ಅಮೆರಿಕಾದ ಮಿಯಾಮಿಯಲ್ಲಿ ನಡೆದ ಸರ್ಜರಿ; ಯುದ್ದ ಗೆದ್ದ ಕರುನಾಡ ಶಿವ!
ಶಿವಣ್ಣನ ಚಿಕಿತ್ಸೆ ಕಂಪ್ಲೀಟ್ ಆಗೋವರೆಗೂ ಅಭಿಮಾನಿಗಳಿಗೆ ಆತಂಕ ಮನೆಮಾಡಿತ್ತು. ಇಡೀ ನಾಡಿನಾದ್ಯಂತ ಅನೇಕ ದೇಗುಲಗಳಲ್ಲಿ ಶಿವರಾಜ್ಕುಮಾರ್ ಸರ್ಜರಿ ಯಶಸ್ವಿಯಾಗಲಿ ಅಂತ ಪ್ರಾರ್ಥನೆ ಸಲ್ಲಿಸಿ, ಹರಕೆ ಕಟ್ಟಿಕೊಂಡಿದ್ರು. ಅನೇಕರು ಮುಡಿಕೊಟ್ಟು, ಉರುಳು ಸೇವೆ ಮಾಡಿ ಶಿವಣ್ಣನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ರು.
..
ಹೌದು, ಅಭಿಮಾನಿಗಳ ಪ್ರೀತಿಯ ಸೆಂಚ್ಯೂರಿ ಸ್ಟಾರ್.. ದೊಡ್ಮನೆ ದೊಡ್ಮಗ ಶಿವಣ್ಣನ ಸರ್ಜರಿ ಯಶಸ್ವಿಯಾಗಿ ನಡೆದಿದೆ. ಅಮೇರಿಕದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ಗೆ ದಾಖಲಾಗಿದ್ದ ಶಿವಣ್ಣನಿಗೆ ಸತತ 6 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆದಿದ್ದು, ಕ್ಯಾನ್ಸರ್ ತಗುಲಿದ್ದ ಭಾಗವನ್ನ ಆಪರೇಷನ್ ಮಾಡಿ ತೆಗೆದುಹಾಕಲಾಗಿದೆ.
ಶಿವಣ್ಣನ ಚಿಕಿತ್ಸೆ ಕಂಪ್ಲೀಟ್ ಆಗೋವರೆಗೂ ಅಭಿಮಾನಿಗಳಿಗೆ ಆತಂಕ ಮನೆಮಾಡಿತ್ತು. ಇಡೀ ನಾಡಿನಾದ್ಯಂತ ಅನೇಕ ದೇಗುಲಗಳಲ್ಲಿ ಶಿವರಾಜ್ಕುಮಾರ್ ಸರ್ಜರಿ ಯಶಸ್ವಿಯಾಗಲಿ ಅಂತ ಪ್ರಾರ್ಥನೆ ಸಲ್ಲಿಸಿ, ಹರಕೆ ಕಟ್ಟಿಕೊಂಡಿದ್ರು. ಅನೇಕರು ಮುಡಿಕೊಟ್ಟು, ಉರುಳು ಸೇವೆ ಮಾಡಿ ಶಿವಣ್ಣನ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ರು.
ಅಭಿಮಾನಿಗಳ ಈ ಹರಕೆ ಹಾರೈಕೆ ಫಲಿಸಿದೆ. ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ವೈದ್ಯರು ಶಿವಣ್ಣನಿಗಂಟಿದ ಕ್ಯಾನ್ಸರ್ ಮಾರಿಯನ್ನ ಸರ್ಜರಿ ಮೂಲಕ ನಿವಾರಿಸಿದ್ದಾರೆ. ಸರ್ಜರಿ ಬಗ್ಗೆ ಖುದ್ದು ವೈದ್ಯರು ಮಾಹಿತಿ ಹಂಚಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..