Kantara; ಮಾಂಸಹಾರ ತಿನ್ನದೆ ಚಪ್ಪಲಿ ಬಳಸದೆ ಶೂಟಿಂಗ್ ಮಾಡಿದ್ದೇವೆ- ಪ್ರಭಾಕರ ಕುಂದರ್
ಪ್ರಭಾಕರ ಕುಂದರ್ ಅವರು ಕಾಂತಾರ ಸಿನಿಮಾದಲ್ಲಿ ಮಾಧವ ಆಚಾರಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಗ್ಗೆ ನಟ ಪ್ರಭಾಕರ್ ಮಾತನಾಡಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.
ಪ್ರಭಾಕರ ಕುಂದರ್ ಮಾಧವ ಆಚಾರಿ ಪಾತ್ರದಲ್ಲಿ ನಟಿಸಿದ್ದಾರೆ. ಹಿರಿಯ ರಂಗಭೂಮಿ ಕಲಾವಿದರಾಗಿರುವ ಪ್ರಭಾಕರ್ ಅವರು ಸುಮಾರು ದಶಕಗಳಿಂದ ನಾಟಕಗಳಲ್ಲಿ ಅಭಿನಯಿಸಿ ಅನೇಕ ಕರಾವಳಿ ಭಾಗದ ಚಿತ್ರಗಳಲ್ಲೂ ನಟಿಸಿದ್ದಾರೆ. ಈ ಸಿನಿಮಾದ ಸಕ್ಸಸ್ ಬಗ್ಗೆ ಮಾತನಾಡಿದ ಪ್ರಭಾಕರ್ ಅವರು, ರಿಷಬ್ ಶೆಟ್ಟಿ ತುಂಬಾ ಎನರ್ಜಿ ಹೊಂದಿದ ವ್ಯಕ್ತಿ. ಮಾಂಸಹಾರ ತಿನ್ನದೆ ಚಪ್ಪಲಿ ಬಳಸದೆ ಶೂಟಿಂಗ್ ಮಾಡಿದ್ದೇವೆ. ತುಂಬಾ ಸ್ವಚ್ಛವಾಗಿ ಈ ಸಿನಿಮಾ ಮೂಡಿ ಬಂದಿದೆ. ಎಲ್ಲ ಸ್ಥಳೀಯ ಕಲಾವಿದರನ್ನು ಬಳಸಿಕೊಂಡಿದ್ದಾರೆ. ದೈವಶಕ್ತಿಯಿಂದ ಎಲ್ಲ ಕಲಾವಿದರಿಗೂ ಪರಕಾಯ ಪ್ರವೇಶ ಆಗಿದೆ. ಸಿನಿಮಾ ನೋಡುವಾಗ ಎಲ್ಲರೂ ಮೊಬೈಲ್ ನೋಡ್ತಾ ಇರ್ತಾರೆ. ಆದರೆ ಕಾಂತರಾ ಸಿನಿಮಾ ನೋಡುವಾಗ ಯಾರು ಮೊಬೈಲ್ ನೋಡಲ್ಲ. ನನಗೆ ಇನ್ನು ಯಾವ ಪ್ರಶಸ್ತಿಯೂ ಬೇಡ. ರಿಷಬ್ ಶೆಟ್ಟರು ಕೊಟ್ಟ ಈ ಪಾತ್ರವೇ ನನಗೆ ಪ್ರಶಸ್ತಿ ಎಂದು ಹೇಳಿದರು.