ಏನಾಯ್ತು ಶಿವಣ್ಣ? ಮನದಾಳದ ನೋವನ್ನು ಎಂದೂ ತೋರಿಸಿಕೊಳ್ಳದ ದೊಡ್ಮನೆ ಮಗ!

ನಟ ಶಿವರಾಜ್‌ಕುಮಾರ್‌ ಅವರು ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಭೈರತಿ ರಣಗಲ್ ಚಿತ್ರದ ಯಶಸ್ಸಿನ ನಡುವೆಯೇ ಈ ಸುದ್ದಿ ಹೊರಬಿದ್ದಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ.

First Published Nov 18, 2024, 4:12 PM IST | Last Updated Nov 18, 2024, 4:12 PM IST

ನಟ ಶಿವರಾಜ್‌ಕುಮಾರ್‌ ಅವರ ನಟನೆಯ ‘ಭೈರತಿ ರಣಗಲ್‌’  ಬಿಡುಗಡೆಯಾಗಿದ್ದು, ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ.  ಈ ಚಿತ್ರದ  ಮೂಲಕ ತಮ್ಮ 127 ಚಿತ್ರಗಳ ಮೈಲಿಗಲ್ಲನ್ನು ತಲುಪಿದ್ದಾರೆ. ಭೈರತಿ ರಣಗಲ್ ಚಿತ್ರವನ್ನ   ನರ್ತನ್ ನಿರ್ದೇಶಿಸಿದ್ದಾರೆ.ಸದ್ಯ ಶಿವರಾಜ್‌ಕುಮಾರ್‌ ಅವರು ಸದ್ಯ  ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.  ಈಗಾಗಲೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದಾಗಿ ಕನ್‌ಫರ್ಮ್ ಮಾಡಿರುವ ಶಿವರಾಜ್‌ ಕುಮಾರ್‌ ಅವರು,  ನನಗೆ ಅನಾರೋಗ್ಯ ಸಮಸ್ಯೆ ಇರುವಂಥದ್ದು ಮುಚ್ಚಿಡುವ ವಿಷಯ ಏನೂ ಅಲ್ಲ. ಚಿಕಿತ್ಸೆ ಪಡೆದುಕೊಳ್ಳುತ್ತಿದ್ದೇನೆ. ಹಲವು ಹಂತಗಳಲ್ಲಿ ಚಿಕಿತ್ಸೆ ನಡೆಯಲಿದೆ.  ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಅಭಿಮಾನಿಗಳಿಗೆ ಧೈರ್ಯ ತುಂಬಿದ್ದಾರೆ.

ಶಿವಣ್ಣ ಅವರು ಕ್ಯಾನ್ಸರ್ (Cancer) ಖಾಯಿಲೆಗೆ ಸಂಬಂಧಿಸಿ ಚಿಕಿತ್ಸೆ ಸಹ ಪಡೆದುಕೊಳ್ಳುತ್ತಿದ್ದಾರೆ. ಆದರೆ, ಅದನ್ನು ಅನಗತ್ಯವಾಗಿ ಎಲ್ಲೂ ಹೇಳಿಕೊಂಡು ಓಡಾಡುತ್ತಿರಲಿಲ್ಲ. ಆದರೆ, ಇತ್ತೀಚೆಗೆ ಸಂದರ್ಶನವೊಂದರಲ್ಲಿ ನಟ ಶಿವರಾಜ್‌ಕುಮಾರ್ ಅವರು ತಮ್ಮ ಅನಾರೋಗ್ಯ ಹಾಗೂ ಚಿಕಿತ್ಸೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಬಗ್ಗೆ ಮಾತನಾಡಿರುವ ನಟ ಶಿವಣ್ಣ ಅವರು 'ನಾನು ನನ್ನ ಅನಾರೋಗ್ಯವನ್ನು ನನ್ನ ಅಭಿಮಾನಿಗಳು ಸೇರಿದಂತೆ ಯಾರಿಂದಲೂ ಮುಚ್ಚಿಡುವ ಅಗತ್ಯವಿಲ್ಲ. ಆದರೆ, ಯಾರೂ ಅನಾವಶ್ಯಕ ಆತಂಕ ಪಡಬೇಡಿ. ಹೌದು, ಎಲ್ಲರಂತೆ ನಾನು ಕೂಡ ಮನುಷ್ಯ, ನನಗೂ ಅನಾರೋಗ್ಯ ಸಹಜವಾಗಿ ಕಾಡುತ್ತದೆ.  ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದೇನೆ. ಸದ್ಯದಲ್ಲೇ ಟ್ರೀಟ್‌ಮೆಂಟ್‌ಗೆ ಅಮೆರಿಕಾಗೆ ಒಂದು ತಿಂಗಳು ಹೋಗಲಿದ್ದೇನೆ. ಈಗಾಗಲೇ ಚಿಕಿತ್ಸೆಯ ಹಂತಗಳಲ್ಲಿ ಎರಡು ಸೆಷನ್ ಮುಗಿದಿದೆ, ಇನ್ನು ಎರಡು ಸೆಷನ್ ಬಾಕಿ ಇದ್ದು, ಅದಕ್ಕಾಗಿ ಅಮೆರಿಕಾಗೆ ಒಂದು ತಿಂಗಳು ಹೋಗಲಿದ್ದೇನೆ. ಬಳಿಕ ಒಂದು ಸರ್ಜರಿ ಸಹ ಆಗಬೇಕಿದೆ ಎಂದಿದ್ದಾರೆ ವೈದ್ಯರು. ಆದರೆ ಅದನ್ನು ಭಾರತದಲ್ಲಿಯೇ ಪಡೆದುಕೊಳ್ಳಬೇಕೋ ಅಥವಾ ಅಲ್ಲಿ ಅಮೆರಿಕಾದಲ್ಲಿಯೋ ಎಂಬ ಬಗ್ಗೆ ಇನ್ನೂ ಸ್ವಲ್ಪ ಗೊಂದಲವಿದೆ. ಆ ಬಗ್ಗೆ ಸದ್ಯದಲ್ಲೇ ನಿರ್ಧರಿಸಲಾಗುವುದು' ಎಂದಿದ್ದಾರೆ.