
ಬದುಕಿನ ಉದ್ದಗಲಕ್ಕೂ ಕಷ್ಟದಲ್ಲೇ ಬೆಳೆದು ನಿಂತ ಕೆಜಿಎಫ್ ಚಾಚ: ಕಿಕ್ ಕೊಟ್ಟ ಹರೀಶ್ ರಾಯ್ ಪಾತ್ರಗಳು ಈಗ ನೆನಪು
ಕೆಜಿಎಫ್ ಚಾಚ ಅಂತಲೇ ಫೇಮಸ್ ಆಗಿದ್ದ ಹರೀಶ್ ರಾಯ್ ಬದುಕಿನ ಒಂದು ಕಿರು ನೋಟ ಇಲ್ಲಿದೆ. ಕೆಜಿಎಫ್ ಸಿನಿಮಾ ಮಾಡಿದ್ದ ದಾಖಲೆಗಳು ಒಂದೆರೆಡಲ್ಲ. ಬಾಕ್ಸಾಫೀಸ್ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ತರಹೇವಾರಿ ಇತಿಹಾಸಗಳನ್ನ ಸೃಷ್ಟಿಸಿಬಿಟ್ಟಿತ್ತು.
ಕನ್ನಡ ಚಿತ್ರರಂಗವನ್ನ ಮತ್ತೊಂದು ಅದ್ಭುತ ಪ್ರತಿಭೆ ಅಗಲಿದೆ. ಶಿವರಾಜ್ ಕುಮಾರ್ ದರ್ಶನ್, ಸುದೀಪ್ ಯಶ್ರಂತಹ ದಿಗ್ಗಜ ನಟರ ಜೊತೆ ಮಿಂಚಿ ಮೆರೆದಿದ್ದ ಹರೀಶ್ ರಾಯ್ ಕ್ಯಾನ್ಸರ್ಗೆ ತನ್ನ 55ನೇ ವಯಸ್ಸಿನಲ್ಲೇ ಬಲಿ ಆಗಿದ್ದಾರೆ. ಕೆಜಿಎಫ್ ಚಾಚ ಅಂತಲೇ ಫೇಮಸ್ ಆಗಿದ್ದ ಹರೀಶ್ ರಾಯ್ ಬದುಕಿನ ಒಂದು ಕಿರು ನೋಟ ಇಲ್ಲಿದೆ. ಕೆಜಿಎಫ್ ಸಿನಿಮಾ ಮಾಡಿದ್ದ ದಾಖಲೆಗಳು ಒಂದೆರೆಡಲ್ಲ. ಬಾಕ್ಸಾಫೀಸ್ ಮಾತ್ರವಲ್ಲ ಭಾರತೀಯ ಚಿತ್ರರಂಗದಲ್ಲಿ ತರಹೇವಾರಿ ಇತಿಹಾಸಗಳನ್ನ ಸೃಷ್ಟಿಸಿಬಿಟ್ಟಿತ್ತು. ಈ ಸಿನಿಮಾದಲ್ಲಿ ನಟಿಸಿದ್ದ ಕಲಾವಿಧರೆಲ್ಲಾ ಹೊಸ ಲೈಫ್ ಕಟ್ಟಿಕೊಳ್ಳೊ ಹಾಗೆ ಮಾಡಿತ್ತು.
ಅಂತವರಲ್ಲೊಬ್ಬರು ಕೆಜಿಎಫ್ನ ಚಾಚ ಅಂತಲೇ ಫೇಮಸ್ ಆದ ಬಹುಭಾಷಾ ನಟ ಕರಾವಳಿಯ ಕಲಾವಿದಹರೀಶ್ ರಾಯ್. ಯೆಸ್.. ಹರೀಶ್ ರಾಯ್ ಇಲ್ಲದೇ ಕೆಜಿಎಫ್ ಸಿನಿಮಾ ಇಲ್ಲ. ಹೇಗೆ ಅನಂತ್ ನಾಗ್ ವೀರಗಲ್ಲು ಕತೆಯನ್ನ ಜಗತ್ತಿಗೆ ತೆರೆದಿಡುತ್ತಾರೋ ಹಾಗೆ ಕೆಜಿಎಫ್ನ ಹೀರೋ.. ಅಲ್ಲ ಅಲ್ಲ ವಿಲನ್ ರಾಕಿಯ ವೈಭವೀಕರಣ ಮಾಡುತ್ತಾ ಅವನ ಆಸೆ ಈಡೇರಿಸೋಕೆ ರಾಕಿ ಬೆನ್ನ ಹಿಂದೆ ನಿಲ್ಲೋ ರೋಲ್ನಲ್ಲಿ ಈ ಕೆಜಿಎಫ್ ಚಾಚ ಮಿಂಚಿದ್ರು. ಅಂದಿನಿಂದ ಹರೀಶ್ ರಾಯ್ ಕೆಜಿಎಫ್ ಚಾಚ ಎಂದೇ ಫೇಮಸ್ ಆದ್ರು. ಆದ್ರೆ ಈಗ ಈ ಚಾಚಾ ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ರೋಗದ ಜೊತೆ ಶಕ್ತಿ ಮೀರಿ ಹೋರಾಡಿ ಉಸಿರು ಚೆಲ್ಲಿದ್ದಾರೆ.
ಕೆಜಿಎಫ್ ಚಾಚ ಈಗ ನೆನಪು ಮಾತ್ರ. ಹರೀಶ್ ರಾಯ್ ಅಂತ್ಯ ಕ್ರೀಯೆ ಹುಟ್ಟೂರಾದ ಉಡುಪಿಯಲ್ಲಿ ಇಂದು ನಡೆಯುತ್ತಿದೆ. ನಟ ಯಶ್ ಕೂಡ ಹರೀಶ್ ರಾಯ್ ಅಂತಿಮ ದರ್ಶನ ಪಡೆದಿದ್ದಾರೆ. ಹರೀಶ್ ರಾಯ್ ಬಣ್ಣದ ಜಗತ್ತಲ್ಲಿ ಏನೆಲ್ಲಾ ಕಷ್ಟ ನೋಡಬೇಕೋ ಎಲ್ಲವನ್ನೂ ಅನುಭವಿಸಿದವರು. ಇವರು ಬದುಕಿನ ಉದ್ದಗಲಕ್ಕೂ ಕಷ್ಟಗಳೇ ಎದುರಾಗಿವೆ. ಆ ಕಲ್ಲು ಮುಳ್ಳಿನ ಹಾದಿಯಲ್ಲಿ ಹರೀಶ್ ರಾಯ್ ಬೆಳೆದು ಹೆಸರು ಮಾಡಿದ್ದೇ ಒಂದು ರೋಚಕ. ಯಾಕಂದ್ರೆ ಸಿನಿಮಾ ಜಗತ್ತಲ್ಲಿ ಹೆಸರು ಮಾಡೋ ಮೊದಲೇ ಕೊಲೆ ಕೇಸ್ನಲ್ಲಿ ಜೈಲು ಸೇರಿದ್ದವರು ಈ ಹರೀಶ್ ರಾಯ್.. ಉಡುಪಿಯವರಾದ ಹರೀಶ್ ರಾಯ್ ಚಿತ್ರರಂಗಕ್ಕೆ ಬರೋ ಮೊದಲೇ ಶಿಕ್ಷಕರೊಬ್ಬರ ಕೊಲೆ ಪ್ರಕರಣದಲ್ಲಿ ಜೈಲು ಸೇರೋ ಹಾಗಾಗಿತ್ತು.
