
'ನಮಗೆ ನಟ ದರ್ಶನ್ ಬೇಡ' ಎಂದ ಬೆಂಗಳೂರು ಪರಪ್ಪನ ಅಗ್ರಹಾರ, ಬಳ್ಳಾರಿ ಜೈಲಿನವರು! ಯಾಕೆ?
ದರ್ಶನ್ನ ಬಳ್ಳಾರಿ ಜೈಲಿಗೆ ಕಳುಹಿಸಬೇಕು ಅಂತ ಸಲ್ಲಿಸಿರೋ ಅರ್ಜಿಯ ವಿಚಾರಣೆ ಕೋರ್ಟ್ನಲ್ಲಿ ನಡೆದಿದೆ. ಕೋರ್ಟ್ನಲ್ಲಿ ನಡೆದ ವಾದ-ಪ್ರತಿವಾದ ನೋಡ್ತಿದ್ರೆ, ದಾಸ ಜೈಲುಗಳಿಗೂ ಬೇಡವಾದನಾ.. ಅನ್ನೋ ಪ್ರಶ್ನೆ ಹುಟ್ತಾ ಇದೆ.
ಈ ನಡುವೆ ದರ್ಶನ್ನ ಬೇರೆ ಜೈಲಿಗೆ ಶಿಫ್ಟ್ ಮಾಡಿಸಿ, ಜೈಲಾಧಿಕಾರಿಗಳು ಪ್ರಶಸ್ತಿ ಪಡೆಯೋದಕ್ಕೆ ಸ್ಕೆಚ್ ಹಾಕಿದ್ದಾರೆ ಅಂತ ದಾಸನ ಪರ ವಕೀಲರು ಆರೋಪ ಮಾಡಿದ್ದಾರೆ. ಅಷ್ಟಕ್ಕೂ ಏನಿದು ದಾಸನ ಜೈಲ್ ರಗಳೆ..? ಇಲ್ಲಿದೆ ನೋಡಿ ಆ ಕುರಿತ ಸ್ಟೋರಿ. ದರ್ಶನ್ ಬೇಲ್ ರದ್ದಾಗಿ ಅರೆಸ್ಟ್ ಆದ ಮೇಲೆ, ಆತನನ್ನ ಮೊದಲಿನಂತೆ ಬಳ್ಳಾರಿಗೆ ಕಳುಹಿಸಬೇಕು ಅಂತ ಪೊಲೀಸರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಬಗ್ಗೆ ದರ್ಶನ್ ಪರ ವಕೀಲರು ಆಕ್ಷೇಪ ಸಲ್ಲಿಸಿದ್ದು ಕೋರ್ಟ್ನಲ್ಲಿ ವಾದ ಪ್ರತಿವಾದ ನಡೆದಿದೆ. ಅಷ್ಟಕ್ಕೂ ದಾಸ ಜೈಲುಗಳಿಗೂ ಬೇಡವಾದನಾ,.? ಅನ್ನೋ ಪ್ರಶ್ನೆ ಹುಟ್ಟಿಕೊಳ್ಳುವಂತೆ ಮಾಡಿದೆ ಈ ವಾದ-ಪ್ರತಿವಾದ.