Today Horoscope: ಇಂದು ಸಿಂಹ ರಾಶಿಯವರಿಗೆ ಹಣಕಾಸಿನಲ್ಲಿ ನಷ್ಟ..ಶುಕ್ರನಿಂದ ಈ ಎಲ್ಲಾ ರಾಶಿಯವರಿಗೆ ತೊಂದರೆ

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.
 

Share this Video
  • FB
  • Linkdin
  • Whatsapp

ಇಂದಿನ ಪಂಚಾಂಗ ಫಲಗಳು ಹೀಗಿವೆ. ಶ್ರೀ ಶೋಭಾಕೃನ್ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ, ಸೋಮವಾರ,ಷಷ್ಠಿ ತಿಥಿ, ರೇವತಿ ನಕ್ಷತ್ರ.

ಷಷ್ಠಿ ತಿಥಿ ಇರುವುದರಿಂದ ಸುಬ್ರಹ್ಮಣ್ಯ ಸ್ವಾಮಿ ಆರಾಧನೆ ಮಾಡಿ. ಇಷ್ಟು ದಿನ ಶುಕ್ರ ಶತ್ರುವಿನ ಮನೆಯಲ್ಲಿ ಇದ್ದ, ಅಂತಹ ಶುಕ್ರ ಈಗ ಚಂದ್ರನ ಮನೆಯಲ್ಲಿದ್ದಾನೆ. ಶುಕ್ರನಿಂದ ಎಲ್ಲಾ ರಾಶಿಯವರಿಗೂ ಒಂದಲ್ಲ ಒಂದು ರೀತಿಯ ಸ್ವಲ್ಪ ಮಟ್ಟಿನ ತೊಂದರೆಯಾಗುತ್ತದೆ. ಈ ದಿನ ಸಿಂಹ ರಾಶಿಯವರ ವೃತ್ತಿಯಲ್ಲಿ ತೊಂದರೆ ಉಂಟಾಗಲಿದೆ. ವೃತ್ತಿಯ ಸ್ಥಳದಲ್ಲಿ ಎಚ್ಚರವಾಗಿರಿ. ಹಣಕಾಸಿನಲ್ಲಿ ನಷ್ಟವಾಗುವ ಸಾಧ್ಯತೆ ಇದೆ. ಲಲಿತಾ ಪ್ರಾರ್ಥನೆ ಮಾಡಿ. 

ಇದನ್ನೂ ವೀಕ್ಷಿಸಿ: ಕಿಂಗ್‌ ಮೇಕರ್‌ ಕನಸು ಭಗ್ನಗೊಂಡು ಕುಮಾರಸ್ವಾಮಿ ಹತಾಶೆ ಕೂಪದಲ್ಲಿ ವಿಲವಿಲ ಒದ್ದಾಡುತ್ತಿದ್ದಾರೆ: ಕಾಂಗ್ರೆಸ್‌ ಟೀಕೆ

Related Video