ಆದ್ರೆ ಬೇಲ್ ಮೇಲೆ ಹೊರ ಬಂದಿದ್ದ ಹರೀಶ್ ಓಂ ಸಿನಿಮಾದಲ್ಲಿ ನಟಿಸಿ ದೊಡ್ಡದಾಗಿ ಬೆಳೆದಿದ್ರು, ಕೊಲೆ ಕೇಸ್ ಹರೀಶ್ ರಾಯ್ರನ್ನ ಜೀವಾವಧಿ ಶಿಕ್ಷೆಗೆ ಒಳಗಾಗೋ ಹಾಗೆ ಮಾಡಿತ್ತು. ಆದ್ರೆ ಕೋರ್ಟ್ನಲ್ಲಿ ಆ ಕೇಸ್ ಗೆದ್ದ ಹರೀಶ್ ಕೊಲೆ ಕೇಸ್ನಿಂದ ಮುಕ್ತಿ ಪಡೆದಿದ್ರು. ನಂತ್ರ ನೂರಾರು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ರು. ಹರೀಶ್ ರಾಯ್ 10ನೇ ತರಗತಿ ಓದುವಾಗ ಅಪ್ಪನ ಬಯಕ್ಕೆ ಊರು ಬಿಟ್ಟು ಮುಂಬೈ ಸೇರುತ್ತಾರೆ. ಅಲ್ಲಿ ಭೂಗತ ಜಗತ್ತಿನ ನಂಟು ಬೆಳೆಸಿಕೊಂಡಿದ್ದ ಈ ಚಾಚ ಹಲವು ಕೇಸ್ಗಳಲ್ಲೂ ಫಿಟ್ ಆಗಿದ್ರು, ಕೊನೆಗೆ ಈ ಸಹವಾಸವೇ ಬೇಡ ಅಂತ 1994ರಲ್ಲಿ ಬೆಂಗಳೂರಿಗೆ ವಾಪಸ್ ಬಂದಿದ್ರು. ಅಲ್ಲಿಂದ ಸಿನಿಮಾ ಗೀಳು ಬೆಳೆಸಿಕೊಂಡು ಹೊಸ ಜೀವನ ಕಟ್ಟಿಕೊಂಡಿದ್ರು. ಈ ಕತೆಯನ್ನ ಹರೀಶ್ ರಾಯ್ ಅವರೇ ಹಲವು ಬಾರಿ ಹೇಳಿಕೊಂಡಿದ್ದಾರೆ.
ಇವರ ಜೀವನ ಕಥೆ ಕೆಜಿಎಫ್ ಸಿನಿಮಾದಲ್ಲಿ ಇವರ ಪಾತ್ರಕ್ಕೆ ಟಚ್ ಕೊಡಲಾಗಿದೆ. ಹೆಸರು ಕೀರ್ತಿ, ಹಣ ಎಲ್ಲವೂ ಇದ್ದ ಹರೀಶ್ ರಾಯ್ಗೆ ಮೆಜೆಸ್ಟಿಕ್ , ಓಂ, ಬೆಂಗಳೂರು ಅಂಡರ್ವರ್ಲ್ಡ್, ಜೋಡಿ ಹಕ್ಕಿ, ಮೆಜೆಸ್ಟಿಕ್ ಹೀಗೆ ಹಿಟ್ ಸಿನಿಮಾಗಳಲ್ಲಿ ನಟಿಸಿದವರು. ಆದ್ರೆ ಆರ್ಥಿಕವಾಗಿ ಹರೀಶ್ ರಾಯ್ ಗೆಲ್ಲಲಿಲ್ಲ. ಆಪಾರ್ಟ್ ಮೆಂಟ್ ಒಂದರಲ್ಲಿ ಎರಡು ಬೆಡ್ ರೂಮ್ ಮನೆಯಲ್ಲಿದ್ದ ಈ ಚಾಚ ಕೊನೆ ಕಾಲದಲ್ಲಿ ಕ್ಯಾನ್ಸರ್ ಚಿಕಿತ್ಸೆಗೆ ಹಣವಿಲ್ಲದೇ ಒದ್ದಾಡೋ ಸ್ಥಿತಿ ಬಂದಿತ್ತು. ಆಗ ನಟ ಯಶ್ಮ ಧ್ರುವ ಸರ್ಜಾ ಸೇರಿದಂತೆ ಹಲವರು ನೆರವಿಗೂ ಬಂದಿದ್ದಿದೆ. ಬಟ್ ವಿಧಿ ಬರಹ ಬೇರೆಯೇ ಇದ್ದ ಮೇಲೆ ಏನ್ ಮಾಡೋಕೆ ಆಗುತ್ತೆ. ಹರೀಶ್ ರಾಯ್ ಪ್ರಾಣ ಬಿಟ್ಟಿದ್ದಾರೆ. ಇಂದು ಉಡುಪಿಯಲ್ಲಿ ಅವರ ಅಂತ್ಯಕ್ರೀಯೆ ನಡೆಯಲಿದೆ.