ಭಾರತಕ್ಕೂ ಕಾಲಿಡ್ತಾ ‘ಹಮಾಸ್’..? ಹಿಂದೂ ಧರ್ಮದ ವಿರುದ್ಧ ಗುಡುಗಿದನಾ ಖಲೀದ್ ಮಶಾಲ್..?

ಉಗ್ರರ ಟಾರ್ಗೆಟ್ ಯಾರು..? ಕ್ರೈಸ್ತರಾ..? ಯಹೂದಿಗಳಾ..?
ಹಿಂದೂ ಧರ್ಮದ ವಿರುದ್ಧ ಗುಡುಗಿದನಾ ಖಲೀದ್ ಮಶಾಲ್..?
ಯಾರು ಗೊತ್ತಾ ಖಲೀದ್ ಮಶಾಲ್..? ಈ ಉಗ್ರನ ಕತೆ ರೋಚಕ

First Published Oct 30, 2023, 2:35 PM IST | Last Updated Oct 30, 2023, 2:35 PM IST

ಕೇರಳದಲ್ಲಿ ಶನಿವಾರ ಪ್ಯಾಲೆಸ್ತೇನಿಯನ್ನರಿಗಾಗಿ ನಡೆದ ಬೆಂಬಲ ಸಭೆ ಮತ್ತು ಇಂದು ಅದೇ ಕೇರಳಲ್ಲಿ(Kerala) ಆದ ಬಾಂಬ್ ಸ್ಫೋಟ(Bomb Blast). ಈ ಎರಡು ಘಟನೆಗಳು ಭಾರತದ ಭದ್ರತಾ ಇಲಾಖೆ ನಿದ್ದೆಗೆಡಿಸಿದೆ. ಭಾರತದಲ್ಲೂ ಹಮಾಸ್(Hamas) ಉಗ್ರ ಸಂಘಟನೆ ಹುಟ್ಟಿಕೊಳ್ತಾ ಎಂಬ ಭಯಾನಕ ಪ್ರಶ್ನೆ ಹುಟ್ಟಿಕೊಂಡಿದೆ. ಜಗತ್ತಿನಲ್ಲಿ ಸದ್ಯ ಹೆಚ್ಚು ಸುದ್ದಿಯಲ್ಲಿರೋದು ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ. ಇಸ್ರೇಲ್(Israel) ಮತ್ತು ಮಹಾಸ್ ಮಧ್ಯೆ ಕಳೆದ 22 ದಿನಗಳಿಂದ ಯುದ್ಧ ಶುರುವಾಗಿದೆ. ಇದೇ ತಿಂಗಳ 7ರಂದು ಹಮಾಸ್ ಉಗ್ರ ಸಂಘಟನೆ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಸುಮಾರು 350 ಇಸ್ರೇಲ್ ಸೈನಿಕರು ಮತ್ತು ಸಾವಿರಕ್ಕೂ ಹೆಚ್ಚಿನ ಇಸ್ರೇಲ್ ಪ್ರಜೆಗಳನ್ನು ಕೊಲೆ ಮಾಡಿದ್ದರು ಹಮಾಸ್ ಉಗ್ರರು. ಹಮಾಸ್ ಉಗ್ರ ದಾಳಿಯಿಂದಾ, ಅದು ಕೇವಲ ಒಂದು ಗಂಟೆ ಸಮಯದಲ್ಲಿ 1400ಕ್ಕೂ ಹೆಚ್ಚಿನ ಪ್ರಾಣ ತೆಗೆದು, 200ಕ್ಕೂ ಹೆಚ್ಚಿನ ಜನರನ್ನು ಒತ್ತೆಯಾಳಾಗಿ ಪಡೆದುಕೊಂಡು ಹೋಗಿದ್ದರು ಹಮಾಸ್ ಉಗ್ರರು. ಇದರ ಪರಿಣಾಮ, ಹಮಾಸ್ ಉಗ್ರರ ಮೇಲೆ ಮೇಲೆ ಕಠೀಣ ದಾಳಿ ಮಾಡಿದ ಇಸ್ರೇಲ್ ಸೇನೆ, ಇಲ್ಲಿವರೆಗೂ ಒಂಭತ್ತು ಸಾವಿರಕ್ಕೂ ಹೆಚ್ಚು ಹಮಾಸ್ ಉಗ್ರರ ಹೆಡೆಮುರಿ ಕಟ್ಟಿದೆ. ಇನ್ನೂ ಇಸ್ರೇಲ್ ದಾಳಿ ನಿಲ್ಲಿಸಿಲ್ಲ, ಪ್ರತಿನಿತ್ಯ ಹಮಾಸ್ ಉಗ್ರರನ್ನು ಜನ್ನತ್ಗೆ ಕಳಿಸುತ್ತಲೇ ಇದೆ. 

ಇದನ್ನೂ ವೀಕ್ಷಿಸಿ:  ಪ್ರವಾಸಕ್ಕೆ ಹೋಗಿದ್ದ 7 ಇಸ್ರೇಲಿಗಳ ಕಗ್ಗೊಲೆ: ಚೀನಾದಲ್ಲಿ ಇಸ್ರೇಲ್ ರಾಯಭಾರ ಉದ್ಯೋಗಿಗೆ ಇರಿತ..!