Asianet Suvarna News Asianet Suvarna News

ನಟಿ ಮಾನ್ವಿತಾ ಕಷ್ಟಕ್ಕೆ ನೆರವಾದ ನಟ ಸೋನು ಸೂದ್

ನಟಿ ಮಾನ್ವಿತಾ ಅವ್ರ ತಾಯಿಗೆ ಕಿಡ್ನಿ ಸಮಸ್ಯೆ ಆಗಿದೆ. ಆದ್ದರಿಂದ ಕಿಡ್ನಿ ಟ್ರಾನ್ಸ್ ಪ್ಲಾಟ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಯ ವೆಚ್ಚ ಬರಿಸಲು ಸಾಧ್ಯವಾಗದೆ ಪರದಾಡುತ್ತಿದ್ದ ಸಂದರ್ಭದಲ್ಲಿ ಸೋನು ಸೂದ್ ಕರೆ ಮಾಡಿ ಸಹಾಯ ಮಾಡಿದ್ದಾರೆ. 

First Published Aug 27, 2022, 12:19 PM IST | Last Updated Aug 27, 2022, 12:19 PM IST

ಕೆಂಡ ಸಂಪಿಗೆ , ಟಗರು ಸಿನಿಮಾ ಮೂಲಕ ಪ್ರೇಕ್ಷಕರನ್ನ ರಂಜಿಸಿದ ನಟಿ ಮಾನ್ವಿತಾ ಫ್ಯಾಮಿಲಿ ಸಮಸ್ಯೆಯಲ್ಲಿ ಸಿಕ್ಕಿಕೊಂಡಿದ್ದಾರೆ. ಕಳೆದ ಒಂದೆರೆಡು ತಿಂಗಳಿಂದ ಸೋಷಿಯಲ್ ಮಿಡಿಯಾದಲ್ಲಿ ತನ್ನ ತಾಯಿಯ ಆರೋಗ್ಯದ ಬಗ್ಗೆ ಪೋಸ್ಟ್ ಹಾಕುತ್ತಿದ್ದ ನಟಿಗೆ ಸಮಸ್ಯೆಯಿಂದ ಹೊರ ಬರಲು ಬಾಲಿವುಡ್ ಸ್ಟಾರ್ ಸಹಾಯ ಸಿಕ್ಕಿದೆ. ಕೋವಿಡ್ ಸಂದರ್ಭದಿಂದಲೂ ತಮ್ಮ ಕೈಲಾದ ಸಹಾಯ ಮಾಡುತ್ತಾ ಬರ್ತಿರೋ ನಟ ಸೋನು ಸೂದ್ ಸದ್ಯ ಮಾನ್ವಿತಾ ಅವ್ರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಚಿಕಿತ್ಸೆಗೆ ಹಣ ಸಹಾಯ ಮಾಡದೇ ಇದ್ದರೂ ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡಿ ಮಾನ್ವಿತಾ ಮೇಲಿದ್ದ ಭಾರವನ್ನ ಕೊಂಚ ಕಡಿಮೆ ಮಾಡಿದ್ದಾರೆ. ನಟಿ ಮಾನ್ವಿತಾ ಅವ್ರ ತಾಯಿಗೆ ಕಿಡ್ನಿ ಸಮಸ್ಯೆ ಆಗಿದೆ. ಆದ್ದರಿಂದ ಕಿಡ್ನಿ ಟ್ರಾನ್ಸ್ ಪ್ಲಾಟ್ ಮಾಡಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಚಿಕಿತ್ಸೆಯ ವೆಚ್ಚ ಬರಿಸಲು ಸಾಧ್ಯವಾಗದೆ ಪರದಾಡುತ್ತಿದ್ದ ಸಂದರ್ಭದಲ್ಲಿ ಸೋನು ಸೂದ್ ಕರೆ ಮಾಡಿ ಸಹಾಯ ಮಾಡಿದ್ದಾರೆ. ಅವ್ರಿಗೆ ತಿಳಿದಿರೋ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಡಿಸ್ಕೌಂಟ್ ಮಾಡಿಸಿ ಎಲ್ಲಿ ಹೇಗೆ ಚಿಕಿತ್ಸೆ ಕೊಡಿಸಬೇಕು ಎಂದು ತಿಳಿಸಿದ್ದಾರೆ. ಈ ಮೂಲಕ ಮಾನ್ವಿತಾ ಲೈಫ್ ನಲ್ಲಿ ರಿಯಲ್ ಹೀರೋ ಆಗಿದ್ದಾರೆ ನಟ ಸೋನು ಸೂದ್.

Video Top Stories