ಅಣ್ಣನ ಮೇಲಿನ ಪ್ರೀತಿಗೆ ಅಮೃತಶಿಲೆಯಿಂದ ಸಮಾಧಿ ಕಟ್ಟಿಸಿದ ಧ್ರುವ ಸರ್ಜಾ...!

ಸ್ಯಾಂಡಲ್‌ವುಡ್ ಯುವ ಸಾಮ್ರಾಟ್ ಚಿರಂಜಿವ ಸರ್ಜಾ ನಿಧನ ಹೊಂದಿ ಎರಡು ವರ್ಷ ಪೂರ್ತಿ ಆಗಿದೆ. 2020ರ ಜೂನ್‌ನಲ್ಲಿ ಕೋವಿಡ್ ಮಹಾಮಾರಿ ಆವರಿಸಿಕೊಂಡಿತ್ತು. ಆಗ ಹೃದಯಾಘಾತದಿಂದ ಉಸಿರು ಚೆಲ್ಲಿದ್ದ ಯಂಗ್ ಹೀರೋ ಚಿರು ಸರ್ಜಾಗೆ ಈಗ ಎರಡನೇ ವರ್ಷದ ಪುಣ್ಯ ಸ್ಮರಣೆ ಮಾಡಲಾಗಿದೆ. 

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್ ಯುವ ಸಾಮ್ರಾಟ್ ಚಿರಂಜಿವ ಸರ್ಜಾ (Chiranjeevi Sarja) ನಿಧನ ಹೊಂದಿ ಎರಡು ವರ್ಷ ಪೂರ್ತಿ ಆಗಿದೆ. 2020ರ ಜೂನ್‌ನಲ್ಲಿ ಕೋವಿಡ್ ಮಹಾಮಾರಿ ಆವರಿಸಿಕೊಂಡಿತ್ತು. ಆಗ ಹೃದಯಾಘಾತದಿಂದ ಉಸಿರು ಚೆಲ್ಲಿದ್ದ ಯಂಗ್ ಹೀರೋ ಚಿರು ಸರ್ಜಾಗೆ ಈಗ ಎರಡನೇ ವರ್ಷದ ಪುಣ್ಯ ಸ್ಮರಣೆ ಮಾಡಲಾಗಿದೆ. ಬೆಂಗಳೂರಿನ ಕನಕಪುರದ ನೆಲಗುಳಿಯ ಬೃಂಧಾವನ ಫಾರ್ಮ್ ಹೌಸ್ನಲ್ಲಿ ಇಡೀ ಸರ್ಜಾ ಕುಟುಂಬ ಸೇರಿ ಎರಡನೇ ವರ್ಷದ ಪುಣ್ಯ ಸ್ಮರಣೆ ಮಾಡಿದ್ದಾರೆ.

ಯಾರೋ ಅವ್ನು ಗ್ಲಾಸ್ ಹಾಕಿರೋದು; ಅರ್ಜುನ್ ಸರ್ಜಾ ಜೊತೆ ರಾಯನ್!

ಸರ್ಜಾ ಕುಟುಂಬ ಸಧಾ ಲವ ಲವಿಕೆಯಿಂದಿರಬೇಕು ಅಂದ್ರೆ ಅಲ್ಲಿ ಚಿರು ಸರ್ಜಾ (Chiru Sarja) ಇದ್ರೆ ಸಾಕಿತ್ತು. ಎಲ್ಲರನ್ನ ನಸಿಸುತ್ತಾ ತಾನೂ ಖುಷಿಯಿಂದ ಇರುತ್ತಿದ್ದ ವ್ಯಕ್ತಿತ್ವ ಚಿರು ಸರ್ಜಾರದ್ದು, ಅದರಲ್ಲೂ ಧ್ರುವ ಸರ್ಜಾಗೆ ಅಣ್ಣ, ಸ್ನೇಹಿತ ಆಗಿದ್ದ ಚಿರು ದೂರಾಗಿದ್ದು, ಧ್ರುವರಿಂದ ಎಂದಿಗೂ ಅರಗಿಸಿಕೊಳ್ಳೋಕೆ ಆಗಲ್ಲ. ಹೀಗಾಗಿ ತನ್ನಣ್ಣನ ಮೇಲಿನ ಪ್ರೀತಿಗೆ ಧ್ರುವ ಸರ್ಜಾ ಬೃಂಧಾವನದಲ್ಲಿರೋ ಚಿರು ಸಮಾಧಿಯನ್ನ ಅಮೃತಶಿಲೆಯಿಂದ ಕಟ್ಟಿಸಿದ್ದಾರೆ. ಈ ಸಮಾಧಿ ಕಲ್ಲಿನ ಮಂಟಪದಂತೆ ಕಾಣುತ್ತೆ. ಸಮಾಧಿಯ ಪಕ್ಕದಲ್ಲಿ ಚಿರು ಹೆಸರಿನ ಕೆತ್ತನೆ ಮಾಡಿದ್ದಾರೆ. 

Related Video