿಷನಲ್ ಅಂತಾರೆ ಜ್ಯೋತಿ. ಜೊತೆಗೆ ಟ್ರೋಲ್ ಮಾಡೋರ ಬಗ್ಗೆ ಐ ಡೋಂಟ್ ಕೇರ್ ಅಂತಾರೆ. ಕಷ್ಟ ಪಟ್ಟು ಇಷ್ಟ ಪಟ್ಟಿದ್ದನ್ನ ಮಾಡ್ತಾ ಇದ್ದೀನಿ ಅಂತಾರೆ.

ಇನ್ನೂ ವೈಯಕ್ತಿಕ ಬದುಕಿನಲ್ಲಿ ಬಂದ ಒಂದಿಷ್ಟು ಏರಿಳಿತಗಳು, ತನ್ನ ಮೇಲೆ ಬಂದ ಗಾಸಿಪ್​ಗಳು ಎಲ್ಲವನ್ನೂ ಬಗ್ಗೆನೂ ಜ್ಯೋತಿ ಹಗುರವಾಗೇ ತೆಗೆದುಕೊಂಡಿದ್ದಾರೆ.

ಹೌದು, ಜ್ಯೋತಿ ರೈ ಮೊದಲ ಪತಿಯಿಂದ ದೂರವಾಗಿದ್ದು, ತೆಲುಗು ನಿರ್ದೇಶಕ ಸುಕು ಪೂರ್ವಜ್ ಜೊತೆ ಎರಡನೇ ಮದುವೆಯಾಗಿದ್ದಾರೆ. ಈ ನಡುವೆ ಸೋಷಿಯಲ್ ಮಿಡಿಯಾದ ಹಾಟ್ ಅವತಾರಕ್ಕೂ , ಮುರಿದು ಬದ್ದ ಸಂಸಾರಕ್ಕೂ ನಂಟು ಹಾಕಿ.. ಎಲ್ಲವನ್ನೂ ಒಂದಕ್ಕೊಂದು ಬೆಸೆದು ಅನೇಕರು ಕೆಟ್ಟದಾಗಿ ಸೋಷಿಯಲ್ ಮಿಡಿಯಾದಲ್ಲಿ ಬಿಂಬಿಸ್ತಾರೆ. ಅಂಥವರ ಬಗ್ಗೆ ಜ್ಯೋತಿಗೆ ಬೇಸರ ಇದೆ. ಇವರು ಯಾರನ್ನೂ ಬಿಡಲ್ಲ.. ಅದಕ್ಕೆಲ್ಲಾ ತಲೆಕೆಡಿಸಿಕೊಂಡರೆ ಬದುಕೋದಕ್ಕಾಗಲ್ಲ ಅಂತಾರೆ.

ಹೌದು ಮೊದಲ ವಿಚ್ಛೇಧನಕ್ಕೆ ಕಾರಣ ಇದೆ. ಎರಡನೇ ಪತಿ ಜೊತೆಗೆ ಬದುಕು ಚೆನ್ನಾಗಿದೆ ಅಂತಾರೆ ಜ್ಯೋತಿ ರೈ. ಒಟ್ಟಾರೆ ವೃತ್ತಿ ಬದುಕು- ವೈಯಕ್ತಿಕ ಬದುಕು ಎರಡಲ್ಲೂ ತನಗೀಗ ಸಂತೃಪ್ತಿ ಇದೆ ಅಂತಿದ್ದಾರೆ ಜ್ಯೋತಿ ರೈ. ಮತ್ತೆ ಕನ್ನಡ ಸಿನಿಮಾ ಮಾಡ್ತಿರೋ ಜ್ಯೋತಿ, ಕನ್ನಡಿಗರ ಮುಂದೆ ಬರೋದಕ್ಕೆ ಸಜ್ಜಾಗಿದ್ದಾರೆ. ಜ್ಯೋತಿಯ ಎರಡನೇ ಇನ್ನಿಂಗ್ಸ್ ನೋಡ್ಲಿಕ್ಕೆ ನೀವು ಕೂಡ ಸಜ್ಜಾಗಿ.
ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

Related Video