ಬಾಯಿ ತಪ್ಪಿ ಸಹ ನಟನಿಂದ ಡೈಲಾಗ್‌: ಕೊರಗಜ್ಜನ ಸನ್ನಿಧಿಗೆ ಕೋಮಲ್‌ ಭೇಟಿ, ಪ್ರಾರ್ಥನೆ

ಕೊರಗಜ್ಜನ ಸಾನಿಧ್ಯಕ್ಕೆ ಬಂದು ಅವರ ನಾಯಕ ನಟನೆಯ ನೂತನ ಸಿನಿಮಾ "ಕಾಲಾಯ ನಮಃ"ದ ಯಶಸ್ಸಿಗೆ ಪ್ರಾರ್ಥಿಸಿರುವುದಾಗಿ ಸ್ಯಾಂಡಲ್ ವುಡ್ ನಟ ಮಿಸ್ಟರ್ ಗರಗಸ ಖ್ಯಾತಿಯ ಕೋಮಲ್ ಹೇಳಿದ್ದಾರೆ.
 

First Published Oct 30, 2023, 3:28 PM IST | Last Updated Oct 30, 2023, 3:28 PM IST

ಸಿನಿಮಾ ಶೂಟಿಂಗ್ ವೇಳೆ ಸಹನಟನ ಬಾಯಿ ತಪ್ಪಿಂದ ಕೊರಗಜ್ಜನ ಡೈಲಾಗ್(Koragajja Dialogue) ಬಂದಿದ್ದು, ಅದಕ್ಕಾಗಿ ಕೊರಗಜ್ಜನ ಸಾನಿಧ್ಯಕ್ಕೆ ಬಂದು ತನ್ನ ನಾಯಕ ನಟನೆಯ ನೂತನ ಸಿನಿಮಾ "ಕಾಲಾಯ ನಮಃ"ದ(Kalaya Namah movie) ಯಶಸ್ಸಿಗೆ ಪ್ರಾರ್ಥಿಸಿರುವುದಾಗಿ ಸ್ಯಾಂಡಲ್ ವುಡ್ ನಟ ಮಿಸ್ಟರ್ ಗರಗಸ ಖ್ಯಾತಿಯ ಕೋಮಲ್(Komal) ಹೇಳಿದ್ದಾರೆ. ನಟ ಕೋಮಲ್ ಪತ್ನಿ ಅನುಸೂಯ ಜೊತೆ ಮಂಗಳೂರು ಹೊರವಲಯದ ಕಲ್ಲಾಪು, ಬುರ್ದುಗೋಳಿ ಗುಳಿಗ,ಕೊರಗತನಿಯ ಉದ್ಭವ ಶಿಲೆಯ ಆದಿ ಸ್ಥಳಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು."ಕಾಲಾಯ ನಮಃ" ಸಿನೆಮಾ ಶೂಟಿಂಗ್ ಸನ್ನಿವೇಶವೊಂದರಲ್ಲಿ ಸಹ ನಟ ಶೈನ್ ಶೆಟ್ಟಿ(Actor Shine Shetty)ಯವರು ಹೇಯ್ ನಿನಗೆ ಒಳ್ಳೆದಾಯ್ತು ಮಾರಯ ಕೊರಗಜ್ಜನಿಗೆ ಚಕ್ಕುಳಿ, ವೀಳ್ಯ ಇಟ್ಟು ಪ್ರಸಾದ ತಗೊಳ್ಳಬೇಕೆಂದು ಬಾಯಿ ತಪ್ಪಿ ಡೈಲಾಗ್ ಹೇಳಿದ್ದರು. ಶೂಟಿಂಗ್ ಬ್ರೇಕ್ ವೇಳೆ ಶೈನ್ ಶೆಟ್ಟಿ ಅವರಲ್ಲಿ ವಿಚಾರಿಸಿದಾಗ ಕೊರಗಜ್ಜ ದೈವದ ಕಾರಣೀಕದ ಬಗ್ಗೆ ನನಗೆ ವಿವರಿಸಿದ್ದಾರೆ. ಹಾಗಾಗಿ ಸಿನೆಮಾ ಬಿಡುಗಡೆಗೂ ಮುನ್ನ ಕೊರಗಜ್ಜನಲ್ಲಿಗೆ ಬಂದು ಚಿತ್ರದ ಯಶಸ್ಸಿಗೆ ಪ್ರಾರ್ಥಿಸಿರೋದಾಗಿ ಕೋಮಲ್ ಹೇಳಿದರು. ಈಗಾಗಲೇ ನಮೋ ಭೂತಾತ್ಮ2 ಮತ್ತು ಉಂಡೇನಾಮ ಸಿನೆಮಾಗಳು ರಿಲೀಸ್ ಆಗಿ ಯಶಸ್ಸುಗಳಿಸಿದೆ. ಮುಂದೆ ನನ್ನ ನಟನೆಯ ರೊಲ್ಯಾಕ್ಸ್ , ಹುಕುಂ,ವಜ್ರಮುನಿ,ಕೋಣ ಮೊದಲಾದ ಸಿನಿಮಾಗಳು ಚಿತ್ರೀಕರಣಗೊಳ್ಳುತ್ತಿದ್ದು, ಅತೀ ಶೀಘ್ರವೇ ಬಿಡುಗಡೆಗೊಳ್ಳಲಿವೆ ಎಂದರು.

ಇದನ್ನೂ ವೀಕ್ಷಿಸಿ:  ಭಾರತಕ್ಕೂ ಕಾಲಿಡ್ತಾ ‘ಹಮಾಸ್’..? ಹಿಂದೂ ಧರ್ಮದ ವಿರುದ್ಧ ಗುಡುಗಿದನಾ ಖಲೀದ್ ಮಶಾಲ್..?