ಮನೆಗೆ ಮರಳಿದ ಅಪ್ಪ .. ದಚ್ಚು ಪುತ್ರನ ಕಣ್ಣು ತೇವ: ಮಗನ ಹುಟ್ಟುಹಬ್ಬದ ಹೊತ್ತಲ್ಲೇ ದರ್ಶನ್ ರಿಲೀಸ್

ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್‌ ಹಾಗೂ ಆತ್ಮೀಯರೊಂದಿಗೆ ಇಡೀ ದಿನ ಫ್ಲ್ಯಾಟ್‌ನಲ್ಲೇ ಕಾಲ ಕಳೆದರು. ಗುರುವಾರ ಮಗ ವಿನೀಶ್‌ನ ಹುಟ್ಟುಹಬ್ಬ ಇದ್ದ ಹಿನ್ನೆಲೆಯಲ್ಲಿ ಸಂಜೆ ಕುಟುಂಬದ ಸದಸ್ಯರ ಜತೆಗೆ ಕೇಕ್‌ ಕತ್ತರಿಸಿ ಮಗನಿಗೆ ಶುಭ ಹಾರೈಸಿದರು. 
 

Share this Video
  • FB
  • Linkdin
  • Whatsapp

ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ನಟ ದರ್ಶನ್‌ ಪತ್ನಿ ವಿಜಯಲಕ್ಷ್ಮೀ, ಪುತ್ರ ವಿನೀಶ್‌ ಹಾಗೂ ಆತ್ಮೀಯರೊಂದಿಗೆ ಇಡೀ ದಿನ ಫ್ಲ್ಯಾಟ್‌ನಲ್ಲೇ ಕಾಲ ಕಳೆದರು. ಗುರುವಾರ ಮಗ ವಿನೀಶ್‌ನ ಹುಟ್ಟುಹಬ್ಬ ಇದ್ದ ಹಿನ್ನೆಲೆಯಲ್ಲಿ ಸಂಜೆ ಕುಟುಂಬದ ಸದಸ್ಯರ ಜತೆಗೆ ಕೇಕ್‌ ಕತ್ತರಿಸಿ ಮಗನಿಗೆ ಶುಭ ಹಾರೈಸಿದರು. ಮನೆ ಬಳಿ ಸಾಕಷ್ಟು ಅಭಿಮಾನಿಗಳು ಜಮಾಯಿಸಿದ್ದರು. ಆದರೆ, ದರ್ಶನ್‌ ಮಾತ್ರ ಅಪಾರ್ಟ್‌ಮೆಂಟ್‌ ಆವರಣದಿಂದ ಹೊರಗೆ ಬರಲಿಲ್ಲ. ಇನ್ನು ದರ್ಶನ್ ಜೈಲಿನಿಂದ ಹೊರ ಬರುವುದು ಒಂದು ದಿನ ತಡವಾಗಿದ್ದರೂ ಮಗ ವಿನೀಶ್ ಕೊನೆವರೆಗೂ ಒಳಗೊಳಗೆ ಬಿಕ್ಕುತ್ತಿದ್ದ. ಇಷ್ಟು ವರ್ಷಗಳಲ್ಲಿ ಒಂದು ವರ್ಷವೂ ಅಪ್ಪನಿಲ್ಲದೆ ಹುಟ್ಟುಹಬ್ಬ ಆಚರಿಕೊಳ್ಳದ ಜೀವಕ್ಕೆ ಆ ನೋವು ಹೈರಾಣಾಗಿಸುತ್ತಿತ್ತು. ಆದರೆ ಅಕ್ಕರೆಯಿಂದ ಬೆಳೆಸಿದ ಮಗನಿಗೆ ಚಾಮುಂಡವ್ವಾ ಆಶೀರ್ವಾದ ಮಾಡಿಬಿಟ್ಟಳು. ಏನಿದು ದರ್ಶನ್ ಹಾಗೂ ವಿನೀಶ್ ಅನುಬಂಧ? ಮನಕಲಕುವ ಕಥನ ನಿಮ್ಮ ಮುಂದೆ.

Related Video