ತೋತಾಪುರಿ; ಕಾಫಿನಾಡು ಚಂದು ಸ್ಟೈಲ್ ನಲ್ಲಿ ಜಗ್ಗೇಶ್ ಕಾಮಿಡಿ

ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾ ರಿಲಿಸ್ ಗೆ ರೆಡಿಯಾಗಿದೆ. ಬಾಗ್ಲು ತೆಗಿ ಮೆರಿ ಜಾನ್ ಅಂತ ವರ್ಲ್ಡ್ ವೈಡ್ ಸದ್ದು ಮಾಡ್ತಾರೆ ಜಗ್ಗೇಶ್. ಈಗಾಗಲೇ ಟೀಸರ್ ಮೂಲಕ ತುಂಟ ಮಾತುಗಳಿಂದ ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿರೋ ತೋತಾಪುರಿ ಸಿನಿಮಾ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಪ್ರೇಕ್ಷಕರ ಮುಂದೆ ಬರ್ತಿದೆ. 

First Published Sep 7, 2022, 3:39 PM IST | Last Updated Sep 7, 2022, 3:39 PM IST

ನವರಸ ನಾಯಕ ಜಗ್ಗೇಶ್ ಅಭಿನಯದ ತೋತಾಪುರಿ ಸಿನಿಮಾ ರಿಲಿಸ್ ಗೆ ರೆಡಿಯಾಗಿದೆ. ಬಾಗ್ಲು ತೆಗಿ ಮೆರಿ ಜಾನ್ ಅಂತ ವರ್ಲ್ಡ್ ವೈಡ್ ಸದ್ದು ಮಾಡ್ತಾರೆ ಜಗ್ಗೇಶ್. ಈಗಾಗಲೇ ಟೀಸರ್ ಮೂಲಕ ತುಂಟ ಮಾತುಗಳಿಂದ ಪ್ರೇಕ್ಷಕರನ್ನ ಇಂಪ್ರೆಸ್ ಮಾಡಿರೋ ತೋತಾಪುರಿ ಸಿನಿಮಾ ದಸರಾ ಹಬ್ಬದ ಸಂಭ್ರಮ ಹೆಚ್ಚಿಸಲು ಪ್ರೇಕ್ಷಕರ ಮುಂದೆ ಬರ್ತಿದೆ. ಇದೇ ತಿಂಗಳ 30ರಂದು ಚಿತ್ರ ರಿಲೀಸ್ ಆಗ್ತಿದ್ದು ಐದು ಭಾಷೆಯ ಪ್ರೇಕ್ಷಕರನ್ನ ನವರಸಗಳ ಮೂಲಕ ನಕ್ಕು ನಗಿಸಲಿದ್ದಾರೆ ಜಗ್ಗೇಶ್. ತೋತಾಪುರಿ ಸಿನಿಮಾ ಬಗ್ಗೆ ಮಾತನಾಡುತ್ತಲೇ ತಮ್ಮ ಹಳೆ ಸಿನಿಮಾ ಬಗ್ಗೆ ಇಂಟ್ರೆಸ್ಟಿಂಗ್ ವಿಚಾರ ಬಿಚ್ಚಿಟ್ಟರು.  ಸಿನಿಮಾ ಜರ್ನಿ ಸ್ಟಾರ್ಟಿಂಗ್ ನಲ್ಲಿ ಸಿಕ್ಕಾಪಟ್ಟೆ ಹೊಡೆತ ತಿಂದಿದ್ದೇನೆ ಎಂದು ನವರಸನಾಯಕ ಬಹಿರಂಗ ಪಡಿಸಿದರು. ತೋತಾಪುರಿ ಸಿನಿಮಾ ರಿಲೀಸ್ ಆಗುವಷ್ಟರಲ್ಲಿ ಡಾಲಿ ಹಾಗೂ ಅಧಿತಿಗೆ ಮದ್ವೆ ಮಾಡಿಸಬೇಕು ಅಂತ ಮಹೂರ್ತ ಇಟ್ಟಿದ್ದೆ ಆದರೆ ಆಗಿಲ್ಲ ಎಂದು ಹೇಳಿದ್ದಾರೆ.