'KD' ಶೂಟಿಂಗ್‌ಗೆ ಬ್ರೇಕ್.. ರಾಘವೇಂದ್ರ ಸ್ವಾಮಿ ಮಠದಲ್ಲಿ ಧ್ರುವ!
KD ಶೂಟಿಂಗ್‌ಗೆ ಬ್ರೇಕ್ ರಾಘವೇಂದ್ರ ಸ್ವಾಮಿ ಮಠದಲ್ಲಿ ಧ್ರುವ
ಮೈಸೂರು ಸುತ್ತ ಮುತ್ತ ನಡೆಯುತ್ತಿದೆ ಕೆಡಿ ಚಿತ್ರೀಕರಣ..!
ನಟ ಧ್ರುವನ ನೋಡಲು ಮುಗಿ ಬಿದ್ದ ರಾಯರ ಭಕ್ತರು..!
ರೆಟ್ರೋ ಅವತರಾರ ತಾಳಿ ನಾನು ಕರಾವ್ ಆಗಿರೋ ಕೆಡಿ ಅಂತ ಹೇಳ್ತಾ 1970 ಕತೆ ಹೇಳೋಕೆ ಹೊರಟಿದ್ದಾರೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ(Actor Dhruva Sarja). ಈ ಧ್ರುವನಿಗೆ ಟಕ್ಕರ್ ಕೊಡೋಕೆ ಬಾಲಿವುಡ್ ಅಧಿರಾ ಕೂಡ ಬಂದಿರೋದು ನಿಮ್ಗೆ ಗೊತ್ತೇ ಇದೆ. ಕೆಡಿ ಶೂಟಿಂಗ್(KD Shooting) ಮೈಸೂರಿನ ಚಾಮುಂಡೇಶ್ವರಿ ತಪ್ಪಲಿನಲ್ಲಿ ನಡೆಯುತ್ತಿದೆ. ಹಳೇ ಮೈಸೂರು ಭಾಗದ ಜಾಗಗಳಲ್ಲೆಲ್ಲಾ ನಟ ಧ್ರುವ ಸರ್ಜಾ ಹಾಗೂ ಅಧಿರ ಅಂಜಯ್ ದತ್ ಸುತ್ತಾಡಿ ಕೆಡಿ ಶೂಟಿಂಗ್ ಮಾಡುತ್ತಿದ್ದಾರೆ. ಈ ಚಿತ್ರೀಕರಣದ ಬಿಡುವಿನ ಮಧ್ಯೆ ಚಾಮುಂಡೇಶ್ವರಿ ತಾಯಿ ಆಶೀರ್ವಾದ ಪಡೆಯೋಕೆ ಕೆಡಿ ಟೀಂ ಚಾಮುಂಡಿ ಬೆಟ್ಟಕ್ಕೆ ಹೋಗಿದ್ರು. ಈಗ ಕೆಡಿ ಶೂಟಿಂಗ್‌ನಿಂದ ಬ್ರೇಕ್ ಪಡೆದಿರೋ ಧ್ರುವ ಸರ್ಜಾ ನಂಜನಗೂಡಿನ ರಾಘವೇಂದ್ರ ಸ್ವಾಮಿ ಮಠಕ್ಕೆ(Raghavendra Swami Mutt) ಭೇಟಿ ನೀಡಿ ಕೆಡಿಗೆ ಒಳ್ಳೆಯದಾಗ್ಲಿ ಅಂತ ರಾಯರ ಆಶೀರ್ವಾದ ಭೇಡಿದ್ದಾರೆ. ಧ್ರುವ ಸರ್ಜಾರನ್ನ ನೋಡೋಕೆ ಮಠದ ಭಕ್ತರು ಮುಗಿ ಬಿದ್ದಿದ್ದು, ಈ ವಿಡಿಯೋ ಎಲ್ಲಡೆ ವೈರಲ್ ಆಗುತ್ತಿದೆ.
ಇದನ್ನೂ ವೀಕ್ಷಿಸಿ: '90 ಹಾಕು ಕಿಟ್ಟಪ್ಪ' ಎನ್ನುತ್ತ ಬಂದ ನಿಧಿಮಾ: ಎಣ್ಣೆ ಹಾಕಿ ಡಾರ್ಲಿಂಗ್ ಕೃಷ್ಣ ಪತ್ನಿ ಫುಲ್ ಟೈಟ್..!