
Darshan Thoogudeepa: ಚಂದ್ರನಿಗೆ ಹಿಡಿದ ಗ್ರಹಣ ಬಿಟ್ಟಾಯ್ತು, ನಟ ದರ್ಶನ್ಗೆ ಹಿಡಿದಿರುವ ಗ್ರಹಣ ಬಿಡೋದು ಯಾವಾಗ?
ಚಂದ್ರನಿಗೆ ಹಿಡಿದ ಗ್ರಹಣ ಬಿಟ್ಟಿದೆ. ಆದ್ರೆ ದರ್ಶನ್ಗೆ ಹಿಡಿದಿರುವ ಗ್ರಹಣ ಸದ್ಯಕ್ಕಂತೂ ಬಿಡುವ ಸೂಚನೆ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಚಕ್ರವರ್ತಿಯಂತೆ ಮೆರೀತಾ ಇದ್ದ ದರ್ಶನ್, ಪರಪ್ಪನ ಅಗ್ರಹಾರ ಜೈಲಿನಲ್ಲಿ ಬ್ಲಾಂಕೆಟ್, ಬೆಡ್ಶೀಟ್ ಗಾಗಿ ಪರದಾಡುವ ಸ್ಥಿತಿ ಬರುತ್ತೆ ಅಂದ್ರೆ ಅದು ಗ್ರಹಣವೇ ತಾನೆ.
ಈಗಲೇ ಇಷ್ಟು ಪರದಾಡ್ತಾ ಇರೋ ದಾಸನಿಗೆ ಬಳ್ಳಾರಿಗೆ ಶಿಫ್ಟ್ ಆಗೋ ಭೀತಿ ಬೇರೆ ಕಾಡ್ತಿದೆ. ದರ್ಶನ್ ಕನ್ನಡ ಚಿತ್ರರಂಗದಲ್ಲಿ ಈ ತಲೆಮಾರಿನ ಅತ್ಯಂತ ಜನಪ್ರೀಯ ತಾರೆ ಪಟ್ಟ ಪಡೆದಾತ. ಕೋಟಿ ಕೋಟಿ ಅಭಿಮಾನಿಗಳನ್ನ ಸಂಪಾದಿಸಿರೋ ನಟ. ಕೋಟಿ ಕೋಟಿ ಲೆಕ್ಕದಲ್ಲಿ ಸಂಭಾವನೆ ಪಡೆಯೋ ಸಿರಿವಂತ. ಆದ್ರೆ ಈ ಸಿರಿಯನ್ನ ಅನುಭಸಿಸೋ ಯೋಗ ಮಾತ್ರ ದರ್ಶನ್ಗಿಲ್ಲ. ಕಾಟೇರ ಸಿನಿಮಾ ಅಷ್ಟು ದೊಡ್ಡ ಯಶಸ್ಸು ಕಂಡು ವೃತ್ತಿ ಜೀವನದ ಉತ್ತುಂಗದಲ್ಲಿ ಇದ್ದಾಗಲೇ ದಾಸನ ಬದುಕಿಗೆ ಗ್ರಹಣ ಹಿಡಿದುಬಿಟ್ಟಿದೆ.