'ನಿಮ್ಮ ಜತೆ ಇದ್ದೇನೆ' ಹಿರಿಯ ನಿರ್ದೇಶಕ ಎಟಿ ರಘು ಆರೋಗ್ಯ ವಿಚಾರಿಸಿದ ಕಿಚ್ಚ
ಹಿರಿಯ ನಿರ್ದೇಶಕ ಎ.ಟಿ ರಘು ಆರೋಗ್ಯ ವಿಚಾರಿಸಿದ ಕಿಚ್ಚ ಸುದೀಪ್/ ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಬಳುತ್ತಿರುವ ಎಟಿ ರಘು / ಅಂಬರೀಶ್ ಅವರ ಜತೆ ೨೦ಕ್ಕೂ ಹೆಚ್ಚು ಸಿನಿಮಾಗಳನ್ನ ಮಾಡಿದ ಹಿರಿಯ ನಿರ್ದೇಶಕ / ಅಂಬರೀಶ್ ಅವರು ಬದಕಿರುವವರೆಗೂ ಎ.ಟಿ ರಘು ಅವರಿಗೆ ಸಹಾಯ ಮಾಡ್ತಿದ್ರು ಅಂಬರೀಶ್ ನಿಧನದ ನಂತ್ರ ಚಿತ್ರರಂಗದಿಂದ ಎ.ಟಿ ರಘು ಅವರಿಗೆ ಯಾವುದೇ ಬೆಂಬಲ ಸಿಕ್ಕಿಲ್ಲ
ಬೆಂಗಳೂರು(ಜ. 11) ಹಿರಿಯ ನಿರ್ದೇಶಕ ಎ.ಟಿ ರಘು ಆರೋಗ್ಯವನ್ನು ಕಿಚ್ಚ ಸುದೀಪ್ ವಿಚಾರಿಸಿದ್ದಾರೆ. ಹಲವು ವರ್ಷಗಳಿಂದ ಕಿಡ್ನಿ ವೈಫಲ್ಯದಿಂದ ಎಟಿ ರಘು ಬಳಲುತ್ತಿದ್ದಾರೆ. ಮಂಡ್ಯದ ಗಂಡು, ರೆಬಲ್ ಸ್ಟಾರ್ ಅಂಬರೀಶ್ ಅವರ ಜತೆ 20ಕ್ಕೂ ಹೆಚ್ಚು ಸಿನಿಮಾಗಳನ್ನು ಹಿರಿಯ ನಿರ್ದೇಶಕ ಮಾಡಿದ್ದಾರೆ.
ಪತ್ನಿಗೆ ಅದ್ಭುತ ಗಿಫ್ಟ್ ನೀಡಿದ ಕಿಚ್ಚ ಸುದೀಪ್
ಅಂಬರೀಶ್ ಎ.ಟಿ ರಘು ಅವರಿಗೆ ಸಹಾಯ ಮಾಡುತ್ತಲೇ ಬಂದಿದ್ದರು. ಅಂಬರೀಶ್ ನಿಧನದ ನಂತ್ರ ಚಿತ್ರರಂಗದಿಂದ ಎ.ಟಿ ರಘು ಅವರಿಗೆ ಯಾವುದೇ ಬೆಂಬಲ ಸಿಕ್ಕಿಲ್ಲ. ಇದೀಗ ಸ್ವತಃ ಕಿಚ್ಚ ಸುದೀಪ್ ಕರೆ ಮಾಡಿ , ನಿಮ್ಮ ಜೊತೆಗೆ ನಾನು ಇದ್ದಿನಿ ಅಂದಿದ್ದಾರೆ. ಕಿಚ್ಚನ ಮಾತಿನ ನಂತರ ನಿರ್ದೇಶಕ ನಿಟ್ಟುಸಿರು ಬಿಟ್ಟಿದ್ದಾರೆ.