Asianet Suvarna News Asianet Suvarna News

ನಾವು ವಿದ್ಯೆ ಇಲ್ಲದೆ ಹೀರೋ ಆದ್ವಿ, ನೀವು ವಿದ್ಯಾವಂತ ಹೀರೋಗಳಾಗಿ; ದುನಿಯಾ ವಿಜಯ್

ನಟ ದುನಿಯ ವಿಜಯ್ ಮಾತನಾಡಿ ಟ್ರೈಲರ್ ರಿಲೀಸ್ ಈವೆಂಟ್ ತುಂಬ ಭಾವನಾತ್ಮಕವಾಗಿತ್ತು ಎಂದಿದ್ದಾರೆ. ನಮಗೆ ಯಾರು ಗುರು ಇರ್ಲಿಲ್ಲ, ಗುರು ಅನ್ನೋದೆ ಗೊತ್ತಿಲ್ಲ. ಆದರೆ ನಿಮಗೆಲ್ಲ ಗುರು ಸಿಕ್ಕಿದ್ದಾರೆ, ನಿಮಗೆ ಸೋಲಿಲ್ಲ ಎಂದು ಹೇಳಿದರು. 
 

Sep 7, 2022, 1:01 PM IST

ಸ್ಯಾಂಡಲ್‌ವುಡ್‌ನಲ್ಲಿ ಈಗ ಗುರುಶಿಷ್ಯರದ್ದೆ ಹವಾ. ಯಾರದು ಅದು ಅಂತೀರಾ ಗುರು ಶಿಷ್ಯರು ಸಿನಿಮಾದ ಬಗ್ಗೆ ಹೇಳುತ್ತಿರುವುದು. ಹೌದು, ಈ ಸಿನಿಮಾ ಸದ್ಯ ರಿಲೀಸ್ ಗೆ ರೆಡಿಯಾಗಿದೆ. ಈ ಬಾರಿ ಗುರು ಶಿಷ್ಯರಾಗಿ ತೆರೆಮೇಲೆ ಬರ್ತಿದ್ದಾರೆ ಕಾಮಿಡಿ ಅಧ್ಯಕ್ಷ ಶರಣ್. ಸದ್ಯ ಗುರು ಶಿಷ್ಯರು ಸಿನಿಮಾದ ಟ್ರೈಲರ್ ರಿಲೀಸ್ ಮಾಡಲಾಗಿದೆ. ಶಿಕ್ಷಕರ ದಿನಾಚರಣೆ ಅಂಗವಾಗಿ ಬಿಡಗಡೆಯಾದ ಗುರುಶಿಷ್ಯರು ಟ್ರೈಲರ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಕಿಡ್ಸ್ ಕೂಡ ನಟಿಸಿದ್ದಾರೆ. ಶರಣ್ ಜೊತೆ ಪುತ್ರ, ನೆನಪಿರಲಿ ಪ್ರೇಮ್ ಪುತ್ರ, ರವಿಶಂಕರ್ ಪುತ್ರ ಸೇರಿದಂತೆ ಅನೇಕ ಸ್ಟಾರ್ ಕಿಡ್ಸ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಖೋ ಖೋ ಆಟದ ಬಗ್ಗೆ ಇರುವ ಈ ಸಿನಿಮಾ ಈಗಾಗಲೇ ಟ್ರೈಲರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಹೆಚ್ಚಿಸಿದೆ. ಅಂದಹಾಗೆ ಈ ಸಿನಿಮಾದ ಬಗ್ಗೆ ಮಾತನಾಡಿದ ನಟ ದುನಿಯ ವಿಜಯ್ ಟ್ರೈಲರ್ ರಿಲೀಸ್ ಈವೆಂಟ್ ತುಂಬ ಭಾವನಾತ್ಮಕವಾಗಿತ್ತು ಎಂದಿದ್ದಾರೆ. ನಾವು ಅನುಭವಿಸಿದ ಕಷ್ಟ ಮಕ್ಕಳಿಗೆ ಬರುವುದು ಬೇಡ ಎಂದೇ ದೇವರು ಈ ಸಿನಿಮಾ ನೀಡಿದ್ದಾರೆ. ರಿಲೀಸ್ ಆದ್ಮೇಲೆ ಎಲ್ಲರಿಗೂ ಗೊತ್ತಾಗುತ್ತದೆ. ನಮಗೆ ಯಾರು ಗುರು ಇರ್ಲಿಲ್ಲ, ಗುರು ಅನ್ನೋದೆ ಗೊತ್ತಿಲ್ಲ. ಆದರೆ ನಿಮಗೆಲ್ಲ ಗುರು ಸಿಕ್ಕಿದ್ದಾರೆ, ನಿಮಗೆ ಸೋಲಿಲ್ಲ ಎಂದು ಹೇಳಿದರು.