
Actor Rishab Shetty: ಮರಾಠಿ ದೊರೆ ಒಂದೇ ಅಲ್ಲ, ಶ್ರೀಕೃಷ್ಣ ದೇವರಾಯರ ಪಾತ್ರದಲ್ಲಿ ನಟ ರಿಷಬ್ ಶೆಟ್ಟಿ
ನಟ ರಿಷಬ್ ಶೆಟ್ಟಿ ಶಿವಾಜಿ ಮಹಾರಾಜರ ಪಾತ್ರ ಮಾಡ್ತಿರೋದನ್ನ ಕೇಳಿ ಕೆಲ ಕನ್ನಡ ಹೋರಾಟಗಾರರ ಕಣ್ಣು ಕೆಂಪಗಾಗಿತ್ತು. ಮರಾಠಿ ದೊರೆಯ ಪಾತ್ರವನ್ನ ಕನ್ನಡಿಗ ರಿಷಬ್ ಯಾಕೆ ಮಾಡಬೇಕು ಅನ್ನೋದು ಅನೇಕರ ಪ್ರಶ್ನೆಯಾಗಿತ್ತು. ಆದ್ರೆ ಈಗ ರಿಷಬ್ ಕನ್ನಡ ನಾಡಿನ ಹೆಮ್ಮೆಯ ದೊರೆ ಶ್ರೀಕೃಷ್ಣ ದೇವರಾಯ ಪಾತ್ರ ಮಾಡ್ತಾರಂತೆ.
ಡಿವೈನ್ ರಿಷಬ್ ಶೆಟ್ಟಿ ಕಾಂತಾರ ಬಳಿಕ ಸಣ್ಣ ಪುಟ್ಟ ಪ್ರಾಜೆಕ್ಟ್ಗಳಿಗೆಲ್ಲಾ ಕೈ ಹಾಕ್ತಾ ಇಲ್ಲ. ಸದ್ಯ ಕಾಂತಾರ ಚಾಪ್ಟರ್-1 ಮುಗಿಸಿ ತೆರೆಗೆ ತರೋದಕ್ಕೆ ರಿಷಬ್ ಸಜ್ಜಾಗಿದ್ದಾರೆ. ರಿಷಬ್ ನಟನೆ ನಿರ್ದೇಶನದಲ್ಲಿ ಸಜ್ಜಾಗಿರೋ ಕಾಂತಾರ ಚಾಪ್ಟರ್ -1 ಇದೇ ಅಕ್ಟೋಬರ್ 2ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದೆ. ಇನ್ನೂ ಕಾಂತಾರ-1 ಬಳಿಕ ರಿಷಬ್ ನಟನೆಯ ಮುಂದಿನ ಪ್ರಾಜೆಕ್ಟ್ಗಳು ಶುರುವಾಗಲಿವೆ. ಟಾಲಿವುಡ್ ಸ್ಟಾರ್ ಡೈರೆಕ್ಟರ್ ಪ್ರಶಾಂತ್ ವರ್ಮಾ ನಿರ್ದೇಶನದಲ್ಲಿ ಬರಲಿರೋ ಸೂಪರ್ ಹೀರೋ ಮೂವಿ ಜೈ ಹನುಮಾನ್ನಲ್ಲಿ ರಿಷಬ್ ಮಿಂಚಲಿದ್ದಾರೆ. ಈ ಚಿತ್ರದಲ್ಲಿ ರಿಷಬ್ ಹನುಮನ ಅವತಾರದಲ್ಲಿ ಕಾಣಿಸಿಕೊಳ್ತಾ ಇದ್ದಾರೆ.