ಮೊದಲ ಸಿನಿಮಾವೇ ರೀಮೇಕ್ ಸಿನಿಮಾ ಏಕೆ? ಸ್ಟ್ರೈಟ್‌ ಸಬ್ಜೆಕ್ಟ್‌ ಯಾಕಿಲ್ಲ?

ಈ ಸಿನಿಮಾದ ಕಥೆ ತುಂಬಾ ಸ್ಟ್ರಾಂಗ್ ಆಗಿತ್ತು. ಕನ್ನಡ ಜನತೆಗೆ ಈ ಚಿತ್ರದ ಕಥೆಯನ್ನ ನಾವು ಯಾವ ಹೇಳೋ ರೀತಿ ಹೇಗಿರುತ್ತೆ ಅನ್ನೋದು ಮುಖ್ಯವಾಗುತ್ತೆ. ಚಿತ್ರದ ಕಥೆ ರಿಮೇಕ್ ಇರಬಹುದು. ಆದರೆ ಚಿತ್ರದ ನಿರ್ದೇಶಕರು, ನಟ, ಆರ್ಟಿಸ್ಟ್ಸ್ ಹಾಗೂ ಟೆಕ್ನಿಷಿಯನ್ಸ್ ಬೇರೆ ಇದ್ದಾರೆ ಎಂದು ಧೀರೆನ್ ತಿಳಿಸಿದ್ದಾರೆ.

First Published Aug 25, 2022, 3:29 PM IST | Last Updated Aug 25, 2022, 3:29 PM IST

ಶಿವ 143 ಚಿತ್ರವು ಆಗಸ್ಟ್ 26ರಂದು‌ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು, ವರನಟ ಡಾ.ರಾಜ್‌ಕುಮಾರ್ ಅವರ ಮೊಮ್ಮಗ, ನಟ ರಾಮ್‌ಕುಮಾರ್ ಪುತ್ರ ಧೀರೇನ್‌ ಚೊಚ್ಚಲ ಬಾರಿಗೆ ಹೀರೋ ಆಗಿ ಲಾಂಚ್ ಆಗುತ್ತಿದ್ದಾರೆ. ಮೊದಲ ಸಿನಿಮಾವೇ ರೀಮೇಕ್ ಸಿನಿಮಾ ಏಕೆ? ಸ್ಟ್ರೈಟ್‌ ಸಬ್ಜೆಕ್ಟ್‌ ಯಾಕಿಲ್ಲ? ಎಂಬ ಪ್ರಶ್ನೆಗೆ ನಟ ಧೀರೆನ್, ಈ ಸಿನಿಮಾದ ಕಥೆ ತುಂಬಾ ಸ್ಟ್ರಾಂಗ್ ಆಗಿತ್ತು. ಕನ್ನಡ ಜನತೆಗೆ ಈ ಚಿತ್ರದ ಕಥೆಯನ್ನ ನಾವು ಯಾವ ಹೇಳೋ ರೀತಿ ಹೇಗಿರುತ್ತೆ ಅನ್ನೋದು ಮುಖ್ಯವಾಗುತ್ತೆ. ಚಿತ್ರದ ಕಥೆ ರಿಮೇಕ್ ಇರಬಹುದು. ಆದರೆ ಚಿತ್ರದ ನಿರ್ದೇಶಕರು, ನಟ, ಆರ್ಟಿಸ್ಟ್ಸ್ ಹಾಗೂ ಟೆಕ್ನಿಷಿಯನ್ಸ್ ಬೇರೆ ಇದ್ದಾರೆ. ಅವರು ಹೇಗೆ ಈ ಚಿತ್ರದ ಲೈನ್‌ನ್ನು ಬೇರೆ ತರಹ ಹೇಳುತ್ತಾರೆ ಅನ್ನೋದನ್ನ ನಾವು ತೆರೆ ಮೇಲೆ ನೋಡಿದಾಗ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ಧೀರೆನ್‌ಗೆ ಜೋಡಿಯಾಗಿ ಮಾನ್ವಿತಾ ಕಾಣಿಸಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment